ಓಡಿ ಹೋಗಿದ್ದ ವರನ ತಂದೆ, ವಧು ತಾಯಿ ವಾಪಸ್: ತಿರಸ್ಕಾರದ ವೆಲ್‌ಕಮ್!

ಮಗಳ ಮದುವೆ ಮುನ್ನ ವರನ ಅಪ್ಪನೊಂದಿಗೆ ಪರಾರಿಯಾಗಿದ್ದ ತಾಯಿ ವಾಪಸ್!| ಮಕ್ಕಳ ಮದುವೆ ನಿಶ್ಚಯವಾಗಿದ್ದರೂ ಓಡಿ ಹೋಗಿದ್ದ ತಂದೆ, ತಾಯಿ| ಕಾಲೇಜು ದಿನಗಳಲ್ಲಿ ಪ್ರೀತಿ| ಪೊಲೀಸರೆದುರು ಶರಣಾದ ಜೋಡಿ ಹೇಳಿದ್ದೇನು?

Surat Groom father and bride mother who eloped appear before police

ಸೂರತ್[ಜ.29]: ಗುಜರಾತ್ ನಲ್ಲಿ ತಮ್ಮ ಮಕ್ಕಳ ಮದುವೆಗೂ ಮುನ್ನ ವರನ ಅಪ್ಪ ಹಾಗೂ ವಧುವಿನ ಅಮ್ಮ ಮರಳಿ ಬಂದಿದ್ದಾರೆ. ಈ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ತಮ್ಮ ಮಕ್ಕಳ ಮದುವೆ ಸಿದ್ಧತೆಯಲ್ಲಿದ್ದ ವರನ ತಂದೆ ಸೂರತ್ ನಿವಾಸಿ ಹಿಮ್ಮತ್ ಪಟೇಲ್[43] ಹಾಗೂ ವಧುವಿನ ತಾಯಿ ನೌಸಾರಿಯ ಶೋಭನಾ ರಾವಲ್[42] ಜನವರಿ 10ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಬಳಿಕ ಇವರಿಬ್ಬರೂ ಹಳೆ ಪ್ರೇಮಿಗಳೆಂಬ ವಿಚಾರ ಬಯಲಾಗಿತ್ತು. ಸದ್ಯ ಇವರು ನಾಪತ್ತೆಯಾದ 16 ದಿನಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ 'ಪಟೇಲ್ ಮಗ ಹಾಗೂ ರಾವಲ್ ಮಗಳಿಗೆ ಮುಂದಿನ ತಿಂಗಳು ಮದುವೆ ನಿಶ್ಚಿಯವಾಗಿತ್ತು. ಆದರೆ ಮದುವೆಗೂ ಮುನ್ನ ಜನವರಿ 10ರಂದು ಹಿಮ್ಮತ್ ಪಟೇಲ್ ಮತ್ತು ಶೋಭನಾ ರಾವಲ್ ನಾಪತ್ತೆಯಾಗಿದ್ದರು. ಆದರೆ ಜನವರಿ 26 ರಂದು ಇಬ್ಬರೂ ಕ್ರಮಶಃ ಸೂರತ್ ಹಾಗೂ ನೌರಾಸಿಯಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಈ ನಡುವೆ ಇಬ್ಬರೂ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಉಳಿದುಕೊಂಡಿದ್ದರು' ಎಂದಿದ್ದಾರೆ.

ವರನ ಅಪ್ಪ, ವಧುವಿನ ಅಮ್ಮ ಪರಾರಿ: ನವಜೋಡಿ ಕುಳಿತಿದೆ ಹೌಹಾರಿ!

ಇನ್ನು ಶೋಭನಾ ರಾವಲ್ ಕುರಿತಾಗಿ ಮಾಹಿತಿ ನೀಡಿರುವ ನೌರಾಸಿಯಾ ಪೊಲೀಸ್ ಠಾಣೆಯ ಅಧೀಕ್ಷಕ ಗಿರೀಶ್ ಪಾಂಡ್ಯಾ 'ಶೋಭನಾ ರಾವಲ್ ಗಂಡ ಆಕೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ಆಕೆ ತನ್ನ ತವರು ಮನೆಗೆ ತೆರಳಿದ್ದಾರೆ' ಎಂದಿದ್ದಾರೆ.

ವರನ ತಂದೆ ಟೆಕ್ಸ್‌ಟೈಲ್ ಉದ್ಯಮಿಯಾಗಿದ್ದಾರೆ. ಅಲ್ಲದೇ ಅಮ್ರೇಲಿಯ ರಾಜಕೀಯ ಪಕ್ಷದ ಸದಸ್ಯರೂ ಆಗಿದ್ದಾರೆ. ಅವರಿಗೆ ಕಾಲೇಜು ದಿನಗಳಿಂದಲೇ ವಧುವಿನ ತಾಯಿಯ ಪರಿಚಯವಿತ್ತು. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇನ್ನು ಇವರಿಬ್ಬರ ಕುರಿತು ಮಾಹಿತಿ ನೀಡಿರುವ ಕೆಲ ಆಪ್ತ ಸ್ನೇಹಿತರು ಅವರು ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಷ್ಟರೊಳಗೇ ವಧುವಿನ ತಾಯಿಯ ಮದುವೆ ವರ್ತಮಾನದ ಪತಿಯೊಡನೆ ನಡೆದು ಹೋಯ್ತು ಎಂದಿದ್ದಾರೆ. 

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios