Asianet Suvarna News Asianet Suvarna News

Swachh Bharat Mission: ಪ್ರತಿ ವರ್ಷ 70,000 ಮಕ್ಕಳ ಸಾವು ತಪ್ಪಿಸಿದ ಸ್ವಚ್ಛ ಭಾರತ..!

ಸುಧಾರಿತ ನೈರ್ಮಲ್ಯ ಸೌಲಭ್ಯವು ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ರೂಪಾಂತ ರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಸಂಶೋಧಕ ರನ್ನು ಒಳಗೊಂಡ ತಂಡವು ದೇಶದ 35 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳುಹಾಗೂ 600ಕ್ಕೂ ಹೆಚ್ಚು ಜಿಲ್ಲೆಗಳ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಯನ್ನು ಆಧರಿಸಿ ಅಧ್ಯಯನವರದಿಯೊಂದನ್ನು ಸಿದ್ದಪಡಿಸಿದೆ. 
 

Swachh Bharat Mission that saved 70,000 child deaths every year in India grg
Author
First Published Sep 6, 2024, 9:15 AM IST | Last Updated Sep 6, 2024, 9:29 AM IST

ನವದೆಹಲಿ(ಸೆ.06):  ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರಿಂದ ಭಾರತದಲ್ಲಿ ಪ್ರತಿ ವರ್ಷ 60ರಿಂದ 70 ಸಾವಿರದಷ್ಟು 5 ವರ್ಷದೊಳಗಿನ ಮಕ್ಕಳು ಸಾವಿನಿಂದ ಬಚಾವಾಗುತ್ತಿವೆ ಅಧ್ಯಯನ ಎಂದು ವರದಿ ಯೊಂದು ಹೇಳಿದೆ. ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳೂ ಇದೇ ಮಾದರಿ ಅಳ ವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದೆ.  ಈ ವರದಿಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು, ಸಮರ್ಪಕ ಶೌಚಾಲಯದ ಲಭ್ಯತೆಯು ನವಜಾತ ಶಿಶು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಸುಧಾರಿತ ನೈರ್ಮಲ್ಯ ಸೌಲಭ್ಯವು ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ರೂಪಾಂತ ರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಸಂಶೋಧಕ ರನ್ನು ಒಳಗೊಂಡ ತಂಡವು ದೇಶದ 35 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳುಹಾಗೂ 600ಕ್ಕೂ ಹೆಚ್ಚು ಜಿಲ್ಲೆಗಳ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಯನ್ನು ಆಧರಿಸಿ ಅಧ್ಯಯನವರದಿಯೊಂದನ್ನು ಸಿದ್ದಪಡಿಸಿದೆ. ಈ ವರದಿಯನ್ನು ಬ್ರಿಟನ್‌ನ ವೈಜ್ಞಾನಿಕ ನಿಯತಕಾಲಿಕೆ 'ನೇಚರ್' ಪ್ರಕಟಿಸಿದೆ. ವರದಿಯಲ್ಲೇನಿದೆ?: ಸ್ವಚ್ಛ ಭಾರತ ಯೋಜ ನೆಯು 2014ರಲ್ಲಿ ಜಾರಿಗೆ ಬಂದ ನಂತರ ದೇಶದಲ್ಲಿ ಶೌಚಾಲಯ ನಿರ್ಮಾಣ ಗಮ ನಾರ್ಹ ಪ್ರಮಾಣದಲ್ಲಿ ಏರಿಕೆಯಾಯಿತು. ಸ್ವಚ್ಛ ಭಾರತ ಮಿಷನ್ ಮುನ್ನ ಹಾಗೂ ನಂತರದ ಅವಧಿಗೆ ಹೋಲಿಸಿದರೆ ನವಜಾತ ಶಿಶು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.ಶೌಚಾಲಯಗಳ ಲಭ್ಯತೆಯಿಂದನೈರ್ಮಲ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದ ರೋಗ ರುಜಿನ ಗಳು ಕಡಿಮೆ ಆಗಿ ಪ್ರತಿ ವರ್ಷ ಭಾರತದಲ್ಲಿ ಐದು ವರ್ಷದೊಳಗಿನ 60000ದಿಂದ 70 ಸಾವಿರ ಮಕ್ಕಳ ಸಾವನ್ನು ತಪ್ಪಿಸಿರುವಂತೆ ಕಂಡುಬರುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸ್ವಚ್ಛ ಭಾರತದ ಯೋಜನೆಯಡಿ ಶೌಚಾ ಲಯ ನಿರ್ಮಾಣವಾದಂತೆಲ್ಲಾ ಮಕ್ಕಳ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ. 

ರಿಬ್ಬನ್ ಬಿಚ್ಚಿ ಜೇಬಿನಲ್ಲಿಟ್ಟು ಅಂಚೆ ಚೀಟಿ ಬಿಡುಗಡೆ, ಮೋದಿ ಸ್ವಚ್ಚ ಭಾರತ ನಡೆಗೆ ಭಾರಿ ಮೆಚ್ಚುಗೆ!

ಸ್ವಚ್ಛ ಭಾರತ ಆಂದೋಲನ: 

ಬಯಲು ಬಹಿರ್ದೆಸೆ ಹಾಗೂ ಘನ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ 2014ರ ಅ.2ರಂದು ಸ್ವಚ್ಛ ಭಾರತ ಮಿಷನ್ ಅನ್ನು ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ದೇಶದ ರಸ್ತೆ, ಬೀದಿಗಳನ್ನು ಸ್ವಚ್ಛಗೊಳಿಸುವ ಪ್ರಮುಖ ಉದ್ದೇಶವನ್ನು ಇದು ಹೊಂದಿತ್ತು. ಈ ಯೋಜನೆಯ ಮತ್ತೊಂದು ಗುರಿ ಎಲ್ಲ ಗ್ರಾಮೀಣ ಮನೆಗಳಲ್ಲಿ ಶೌಚಾಲಯ ಸಂಪರ್ಕ ಒದಗಿಸುವ ಮೂಲಕ ಗ್ರಾಮಗ ಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸು ವುದಾಗಿತ್ತು. 2024ರ ಜುಲೈಗೆ ಅನುಗುಣ ವಾಗಿ ಈ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾ ಗಿದೆ. ಇದರಿಂದ 6.3 ಲಕ್ಷ ಗ್ರಾಮಗಳ 50 ಕೋಟಿ ಜನರಿಗೆ ಅನುಕೂಲವಾಗಿದೆ.

ವರದಿಯಲ್ಲಿ ಏನಿದೆ? 

'ಸ್ವಚ್ಛ ಭಾರತ'ದಡಿ 2014ರ ಬಳಿಕ ಭಾರತದಲ್ಲಿ ದೇಶಾದ್ಯಂತ ಶೌಚಾಲಯ ನಿರ್ಮಿಸಲಾಗಿದೆ . ಇದರಿಂದಾಗಿ ಜನರಲ್ಲಿ ರೋಗ ರುಜಿನಗಳು ಹರಡುವುದು ಕಡಿಮೆಯಾಗಿವೆ. ಹೀಗಾಗಿ ದೇಶದಲ್ಲಿ 5 ವರ್ಷದೊಳಗಿನ 60-70 ಸಾವಿರ ಮಕ್ಕಳ ಸಾವು ಪ್ರತಿ ವರ್ಷ ತಪ್ಪುತ್ತಿದೆ. 

Latest Videos
Follow Us:
Download App:
  • android
  • ios