Asianet Suvarna News Asianet Suvarna News

Opposition Meet ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ದೀದಿಗೆ ಶಾಕ್, TMC ಹೊರಗಿಟ್ಟು ವಿರೋಧ ಪಕ್ಷಗಳ ಜೊತೆ ಸೋನಿಯಾ ಸಭೆ!

  • 12 ಸಂಸದರ ಅಮಾನತು ಕ್ರಮದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳ ತಯಾರಿ
  • ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ, ಟಿಎಂಸಿಗೆ ಆಹ್ವಾನವಿಲ್ಲ
  • ಕಾಂಗ್ರೆಸ್ ಟೀಕಿಸಿದ್ದ ಮಮತಾ ಬ್ಯಾನರ್ಜಿ ಹೊರಗಿಟ್ಟು ಕಾಂಗ್ರೆಸ್ ಸಭೆ
Suspension of 12 MPs of Rajya Sabha Sonia Gandhi Holds Opposition Meet without Mamata Banerjee party ckm
Author
Bengaluru, First Published Dec 14, 2021, 9:23 PM IST

ನವದೆಹಲಿ(ಡಿ.14):  ಮುಂದಿನ ಲೋಕಸಭೆಯಲ್ಲಿ(lok sabha election) ಬಿಜೆಪಿ ಮಣಿಸಲು ವಿಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿದೆ. ಆದರೆ ವಿಪಕ್ಷಗಳಲ್ಲಿನ ಬಿರುಕು ಕಾಂಗ್ರೆಸ್‌(Congress) ತಲೆನೋವು ಹೆಚ್ಚಿಸಿದೆ. ಇತ್ತೀಚೆಗೆ UPA ಉಳಿದಿಲ್ಲ ಅನ್ನೋ ಹೇಳಿಕೆ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿಗೆ(Mamata Banerjee) ಇದೀಗ ಕಾಂಗ್ರೆಸ್ ಶಾಕ್ ನೀಡಿದೆ. ಇಂದು(ಡಿ.14) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ವಿರೋಧ ಪಕ್ಷಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಆದರೆ ಈ ಸಭೆಗೆ ಟಿಎಂಸಿ(TMC) ಹಾಗೂ ಮಮತಾ ಬ್ಯಾನರ್ಜಿಗೆ ಆಹ್ವಾನ ನೀಡಿಲ್ಲ.

12 ರಾಜ್ಯಸಭಾ ಸಂಸದರನ್ನು(suspension of 12 MPs) ಅಮಾನತು ರದ್ದುಗೊಳಿಸಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದೀಗ ಮುಂದಿನ ಹೋರಾಟದ ರೂಪುರೇಶೆ ಹಾಗೂ ಮುಂದಿನ ನಿರ್ಧಾರಗಳ ಕುರಿತು ಚರ್ಚಿಸಲು ಸೋನಿಯಾ ಗಾಂಧಿ ವಿರೋಧಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ. ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಡಿಎಂಕೆ, ಶಿವಸೇನೆ , ಜಮ್ಮು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್, ಸಿಪಿಎಂ ಸೇರಿದಂತೆ ಹಲವು ಪಕ್ಷಗಳು ಪಾಲ್ಗೊಂಡಿತ್ತು.

Suspension of 12 Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸಭೆಯಲ್ಲಿ ಪಾಲ್ಗೊಂಡಿದ್ದರು. ಇತರ ಪಕ್ಷದ ಪ್ರಮುಖ ನಾಯಕರಾದ ಶರದ್ ಪವಾರ್, ಸಿಪಿಎಂ ಪಕ್ಷದ ಸಿತಾರಾಂ ಯೆಚೂರಿ, ಎನ್‌ಸಿ ಪಕ್ಷದ ಫಾರುಖ್ ಅಬ್ದುಲ್ಲಾ, ಡಿಎಂಕೆಯ ಟಿಆರ್ ಬಾಲು ಸೇರಿದಂತೆ ಹಲವು  ನಾಯಕರು ಚರ್ಚೆ ನಡೆಸಿದರು. ರಾಜ್ಯಸಭಾ ಚೇರ್ಮೆನ್ ವೆಂಕಯ್ಯ ನಾಯ್ಡು ಬಳಿ ಈ ವಿಚಾರ ಮಾತನಾಡುವಂತೆ ವಿಪಕ್ಷಗಳ ನಾಯಕರು ಶರದ್ ಪವಾರ್‌ಗೆ ಮನವಿ ಮಾಡಿದ್ದಾರೆ. 

ಅಶಿಸ್ತಿನ ವರ್ತನೆ ಕಾರಣ ನೀಡಿ 12 ರಾಜ್ಯಸಭೆ ಸಂಸದರನ್ನು ಅಮಾನತು ಮಾಡಿದೆ. ಈ ನಿರ್ಧಾರ ಸರಿಯಾಗಿಲ್ಲ. ಸಂವಿಧಾನಕ್ಕೆ ವಿರೋಧವಾಗಿದೆ. ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಸಂಸದರು ಕ್ಷಮೆ ಯಾಚಿಸಿಲ್ಲ ಅನ್ನೋ ಕಾರಣ ನೀಡಿ ಅಮಾನತು ನಿರ್ಧಾರವನ್ನು ಹಿಂಪಡೆದಿಲ್ಲ. ಹೀಗಾಗಿ ಈ ಕುರಿತು ರಾಜ್ಯಸಭಾ ಮುಖ್ಯಸ್ಥರ ಜೊತೆ ಮಾತುಕತೆ ಅಗತ್ಯವಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಗದ ಹರಿದು ಸ್ಪೀಕರ್‌ ಪೀಠದತ್ತ ಎಸೆದ ಕಾಂಗ್ರೆಸ್‌ ಸಂಸದರು!

12 ಸಂಸದರ ಅಮಾನತು ನಿರ್ಧಾರ ರದ್ದುಗೊಳಿಸುವವರೆಗೆ ಹೋರಾಟ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಮಾನತುಗೊಂಡಿರುವ ಸಂಸದರು ಕ್ಷಮೆಯಾತಿಸುವ ಪ್ರಸಂಗ ಇಲ್ಲ. ಬದಲಾಗಿ ಈ ರೀತಿಯ ತಪ್ಪು ನಿರ್ಧಾರ ತೆಗೆದುಕೊಂಡು ಅಮಾನತು ಮಾಡಿದ ಕ್ರಮಕ್ಕೆ ಅವರು ಕ್ಷಮೆಯಾಚಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. 

ವೆಂಕಯ್ಯ ನಾಯ್ಡು ಸದನದಲ್ಲಿ ಸುಗಮ ಕಲಾಪಕ್ಕೆ ಆಡಳಿತ ಹಾಗೂ ವಿಪಕ್ಷಗಳು ಅವಕಾಶ ನೀಡಬೇಕು. ಸಮಸ್ಯೆಗಳಿಗೆ ಉತ್ತರ ಸಿಗಬೇಕು, ಜನಸಾಮಾನ್ಯರ ಧ್ವನಿಯಾಗಬೇಕು ಎಂದಿದ್ದರು. ಅಮಾತು ಕುರಿತು ಸದನದ ವಿಪಕ್ಷ ನಾಯಕರಲ್ಲಿ ಚರ್ಚಿಸಲು ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಧೋರಣೆಯಿಂದ ಅಮಾನತು ಹಿಂಪಡೆದಿಲ್ಲ. ಹೀಗಾಗಿ ರಾಜ್ಯಸಭೆ ಚೇರ್ಮೆನ್ ಜೊತೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಶರದ್ ಪವಾರ್‌ಗೆ ನೀಡಲಾಗಿದೆ.

ಮುಂಗಾರು ಅಧಿವೇಶನದ ಕೊನೆಯ ದಿನ ಅಶಿಸ್ತು ತೋರಿ, ರಾಜ್ಯಸಭೆ ನಿಯಮಗಳನ್ನು ಉಲ್ಲಂಘಿಸಿದ 12 ಸಂಸದರನ್ನು ಇಡೀ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಇದೀಗ ಈ ವಿಚಾರ ಕಲಾಪವನ್ನೇ ನುಂಗಿ ಹಾಕುತ್ತಿದೆ. ತಮ್ಮ ವರ್ತನೆ ಬಗ್ಗೆ ಸಂಸದರು ಕ್ಷಮೆ ಕೇಳದಿದ್ದರೆ ಅಮಾನತು ನಿರ್ಧಾರ ವಾಪಸ್ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಚೇರ್ಮೆನ್ ವೆಂಕಯ್ಯ ನಾಯ್ಡು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನು ಅಮಾನತುಗೊಂಡಿರುವ ಸಂಸದರು ಕ್ಷಮೆ ಕೇಳಿದರು ನಿರ್ಧಾರ ಹಿಂಪಡೆಯಲಾಗುವುದು ಎಂದು ಸಂಸದೀಯ ಖಾತೆ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಪಪಡಿಸಿದ್ದಾರೆ. 

Follow Us:
Download App:
  • android
  • ios