ಭಾರತದಲ್ಲಿ ಮೊದಲ ಬಾರಿ ಕೋವಿಡ್ ಕ್ಲಸ್ಟರ್, ಸೋಂಕಿನ ಏರಿಕೆ, ಇಳಿಕೆ ಮೇಲೆ ನಿಗಾ ಇಡುವ ಸಲುವಾಗಿ ಕೊಳಚೆ ನೀರಿ ಮಾದರಿ ಸಂಗ್ರಹಿಸಿ ಅದನ್ನು ವಿಶ್ಲೇಷಿಸಲು ಭಾರತೀಯ ಸಾರ್ಸ್ ಕೋವ್ 2 ಜಿನೋಮಿಕ್ ಒಕ್ಕೂಟ ಪ್ರಯೋಗ ನಡೆಸುತ್ತಿದೆ.
ನವದೆಹಲಿ(ಏ.09): ಕೋವಿಡ್ ಕ್ಲಸ್ಟರ್, ಸೋಂಕಿನ ಏರಿಕೆ, ಇಳಿಕೆ ಮೇಲೆ ನಿಗಾ ಇಡುವ ಸಲುವಾಗಿ ಕೊಳಚೆ ನೀರಿ ಮಾದರಿ ಸಂಗ್ರಹಿಸಿ ಅದನ್ನು ವಿಶ್ಲೇಷಿಸಲು ಭಾರತೀಯ ಸಾರ್ಸ್ ಕೋವ್ 2 ಜಿನೋಮಿಕ್ ಒಕ್ಕೂಟ (ಇನ್‌ಸಾಕಾಗ್) ನಿರ್ಧರಿಸಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಇಂಥ ಪ್ರಯೋಗ ನಡೆದಿದೆಯಾದರೂ, ಭಾರತದಲ್ಲಿ ಮೊದಲ ಬಾರಿಗೆ ಇಂಥ ಪ್ರಯೋಗ ನಡೆಸಲಾಗುತ್ತಿದೆ. ಈ ಹಿಂದೆ ಪೋಲಿಯೋ ಲಸಿಕೆ ಅಭಿಯಾನದ ವೇಳೆ ಇಂಥ ಪ್ರಯೋಗ ನಡೆಸಲಾಗಿತ್ತು.
ಈ ಯೋಜನೆ ಅನ್ವಯ, 15 ರಾಜ್ಯಗಳ 19 ವಿವಿಧ ಸ್ಥಳಗಳಲ್ಲಿನ ಕೊಳಚೆ ನೀರಿನ ಮೇಲೆ ನಿಗಾ ಇಟ್ಟು ಅದರಲ್ಲಿ ಕೊರೋನಾ ವೈರಸ್ ಇರುವಿಕೆಯನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುವುದು ‘ಕೊಳಚೆ ನೀರಿನ ಮೇಲೆ ನಿಗಾ ಇಡುವ ವ್ಯವಸ್ಥೆಯಲ್ಲಿ ನಿಗದಿ ಪಡಿಸಿದ ಪ್ರದೇಶಗಳಿಂದ ಕೊಳಚೆ ನೀರಿನ ಮಾದರಿಯನ್ನು ಸಂಗ್ರಹಿಸಿ, ನೀರಿನಲ್ಲಿ ಕೋವಿಡ್ ವೈರಸ್ ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ. ಇದು ನಿರ್ದಿಷ್ಟಪ್ರದೇಶದಲ್ಲಿರುವ ಜನರಲ್ಲಿ ಹರಡಿರುವ ಕೋವಿಡ್ ಪಾಸಿಟಿವಿಟಿಯ ಪರೋಕ್ಷ ಸೂಚಕವಾಗಿದೆ’ ಎಂದು ಐಸಿಎಂಆರ್-ಎನ್‌ಐವಿ ಪುಣೆಯ ನಿರ್ದೇಶಕಿ ಡಾ. ಪ್ರಿಯಾ ಅಬ್ರಹಾಂ ಮಾಹಿತಿ ನೀಡಿದ್ದಾರೆ.
ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದ್ದರೂ, ನೀರಿನಲ್ಲಿ ಕೋವಿಡ್ ಪತ್ತೆ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ಕಾರಣ ಬಹಳಷ್ಟುಸೋಂಕಿತರು ಯಾವುದೇ ರೋಗ ಲಕ್ಷಣವನ್ನು ಹೊಂದಿರುವುದಿಲ್ಲ. ಹೀಗಾಗಿ ಅವುಗಳ ಮೇಲೆ ನಿಗಾ ಇಡದೇ ಇದ್ದಲ್ಲಿ ಹೊಸ ರೂಪಾಂತರಿ ಹುಟ್ಟಿಕೊಂಡು ಅಪಾಯ ಸೃಷ್ಟಿಸಾಧ್ಯತೆ ಇರುತ್ತದೆ. ಕೊಳಚೆ ನೀರಿನ ಪರೀಕ್ಷೆ ಕೈಗೊಳ್ಳುವ ಮೂಲಕ ಪರಿಸರದಲ್ಲಿ ಕೊರೋನಾ ಇರುವಿಕೆಯ ಬಗ್ಗೆ ನಿಗಾ ಇಡಬಹುದಾಗಿದೆ. ವೈರಸ್‌ನಲ್ಲಿ ಯಾವುದೇ ರೂಪಾಂತರ ಕಂಡುಬಂದರೆ ಅಥವಾ ಜನರಲ್ಲಿ ರೋಗಲಕ್ಷಣ ರಹಿತ ಹೊಸ ರೂಪಾಂತರಿ ಹರಡುತ್ತಿದ್ದರೆ ಈ ಮೂಲಕ ಪತ್ತೆ ಹಚ್ಚಬಹುದಾಗಿದೆ’ ಎಂದು ಕೋವಿಡ್ ಲಸಿಕಾಕರಣದ ತಾಂತ್ರಿಕ ಸಲಹಾ ಸಮಿತಿಯ ಡಾ. ಎನ್.ಕೆ. ಅರೋರಾ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಆರಂಭ
18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಅಥವಾ ಬೂಸ್ಟರ್ ಡೋಸ್ ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಈವರೆಗೆ ಕೇವಲ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ 'ಮುನ್ನೆಚ್ಚರಿಕೆ ಡೋಸ್' ಅಥವಾ ಬೂಸ್ಟರ್ ಶಾಟ್ ಪಡೆಯಲು ಅರ್ಹರಾಗಿದ್ದರು.
ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು
-18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳು ಪೂರೈಸಿದವರಷ್ಟೇ ಈ ಬೂಸ್ಟರ್ ಡೋಸ್‌ಗೆ ಅರ್ಹರಾಗಿರುತ್ತಾರೆ.
Covid Crisis: 12ರಿಂದ 14 ರೊಳಗಿನ 11.46% ಮಕ್ಕಳಿಗಷ್ಟೇ ಕೊರೋನಾ ಲಸಿಕೆ
- ಈ ಸೌಲಭ್ಯವು ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.
- ಮೊದಲ ಮತ್ತು ಎರಡನೇ ಡೋಸ್‌ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60+ ಜನಸಂಖ್ಯೆಗೆ ನೀಡುತ್ತಿರುವ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ. ಅಲ್ಲದೇ ಈ ಅಭಿಯಾನ ಮತ್ತಷ್ದಟು ವೇಗ ಪಡೆದುಕೊಳ್ಳಲಿದೆ.
-‘ಮುನ್ನೆಚ್ಚರಿಕೆ ಡೋಸ್’ ಮೊದಲ ಮತ್ತು ಎರಡನೇ ಡೋಸ್‌ನಂತೆಯೇ ಇರುತ್ತದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕೋವಾಕ್ಸಿನ್ ಪಡೆದವರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದವರಿಗೆ ಕೋವಿಶೀಲ್ಡ್ ಸಿಗುತ್ತದೆ.
- ಇಲ್ಲಿಯವರೆಗೆ, ದೇಶದ ಎಲ್ಲಾ 15+ ಜನಸಂಖ್ಯೆಯಲ್ಲಿ ಸುಮಾರು 96% ಜನರು ಕನಿಷ್ಠ ಒಂದು ಕೋವಿಡ್ -19 ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ ಮತ್ತು 15+ ಜನಸಂಖ್ಯೆಯ ಸುಮಾರು 83% ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.
