ಕೋಲ್ಕತಾ(ಡಿ.17): ಏಪ್ರಿಲ್‌- ಮೇನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ಭರ್ಜರಿ ಆಘಾತವಾಗಿದೆ. ಕಳೆದ ತಿಂಗಳಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರಭಾವಿ ರಾಜಕಾರಣಿ ಸುವೇಂದು ಅಧಿಕಾರಿ ಅವರು ಬುಧವಾರ ಶಾಸಕ ಸ್ಥಾನವನ್ನೂ ತ್ಯಜಿಸಿದ್ದಾರೆ.

'ಶೂದ್ರರಿಗೆ ಒಂದು ಸಾರಿ ಹೇಳಿದ್ದು ಅರ್ಥವೇ ಆಗಲ್ಲ'

ಒಂದೆರಡು ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವಕ್ಕೂ ಅವರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರದಿಂದ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳುತ್ತಿದ್ದು, ಆ ವೇಳೆ ಅಧಿಕಾರಿ ಅವರು ಬಿಜೆಪಿ ಸೇರುವ ಸಂಭವ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರಕ್ಕೆ ಮಮತಾ ಠಕ್ಕರ್.. ಬರೋದಿಲ್ಲ ಏನಾದ್ರೂ ಮಾಡ್ಕೊಳ್ಳಿ!

ನಂದಿಗ್ರಾಮ ಕ್ಷೇತ್ರದ ಶಾಸಕರಾಗಿರುವ ಅಧಿಕಾರಿ, ನಂದಿಗ್ರಾಮದಲ್ಲಿ 2009ರಲ್ಲಿ ಮಮತಾ ನಡೆಸಿದ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹೋರಾಟದಿಂದಾಗಿಯೇ ಬಂಗಾಳದಲ್ಲಿ ಮಮತಾ ಅಧಿಕಾರಕ್ಕೇರಿದ್ದರು. ಅಧಿಕಾರಿ ಅವರು 40ರಿಂದ 45 ಕ್ಷೇತ್ರಗಳಲ್ಲಿ ಪ್ರಭಾವಿಯಾಗಿದ್ದಾರೆ. ಹೀಗಾಗಿ ಇದು ಮಮತಾಗೆ ಆದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.