ದೇಶದ ಅತ್ಯಂತ ಸ್ವಚ್ಛ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸ್ವಚ್ಛ ಸರ್ವೇಕ್ಷಣ ಅವಾರ್ಡ್ಸ್ 2023ಯಲ್ಲಿ ದೇಶದ ಸ್ವಚ್ಛ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಟಾಪ್‌ ಸ್ಥಾನ ಗಳಿಸಿದೆ.

ನವದೆಹಲಿ (ಜ.12): ಕೇಂದ್ರ ಸರ್ಕಾರ ನಡೆಸುವ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ 2023ರ ವರದಿ ಗುರುವಾರ ಪ್ರಕಟವಾಗಿದ್ದು, ಮಹಾರಾಷ್ಟ್ರ ರಾಜ್ಯ ದೇಶದಲ್ಲಿಯೇ ಅತ್ಯಂತ ಸ್ವಚ್ಛ ರಾಜ್ಯ ಎನ್ನುವ ಕಿರ್ತಿಗೆ ಪಾತ್ರವಾಗಿದೆ. ಸ್ವಚ್ಛ ಸರ್ವೇಕ್ಷಣ ಅವಾರ್ಡ್ಸ್‌ 2023ಯನ್ನು ಗುರುವಾರ ಸಾರ್ವಜನಿಕಗೊಳಿಸಲಾಗಿದ್ದು, ಈ ಸಮೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದ ರಾಜ್ಯಗಳ ಲಿಸ್ಟ್‌ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಮಧ್ಯಪ್ರದೇಶಹಾಗೂ ಛತ್ತೀಸ್‌ಗಢ ರಾಜ್ಯಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತ ರಾಜ್ಯಗಳು ಹಾಗೂ ನಗರಗಳಿಗೆ ಪ್ರಶಸ್ತಿ ವಿತರಿಸಿದರು. ಮಾಹಿತಿಯ ಪ್ರಕಾರ 4,447 ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛ ಸಮೀಕ್ಷೆ 2023 ರಲ್ಲಿ ಭಾಗವಹಿಸಿದ್ದವು ಮತ್ತು 12 ಕೋಟಿ ನಾಗರಿಕರ ಪ್ರತಿಕ್ರಿಯೆಗಳನ್ನು ಇದಕ್ಕಾಗಿ ಸ್ವೀಕರಿಸಲಾಗಿದೆ.

ಭಾರತದ ಅತ್ಯಂತ ಸ್ವಚ್ಛ ರಾಜ್ಯಗಳ ಲಿಸ್ಟ್‌
1. ಮಹಾರಾಷ್ಟ್ರ
2. ಮಧ್ಯಪ್ರದೇಶ
3. ಛತ್ತೀಸ್‌ಗಢ
4. ಒಡಿಶಾ
5. ತೆಲಂಗಾಣ
6. ಆಂಧ್ರಪ್ರದೇಶ
7.ಪಂಜಾಬ್‌
8. ಗುಜರಾತ್‌
9. ಉತ್ತರ ಪ್ರದೇಶ
10.ತಮಿಳುನಾಡಿ
11. ಸಿಕ್ಕಿಂ
12. ಕರ್ನಾಟಕ
13. ಗೋವಾ
14. ಹರ್ಯಾಣ
15. ಬಿಹಾರ
16. ಜಾರ್ಖಂಡ್‌
17.ಮಣಿಪುರ
18. ಹಿಮಾಚಲ ಪ್ರದೇಶ
19. ಉತ್ತರಾಖಂಡ
20. ಅಸ್ಸಾಂ
21. ಮೇಘಾಲಯ
22. ತ್ರಿಪುರ
23. ಕೇರಳ
24. ನಾಗಾಲ್ಯಾಂಡ್‌
25. ರಾಜಸ್ಥಾನ
26. ಮಿಜೋರಾಂ
27. ಅರುಣಾಚಲ ಪ್ರದೇಶ