ಮುಂಬೈ(ನ.27): ಎನ್‌ಸಿಪಿ ಹಾಗೂ ಶರದ್ ಪವಾರ್ ಅವರಿಗೆ ಸಡ್ಡು ಹೊಡೆದು ಬಿಜೆಪಿ ಜೊತೆ ಸರ್ಕಾರ ರಚಿಸಿದ್ದ ಅಜಿತ್ ಪವಾರ್ ಇದೀಗ ಮರಳಿ ಎನ್‌ಸಿಪಿ ಗೂಡಿಗೆ ಸೇರಿದ್ದಾರೆ.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿರುವ ಅಜಿತ್ ಪವಾರ್, ಶರದ್ ಪವಾರ್ ನಿರ್ಣಯದ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿದ್ದಾರೆ.

ಇನ್ನು ಬಿಜೆಪಿ ಸಾಂಗತ್ಯ  ತೊರೆದು ಮರಳಿ ಎನ್‌ಸಿಪಿ ಮೂಲ ಬಣ ಸೇರಿದ ಅಜಿತ್ ಪವಾರ್ ಅವರನ್ನು, ಸುಪ್ರಿಯಾ ಸುಳೆ ಆತ್ಮೀಯ ಅಪ್ಪುಗೆಯೊಂದಿಗೆ ಬರಮಾಡಿಕೊಂಡಿದ್ದಾರೆ.

ಬಂಡೆದ್ದ ಅಜಿತ್‌ ಮನವೊಲಿಸಿದ್ದು ಈ ಪತಿ-ಪತ್ನಿ!

ಪಕ್ಷದ ಕಚೇರಿಯಲ್ಲಿ ಅಜಿತ್ ಪವಾರ್ ಅವರನ್ನು ಕಂಡೊಡನೆ 'ಬಾರೋ ಕ್ಷಮಿಸಿದ್ದೀನಿ..' ಎಂದು ಹೇಳುವ ಮೂಲಕ ಸುಪ್ರಿಯಾ ಆತ್ಮೀಯ ಅಪ್ಪುಗೆ ನೀಡಿದರು. ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!
ಈ ವೇಳೆ ಮಾತನಾಡಿದ ಅಜಿತ್ ಪವಾರ್, ನನ್ನನ್ನು ಯಾರೂ ಪಕ್ಷದಿಂದ ಉಚ್ಛಾಟಿಸಿಲ್ಲ, ಹೀಗಾಗಿ ನಾನು ಪಕ್ಷಕ್ಕೆ ಮರಳಿ ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನಾನು ಎನ್‌ಸಿಪಿಯಲ್ಲೇ ಇದ್ದು, ಎನ್‌ಸಿಪಿಯಲ್ಲೇ ಮುಂದುವರೆಯುತ್ತೇನೆ ಎಂದು ಅಜಿತ್ ಸ್ಪಷ್ಟಪಡಿಸಿದರು.

ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವನ ಸ್ವೀಕರಿಸಿದ್ದ ಅಜಿತ್ ಪವಾರ್ ನಡೆಯನ್ನು ಟೀಕಿಸಿದ್ದ ಸುಪ್ರಿಯಾ, ಅಜಿತ್ ಪಕ್ಷ ಹಾಗೂ ಕುಟುಂಬ ಎರಡನ್ನೂ ಒಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಪಕ್ಷ, ಕುಟುಂಬ ಒಡೆದಿದೆ: ಸುಪ್ರಿಯಾ ಸುಳೆ ವಾಟ್ಸಪ್ ಸ್ಟೇಟಸ್!