ಭೋಪಾಲ್‌[ಜ.15]: ಬಿಜೆಪಿಯ ವಿವಾದಿತ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಕೆಲ ಸಮಯದ ಹಿಂದೆ ಕಳುಹಿಸಲಾಗಿದ್ದ ಪತ್ರವೊಂದನ್ನು ಸೋಮವಾರ ಅವರ ಸಮ್ಮುಖದಲ್ಲೇ ತೆರೆಯಲಾಗಿದೆ. ಈ ವೇಳೆ ಲಕೋಟೆಯಲ್ಲಿ ಉರ್ದು ಭಾಷೆಯ ಎರಡು ಪುಟಗಳ ಪತ್ರ, ಕೆಲ ದಾಖಲೆಗಳು ಹಾಗೂ ನಿಗೂಢ ಪೌಡರ್‌ ಪತ್ತೆಯಾಗಿದೆ.

ಪೌಡರ್‌ ಯಾವುದಾದರೂ ವಿಷಕಾರಿ ರಾಸಾಯನಿಕ ಇರಬಹುದು ಎಂಬ ಆತಂಕದಲ್ಲಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಡಲಾಗಿದೆ.

ಪ್ರಜ್ಞಾ ಠಾಕೂರ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷವೆಂದರೆ ಲಕೋಟೆಯಲ್ಲಿದ್ದ 2 ಪುಟಗಳ ಉರ್ದು ಭಾಷೆಯ ಪತ್ರವು ಕರ್ನಾಟಕ ನಂಟು ಹೊಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಪತ್ರದ ಅಡಕ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಮಾಲೆಗಾಂವ್ ಸ್ಪೋಟದ ಆರೋಪಿ ಪ್ರಜ್ಞಾ ಠಾಕೂರ್ ಸದಾ ಒಂದಿಲ್ಲೊಂದು ವಿವಾದದಿಂದ ಸದ್ದು ಮಾಡುತ್ತಿರುತ್ತಾರೆ. ಬಿಜೆಪಿಯಿಂದ ಸ್ಪರ್ಧಿಸಿ ಸಂಸದೆಯಾಗಿ ಅಯ್ಕೆಯಾದ ಬಳಿಕವಂತೂ ಗೋಡ್ಸೆ ಸಂಬಂಧ ಅವರು ನೀಡಿದ್ದ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿತ್ತು.