ನವದೆಹಲಿ[ಮಾ.19]: ಅತ್ಯಪರೂದಪ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ತನ್ನ ಪರಮಾಧಿಕಾರ ಬಳಸಿ ಮಣಿಪುರ ಬಿಜೆಪಿ ಸರ್ಕಾರದ ಸಚಿವನನ್ನು ಅಮಾನತು ಮಾಡಿದೆ.

ಸಂವಿಧಾನದ 142 ಪರಿಚ್ಛೇದದನ್ವಯ ಇರುವ ವಿಶೇಷಾಧಿಕಾರವನ್ನು ಬಳಸಿ, ಅರಣ್ಯ ಸಚಿವ ಶ್ಯಾಮ್‌ ಕುಮಾರ್‌ರನ್ನು ಮುಂದಿನ ಆದೇಶದ ವರೆಗೆ ಅಮಾನತು ಮಾಡಿದೆ.

2017ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಶ್ಯಾಮ್‌ ಕುಮಾರ್‌ ಬಳಿಕ ಬಿಜೆಪಿ ಸೇರಿ ಮಂತ್ರಿಯಾಗಿದ್ದರು. ಏತನ್ಮಧ್ಯೆ ಅವರನ್ನು ಅನರ್ಹ ಮಾಡಬೇಕು ಎಂದು ಕೋರಿ ಕಾಂಗ್ರೆಸ್‌ ಸ್ಪೀಕರ್‌ಗೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗದೇ ಉಳಿದಿದೆ. ಹಾಗಾಗಿ ಸುಪ್ರೀಂ, ಶ್ಯಾಮ್‌ ಕುಮಾರ್‌ಗೆ ವಿಧಾನಸಭೆ ಪ್ರವೇಶ ನಿಷೇಧ ಹಾಗೂ ಸಚಿವ ಸ್ಥಾನದಿಂದ ಅಮಾನತು ಮಾಡಿದೆ.