Asianet Suvarna News Asianet Suvarna News

ಸುಪ್ರೀಂ ನೋಟ್‌ ಬ್ಯಾನ್‌ ತೀರ್ಪು: ಬಿಜೆಪಿ, ಕಾಂಗ್ರೆಸ್ಸಿಗರ ಜಟಾಪಟಿ

ಅಪನಗದೀಕರಣ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಡುವೆ ಕೆಸರೆರಚಾಟ ಪ್ರಾರಂಭವಾಗಿದೆ.

Supreme Note Ban Verdict  BJP, Congress blaming each other akb
Author
First Published Jan 3, 2023, 10:35 AM IST

ದೆಹಲಿ: ಅಪನಗದೀಕರಣ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಡುವೆ ಕೆಸರೆರಚಾಟ ಪ್ರಾರಂಭವಾಗಿದೆ. ನ್ಯಾಯಾಲಯದ ತೀರ್ಪು ಐತಿಹಾಸಿಕ. ಸರ್ಕಾರದ ನಿರ್ಧಾರದ ವಿರುದ್ಧ ಅಭಿಯಾನ ನಡೆಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗ ಕ್ಷಮೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಅಪನಗದೀಕರಣವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಹೇಳುವುದು ತಪ್ಪು. ಆ ನಿರ್ಧಾರದಿಂದ ಆದ ಪರಿಣಾಮಗಳ ಬಗೆಗಿನ ತೀರ್ಪು ಇದಾಗಿಲ್ಲ. ಸರ್ಕಾರಕ್ಕೆ ಇದೊಂದು ಲಘು ಛೀಮಾರಿ ಎಂದು ಹರಿಹಾಯ್ದಿದೆ.

ತೀರ್ಪಿನ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ (BJP leader Ravi Shankar Prasad), ಅಪನಗದೀಕರಣದಿಂದ (demonetisation) ಭಯೋತ್ಪಾದನೆಗೆ ದೊಡ್ಡ ಹೊಡೆತ ಬಿತ್ತು. ಆದಾಯ ತೆರಿಗೆ ಸಂಗ್ರಹ ಹೆಚ್ಚಾಯಿತು. ಆರ್ಥಿಕತೆ ಸ್ವಚ್ಛವಾಯಿತು. ರಾಷ್ಟ್ರೀಯ ಹಿತಾಸಕ್ತಿಯಿಂದ ಕೈಗೊಂಡ ನಿರ್ಧಾರ ಕ್ರಮಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನೋಟು ರದ್ದತಿ ವಿರುದ್ಧ ವಿದೇಶಗಳಲ್ಲೂ ಮಾತನಾಡಿದ್ದ ರಾಹುಲ್‌ ಈಗ ಕ್ಷಮೆ ಕೇಳುತ್ತಾರಾ ಎಂದು ಪ್ರಶ್ನಿಸಿದರು. ತೀರ್ಪಿನ ಬಳಿಕ ಟ್ವೀಟ್‌ ಮಾಡಿದ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ (P.Chidambaram), ಸರ್ಕಾರದ ನಿರ್ಧಾರದ ವಿವೇಕವನ್ನು ಸುಪ್ರೀಂಕೋರ್ಟ್ ಬಹುಮತದಿಂದ ಎತ್ತಿ ಹಿಡಿದಿಲ್ಲ. ಅಪನಗದೀಕರಣ ಮಾಡುವಾಗ ಸರ್ಕಾರ ಹೇಳಿದ್ದ ಉದ್ದೇಶಗಳು ಈಡೇರಿವೆಯೇ ಎಂದೂ ಬಹುಮತದಿಂದ ತಿಳಿಸಿಲ್ಲ. ಅಲ್ಪಮತದ ತೀರ್ಪು ಅಕ್ರಮ ಹಾಗೂ ಅವ್ಯವಹಾರಗಳನ್ನು ಎತ್ತಿ ತೋರಿಸಿದೆ. ಇದು ಸರ್ಕಾರಕ್ಕೆ ಲಘು ಛೀಮಾರಿ. ಇದನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ನೋಟ್‌ ಬ್ಯಾನ್‌ ಉದ್ದೇಶ ಒಳ್ಳೇದು, ಆದ್ರೆ ಕಾನೂನು ಬಾಹಿರ ಎಂದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ಜಡ್ಜ್..!

ಸುಪ್ರೀಂಕೋರ್ಟ್ ಅಪನಗದೀಕರಣದ ನಿರ್ಧಾರ ಪ್ರಕ್ರಿಯೆ ಬಗ್ಗೆ ತೀರ್ಪು ನೀಡಿದೆಯೇ ಹೊರತು ಅಪನಗದೀಕರಣದ ಬಳಿಕ ಆದ ಬೆಳವಣಿಗೆಗಳ ಬಗ್ಗೆ ಅಲ್ಲ. ಅಪನಗದೀಕರಣವನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆ ಎನ್ನುವುದು ಹಾದಿ ತಪ್ಪಿಸುವಂತಹದ್ದು. ಕರೆನ್ಸಿ ವಹಿವಾಟು ಇಳಿಸುವುದು, ನಗದುರಹಿತ ಆರ್ಥಿಕತೆಯತ್ತ ಹೊರಳಿಕೊಳ್ಳುವುದು, ಖೋಟಾ ನೋಟು ನಿಗ್ರಹಿಸುವುದು, ಭಯೋತ್ಪಾದನೆಗೆ ಹಣ ತಪ್ಪಿಸುವುದು, ಕಪ್ಪು ಹಣ ಹೊರಗೆಳೆಯುವುದು ಸೇರಿ ಯಾವುದೇ ಗುರಿಗಳನ್ನೂ ಗಮನಾರ್ಹವಾಗಿ ತಲುಪಿಲ್ಲ ಎಂದು ಕಾಂಗ್ರೆಸ್ಸಿಗ ಜೈರಾಮ್‌ ರಮೇಶ್‌ (Jairam Ramesh) ವಿಶ್ಲೇಷಿಸಿದ್ದಾರೆ.


ಅಪನಗದೀಕರಣ ನಿರ್ಧಾರ ಎತ್ತಿ ಹಿಡಿದು ಸುಪ್ರೀಂಕೋರ್ಟ್ (Supreme Court) ನೀಡಿರುವ ತೀರ್ಪು ಐತಿಹಾಸಿಕ. ವಿದೇಶಗಳಲ್ಲೂ ಈ ನಿರ್ಧಾರದ ವಿರುದ್ಧ ಮಾತನಾಡಿದ್ದ ರಾಹುಲ್‌ ಗಾಂಧಿ ಈಗ ಕ್ಷಮೆ ಕೇಳುತ್ತಾರಾ? ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. ಸರ್ಕಾರದ ನಿರ್ಧಾರ ವಿವೇಕಯುತ ಎಂದು ಬಹುಮತದ ತೀರ್ಪು ಬಂದಿಲ್ಲ. ಸರ್ಕಾರ ಹೇಳಿದ್ದ ಉದ್ದೇಶಗಳೆಲ್ಲಾ ಸಾಕಾರಗೊಂಡಿವೆ ಎಂದು ಬಹುಮತದಿಂದ ತಿಳಿಸಿಲ್ಲ. ಅಲ್ಪಮತದ ತೀರ್ಪಿನಲ್ಲಿ ಅಪನಗದೀಕರಣದ ಅಕ್ರಮ ಎತ್ತಿ ತೋರಿಸಲಾಗಿದೆ. ಇದು ಸರ್ಕಾರಕ್ಕೆ ಕೋರ್ಚ್‌ ಹಾಕಿದ ಲಘು ಛೀಮಾರಿ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ (P. Chidambaram) ಪ್ರತಿಕ್ರಿಯಿಸಿದ್ದಾರೆ.  ನ್ಯಾಯಾಲಯದ ಅಪನಗದೀಕರಣಕ್ಕೆ ಸಂಬಂಧಿಸಿದ ನೀತಿ ನಿರೂಪಣೆ ಪ್ರಕ್ರಿಯೆ ಬಗ್ಗೆ ಗಮನಹರಿಸಿತ್ತು. ಅದರಿಂದಾದ ಪರಿಣಾಮಗಳ ಬಗ್ಗೆ ಅಲ್ಲ. ಹೀಗಾಗಿ ನ್ಯಾಯಾಲಯ ಅಪನಗದೀಕರಣವನ್ನೇ ಎತ್ತಿ ಹಿಡಿದಿದೆ ಎಂದು ಹೇಳುವುದು ಹಾದಿ ತಪ್ಪಿಸುವಂತಹದ್ದು ಎಂದು ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌ (Jairam Ramesh) ಹೇಳಿದ್ದಾರೆ. 

2000 ರೂ. ನೋಟು ಶೀಘ್ರ ಮಾಯ..? ಸಂಸತ್ತಲ್ಲಿ ಬಿಜೆಪಿ ಸಂಸದ ಆಗ್ರಹ

Follow Us:
Download App:
  • android
  • ios