ತಮಿಳುನಾಡಿನ ಅಣ್ಣಾಡಿಎಂಕೆ ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಕದನಕ್ಕೆ ಮಹತ್ತರ ತಿರುವು ಲಭಿಸಿದೆ. ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌)ಗೆ ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.

ನವದೆಹಲಿ: ತಮಿಳುನಾಡಿನ ಅಣ್ಣಾಡಿಎಂಕೆ ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಕದನಕ್ಕೆ ಮಹತ್ತರ ತಿರುವು ಲಭಿಸಿದೆ. ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌)ಗೆ ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ನ್ಯಾಯಾಲಯದ ಈ ನಿರ್ಧಾರದಿಂದ ಅಣ್ಣಾಡಿಎಂಕೆಯಲ್ಲಿ ಇಪಿಎಸ್‌ ಅವರೇ ಪರಮೋಚ್ಚ ನಾಯಕ ಎಂದು ಸಾರಿದಂತಾಗಿದೆ. ಅವರ ವಿರುದ್ಧ ಕಾನೂನು ಸಮರ ಸಾರಿದ್ದ ಮತ್ತೊಬ್ಬ ಮಾಜಿ ಸಿಎಂ ಒ.ಪನ್ನೀರ್‌ಸೆಲ್ವಂ (ಒಪಿಎಸ್‌) ಅವರಿಗೆ ತೀವ್ರ ಹಿನ್ನಡೆಯಾಗಿದೆ.

2022ರ ಜು.11ರಂದು ಅಣ್ಣಾಡಿಎಂಕೆ (AIDMK) ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಪಳನಿಸ್ವಾಮಿ (Palaniswami) ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ, ಪನ್ನೀರ್‌ಸೆಲ್ವಂ (Panneerselvam) ಅವರನ್ನು ಉಚ್ಚಾಟಿಸಲಾಗಿತ್ತು. ಇದರ ವಿರುದ್ಧ ಪನ್ನೀರ್‌ಸೆಲ್ವಂ ಮದ್ರಾಸ್‌ ಹೈಕೋರ್ಟ್ ಮೊರೆ ಹೋಗಿದ್ದರು. ಏಕಸದಸ್ಯ ಪೀಠ ಆ ಸಭೆಯ ನಿರ್ಣಯವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶವನ್ನೇ ರದ್ದುಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟ್ (Supreme Court) ಕೂಡ ಅದನ್ನು ಸರಿ ಎಂದಿದೆ.

ಪಳನಿಸ್ವಾಮಿಯೇ AIADMK ಬಾಸ್‌: ಮದ್ರಾಸ್‌ ಹೈಕೋರ್ಟ್‌ ತೀರ್ಪಿನಿಂದ ಓಪಿಎಸ್‌ಗೆ ಹಿನ್ನೆಡೆ

ಇದರ ಬೆನ್ನಲ್ಲೇ ಎಡಪ್ಪಾಡಿ ಕೆ.ಪಳನಿಸ್ವಾಮಿ (EPS) ಬೆಂಬಲಿಗರಿಂದ ಚೆನ್ನೈನಲ್ಲಿ ಸಂಭ್ರಮಾಚರಣೆ ನಡೆದಿದೆ. ಪಕ್ಷವನ್ನು ಮುಗಿಸಲು ಉದ್ದೇಶಿಸಿದ್ದ ಡಿಎಂಕೆ ಬಿ-ಟೀಂ ಹಾಗೂ ವಂಚಕರ ಮುಖವನ್ನು ಸುಪ್ರೀಂಕೋರ್ಟ್ ಬಯಲು ಮಾಡಿದೆ ಎಂದು ಇದಕ್ಕೆ ಇಪಿಎಸ್‌ ಪ್ರತಿಕ್ರಿಯಿಸಿದ್ದಾರೆ.

ಎಐಎಡಿಎಂಕೆಯಲ್ಲಿ ಬಿರುಕು, ಪನ್ನೀರಸೆಲ್ವಂ ಸೇರಿ ನಾಲ್ವರ ಉಚ್ಚಾಟನೆ, ಪ್ರಧಾನ ಕಚೇರಿ ಸೀಲ್!