ಭೋಪಾಲ್(ಡಿ. 14) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹುಮತ ಸಾಧಿಸಲಿದ್ದು ಹಿಂದು ರಾಜ್ಯ ಸ್ಥಾಪನೆಯಾಗಲಿದೆ ಎಂದು  ಹೇಳಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಮತಾ ಬ್ಯಾನರ್ಜಿ ಮೇಲೆ ವಾಗ್ದಾಳಿ ಮಾಡುವ  ವೇಳೆ ನಾಲಿಗೆ ಹರಿಯಬಿಟ್ಟಿದ್ದಾರೆ. ಅಧಿಕಾರ ಹೋಗುವ ಸಂದರ್ಭ ಎದುರಾಗಿದ್ದು ಮಮತಾ ಹುಚ್ಚರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ವಿಮ ಬಂಗಾಳಲ್ಲಿ ಹಿಂದೂ ರಾಜ್ಯ ಸ್ಥಾಪನೆ ಎಂದ ಸಂಸದೆ

'ಕ್ಷತ್ರಿಯರಿಗೆ  ನೀವು ಕ್ಷತ್ರಿಯರು ಎಂದು ಬೇಸರವಾಗುವುದಿಲ್ಲ,,ಬ್ರಾಹ್ಮಣರಿಗೆ ಬ್ರಾಹ್ಮಣರು ಎಂದರೆ ಬೇಸರವಾಗುವುದಿಲ್ಲ.. ವೈಶ್ಯರಿಗೆ ವೈಶ್ಯರು ಎಂದರೂ  ಬೇಸರ ಮಾಡಿಕೊಳ್ಳುವುದಿಲ್ಲ.. ಆದರೆ ಶುದ್ರರಿಗೆ ನೀವು ಶೂದ್ರರು ಎಂದರೆ ಸಿಟ್ಟುಮಾಡಿಕೊಳ್ಳುತ್ತಾರೆ.. ಏಕೆಂದರೆ ಅವರಿಗೆ ಅದು ಅರ್ಥವಾಗುವುದಿಲ್ಲ'  ಎಂದು  ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು ನಂತರ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು.  ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವೆ ವಾಕ್ ಸಮರವೇ ನಡೆದಿತ್ತು.  ಸಾಧ್ವಿ  ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.