Asianet Suvarna News Asianet Suvarna News

Supreme Court ಕಲಾಪಗಳ ನೇರ ಪ್ರಸಾರ ಇಂದಿನಿಂದ ಶುರು

ಸುಪ್ರೀಂಕೋರ್ಟ್‌ ಕಲಾಪ ಇಂದಿನಿಂದ ನೇರಪ್ರಸಾರ ಆರಂಭವಾಗಲಿದ್ದು, ಮೊದಲು ಸಾಂವಿಧಾನಿಕ ಪೀಠದ ಅರ್ಜಿಗಳ ವಿಚಾರಣೆ ಮಾತ್ರ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ. ಇನ್ನು, ತಾತ್ಕಾಲಿಕವಾಗಿ ಯೂಟ್ಯೂಬ್‌ ಮೂಲಕ ಪ್ರಸಾರವಾಗಲಿದ್ದು, ನಂತರ ತನ್ನದೇ ಆದ ಪ್ಲಾಟ್‌ಫಾರ್ಮ್‌ ಮೂಲಕ ಪ್ರಸಾರ ಮಾಡಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿದರು. 

supreme court to livestream proceedings for first time in historic move ash
Author
First Published Sep 27, 2022, 8:12 AM IST

ನವದೆಹಲಿ: ನ್ಯಾಯಾಲಯದ ಕಲಾಪಗಳನ್ನು (Court Proceedings) ನೇರಪ್ರಸಾರ (Live Stream) ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಸುಮಾರು 4 ವರ್ಷಗಳ ಬಳಿಕ, ಸೆಪ್ಟೆಂಬರ್ 27ರ ಸೋಮವಾರದಿಂದ ಸುಪ್ರೀಂಕೋರ್ಟ್‌ನ (Supreme Court) ವಿಚಾರಣೆಯ ನೇರ ಪ್ರಸಾರಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ, ಪ್ರಾರಂಭಿಕ ಹಂತದಲ್ಲಿ ಕೇವಲ ಸಾಂವಿಧಾನಿಕ ಪೀಠದಲ್ಲಿ (Constitution Bench) ವಿಚಾರಣೆಯಾಗುವ ಅರ್ಜಿಗಳ ವಿಚಾರಣೆ ಮಾತ್ರವೇ ಯೂಟ್ಯೂಬ್‌ (You Tube) ಮೂಲಕ ನೇರ ಪ್ರಸಾರ ಮಾಡಲಾಗುವುದು. ಸಾಂವಿಧಾನಿಕ ಮಹತ್ವದ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವುದರಿಂದ ಜನರಿಗೂ ಅವುಗಳ ಕುರಿತು ಅರಿವು ಮೂಡುತ್ತದೆ ಮತ್ತು ವಿಚಾರಣೆಯ ಮಾಹಿತಿಯ ಸಂಗ್ರಹವು ಭವಿಷ್ಯಕ್ಕೆ ಉತ್ತಮ ಸಂಗ್ರಹವೂ ಆಗುತ್ತದೆ. ಹೀಗಾಗಿ ಶೀಘ್ರವೇ ಕಲಾಪ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಇತ್ತೀಚೆಗೆ ಹಿರಿಯ ವಕೀಲೆ (Senior Lawyer) ಇಂದಿರಾ ಜೈಸಿಂಗ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಸಭೆ ಸೇರಿ ಸೆಪ್ಟೆಂಬರ್‌ 27ರಿಂದಲೇ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿದ್ದರು.

ಅದರಂತೆ ಮಂಗಳವಾರ ಸಾಂವಿಧಾನಿಕ ಪೀಠದ ಅರ್ಜಿಯ ವಿಚಾರಣೆ ಪ್ರಸಾರವಾಗಲಿದೆ. ಕಳೆದ ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠದ ವಿಚಾರಣೆಯನ್ನು ಮೊಟ್ಟ ಮೊದಲ ಬಾರಿಗೆ ನೇರಪ್ರಸಾರ ಮಾಡಲಾಗಿತ್ತು. ಆದರೆ ಅದು ಪ್ರಾಯೋಗಿಕವಾಗಿತ್ತು.

ಇದನ್ನು ಓದಿ: Hijab Controversy ಪಿಎಫ್‌ಐನ ಬಹುದೊಡ್ಡ ಪಿತೂರಿ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ

ನೇರ ಪ್ರಸಾರಕ್ಕೆ ಶೀಘ್ರ ಪ್ರತ್ಯೇಕ ವ್ಯವಸ್ಥೆ:
ಈ ನಡುವೆ ಯುಟ್ಯೂಬ್‌ನಲ್ಲಿ ಪ್ರಸಾರವಾಗುವ ನ್ಯಾಯಾಲಯದ ಕಲಾಪದ ಮೇಲಿನ ಹಕ್ಕುಸ್ವಾಮ್ಯ ಯುಟ್ಯೂಬ್‌ಗೆ ಹೋಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎನ್‌.ಗೋಂವಿದಾಚಾರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ತಾತ್ಕಾಲಿಕ ವ್ಯವಸ್ಥೆ. ಮುಂದೆ ನ್ಯಾಯಾಲಯದ ಕಲಾಪ ನೇರ ಪ್ರಸಾರಕ್ಕೆ ನಾವು ನಮ್ಮದೇ ಆದ ಪ್ರತ್ಯೇಕ ವ್ಯವಸ್ಥೆ ರೂಪಿಸಿಕೊಳ್ಳಲಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ ನ್ಯಾಯಪೀಠ ಸೋಮವಾರ ಹೇಳಿತು.
ತನ್ನ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ತನ್ನದೇ ಆದ "ಪ್ಲಾಟ್‌ಫಾರ್ಮ್" ಅನ್ನು ಹೊಂದಿರುತ್ತದೆ ಮತ್ತು ಯೂಟ್ಯೂಬ್ ಬಳಕೆ ತಾತ್ಕಾಲಿಕವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಬಿಜೆಪಿಯ ಮಾಜಿ ನಾಯಕ ಕೆ.ಎನ್. ಸುಪ್ರೀಂ ಕೋರ್ಟ್ ಕಲಾಪಗಳ ಹಕ್ಕು ಸ್ವಾಮ್ಯವನ್ನು ಯೂಟ್ಯೂಬ್‌ನಂತಹ ಖಾಸಗಿ ವೇದಿಕೆಗಳಿಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಗೋವಿಂದಾಚಾರ್ಯ ಅವರ ವಕೀಲರು ವಾದಿಸಿದರು. 

"YouTube ವೆಬ್‌ಕಾಸ್ಟ್‌ನಲ್ಲಿ ಹಕ್ಕು ಸ್ವಾಮ್ಯವನ್ನು ಸ್ಪಷ್ಟವಾಗಿ ಕೇಳಿದೆ" ಎಂದು ವಕೀಲ ವಿರಾಗ್ ಗುಪ್ತಾ ಅವರು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಇದಕ್ಕೆ ಉತ್ತರ ನೀಡಿದ ಸುಪ್ರೀಂಕೋರ್ಟ್‌ ಸಿಜೆಐ "ಇವು ಆರಂಭಿಕ ಹಂತಗಳು. ನಾವು ಖಂಡಿತವಾಗಿಯೂ ನಮ್ಮದೇ ಆದ ವೇದಿಕೆಗಳನ್ನು ಹೊಂದುತ್ತೇವೆ. ಅದನ್ನು (ಹಕ್ಕುಸ್ವಾಮ್ಯ ಸಮಸ್ಯೆ) ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು ಮತ್ತು ಗೋವಿಂದಾಚಾರ್ಯರ ಮಧ್ಯಂತರ ಮನವಿಯನ್ನುಅಕ್ಟೋಬರ್ 17 ರಂದು ವಿಚಾರಣೆಗೆ ಪಟ್ಟಿ ಮಾಡಿದರು. 2018 ರ ತೀರ್ಪನ್ನು ಉಲ್ಲೇಖಿಸಿದ ವಕೀಲರು "ಈ ನ್ಯಾಯಾಲಯದಲ್ಲಿ ರೆಕಾರ್ಡ್ ಮಾಡಿದ ಮತ್ತು ಪ್ರಸಾರವಾದ ಎಲ್ಲಾ ವಸ್ತುಗಳ ಮೇಲಿನ ಹಕ್ಕು ಸ್ವಾಮ್ಯವು ಈ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ" ಎಂದು ಹೇಳಿದರು. ಹಾಗೂ, ವಕೀಲರು YouTube ಬಳಕೆಯ ನಿಯಮಗಳನ್ನು ಉಲ್ಲೇಖಿಸಿದರು ಮತ್ತು ಈ ಖಾಸಗಿ ವೇದಿಕೆಯು ಹಕ್ಕು ಸ್ವಾಮ್ಯವನ್ನು ಸಹ ಪಡೆಯುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಗಲ್ಲುಶಿಕ್ಷೆ ವಿನಾಯ್ತಿ ಅಂಶಗಳ ಕುರಿತ ಅರ್ಜಿ ಸಂವಿಧಾನ ಪೀಠಕ್ಕೆ: Supreme Court

Follow Us:
Download App:
  • android
  • ios