ಮೋದಿ ಟೀಕಿಸಲು ಹೋಗಿ ರಾಹುಲ್‌ ಗಾಂಧಿ ಎಡವಟ್ಟು| ಸರೆಂಡರ್‌ ಬದಲು ಸುರೇಂದರ್‌ ಎಂದು ಟ್ವೀಟ್‌!

ನವದೆಹಲಿ(ಜೂ.22): ಭಾರತದ ಭೂ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಒಪ್ಪಿಸಿದ್ದಾರೆ (ಸರೆಂಡರ್‌ ಮಾಡಿದ್ದಾರೆ) ಎಂಬರ್ಥದಲ್ಲಿ ಟೀಕಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಮಾಡಿದ ಟ್ವೀಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ‘ನರೇಂದ್ರ ಮೋದಿ ಅವರು ವಾಸ್ತವವಾಗಿ ಸುರೇಂದರ್‌ (ಸರೆಂಡರ್‌?) ಮೋದಿ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ತಮ್ಮ ಟ್ವೀಟ್‌ ಅನ್ನು ಸಮರ್ಥಿಸಿಕೊಳ್ಳಲು ವಿದೇಶಿ ಮಾಧ್ಯಮವೊಂದರ ವರದಿಯನ್ನು ಟ್ಯಾಗ್‌ ಮಾಡಿದ್ದಾರೆ.

Scroll to load tweet…

ಆದರೆ, ರಾಹುಲ್‌ ಹೇಳಹೊರಟಿದ್ದು ‘ಸರೆಂಡರ್‌’ (Surrender ಎಂತಲೋ ಅಥವಾ ಸುರೇಂದರ್‌ (Surender) ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಕೆ ಮಾಡಿದ್ದಾರೆಯೋ ಎಂಬುದು ಟ್ವಿಟ್ಟರ್‌ನಲ್ಲಿ ಚರ್ಚೆಯಾಗುತ್ತಿದೆ. ಸರೆಂಡರ್‌ ಎಂಬ ಪದದ ಇಂಗ್ಲಿಷ್‌ ಸ್ಪೆಲ್ಲಿಂಗ್‌ನಲ್ಲಿ ಎರಡು ಸಲ ‘ಆರ್‌’ ಬಳಕೆ ಮಾಡಬೇಕು. ಆದರೆ, ಒಂದೇ ಸಲ ‘ಆರ್‌’ ಅಕ್ಷರ ಬಳಕೆಯಿಂದ ಅದು ಹಿಂದಿಯಲ್ಲಿ ಸುರೇಂದರ್‌ ಎಂಬ ಅರ್ಥವನ್ನು ನೀಡುತ್ತದೆ. ಹೀಗಾಗಿ ಕೆಲವು ಮಂದಿ ರಾಹುಲ್‌ ಗಾಂಧಿ ಟ್ವೀಟ್‌ಗೆ ಪ್ರತಿಕ್ರಿಯಿಸಿ ನಿಮ್ಮ ಟ್ವೀಟ್‌ನಲ್ಲಿ ಸ್ಪೆಲ್ಲಿಂಗ್‌ ಸರಿಪಡಿಸಿಕೊಳ್ಳಿ ಎಂದು ಟೀಕಿಸಿದರೆ, ಇನ್ನು ಕೆಲವರು ಈ ಪದವನ್ನು ರಾಹುಲ್‌ ಗಾಂಧಿ ಬೇಕೆಂದೇ ಬಳಸಿದ್ದಾರೆ. ಪದಗಳ ಆಟವನ್ನು ರಾಹುಲ್‌ ಆಡಿದ್ದಾರೆ ಎಂದು ಹೇಳಿದ್ದಾರೆ. ಇದು ಟ್ವೀಟರ್‌ನಲ್ಲಿ ಸಖತ್‌ ಟ್ರೆಂಡ್‌ ಆಗಿದೆ.

ಗಾಯಾಳು ಯೋಧನ ತಂದೆ ವಿಡಿಯೋ ಟ್ವೀಟ್‌ ಮಾಡಿ ರಾಹುಲ್‌ಗೆ ಶಾ ಟಾಂಗ್‌!

Scroll to load tweet…

ಶನಿವಾರ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದ ರಾಹುಲ್‌ ಗಾಂಧಿ, ‘ಚೀನಾ ಭಾರತದ ಭೂಭಾಗವನ್ನು ಆಕ್ರಮಿಸದೇ ಇದ್ದ ಮೇಲೆ ನಮ್ಮ ಸೈನಿಕರನ್ನು ಕೊಂದಿದ್ದೇಕೆ? ಅವರು ಎಲ್ಲಿ ಕೊಲ್ಲಲ್ಪಟ್ಟರು. ಪ್ರಧಾನಿ ಭಾರತದ ಭೂ ಭಾಗವನ್ನು ಚೀನಾಗೆ ಒಪ್ಪಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದರು.