ನವ​ದೆ​ಹ​ಲಿ (ಮಾ.05): ಪ್ರಸ್ತುತ ಒಟಿ​ಟಿ ವೇದಿ​ಕೆ​ಯಲ್ಲಿ ಅಶ್ಲೀಲ ಅಂಶ​ಗ​ಳನ್ನು ಒಳ​ಗೊಂಡಿ​ರುವ ವಿಡಿ​ಯೋ​ ಶೋಗಳು ಪ್ರಸಾ​ರ​ವಾ​ಗು​ತ್ತಿದ್ದು, ಇಂಥ ಕಾರ್ಯ​ಕ್ರ​ಮ​ಗಳ ನಿಯಂತ್ರ​ಣಕ್ಕೆ ಕ್ರಮ​ಗಳ ಅಗ​ತ್ಯ​ವಿದೆ ಎಂದು ಸುಪ್ರೀಂ ಕೋರ್ಟ್‌ ಪ್ರತಿ​ಪಾ​ದಿ​ಸಿದೆ. 

ಶುಕ್ರ​ವಾರ ಈ ಬಗ್ಗೆ ಪ್ರಸ್ತಾಪಿಸಿದ ನ್ಯಾ.ಅಶೋಕ್‌ ಭೂಷಣ್‌ ನೇತೃ​ತ್ವದ ಪೀಠ, ಒಟಿ​ಟಿ​ಯಲ್ಲಿ ಅಶ್ಲೀಲ ವಿಷಯಗಳು ಪ್ರಸಾ​ರ​ವಾ​ಗು​ತ್ತಿವೆ. ಇದರ ನಿಯಂತ್ರ​ಣಕ್ಕೆ ಸರ್ಕಾರ ಏನೆಲ್ಲಾ ಮಾರ್ಗ​ಸೂ​ಚಿ​ಗ​ಳನ್ನು ಪ್ರಕ​ಟಿ​ಸಿದೆ ಎಂಬು​ದರ ಮಾಹಿ​ತಿ​ಯನ್ನು ಶುಕ್ರ​ವಾರ ತನಗೆ ನೀಡ​ಬೇಕು ಎಂದು ಸೂಚಿ​ಸಿದೆ. 

ಸೋಶಿಯಲ್ ಮೀಡಿಯಾಗೆ ಮೂಗುದಾರ, ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಎಚ್ಚರ!

ಏತ​ನ್ಮಧ್ಯೆ, ಹಿಂದೂ ದೇವ​ರಿಗೆ ಅಪ​ಮಾನ ಮಾಡಿದೆ ಎನ್ನ​ಲಾದ ‘ತಾಂಡ​ವ್‌’ ವೆಬ್‌ ಸರ​ಣಿಯ ಪ್ರಕ​ರ​ಣ​ದಲ್ಲಿ ಬಂಧನ ಭೀತಿಗೆ ತುತ್ತಾಗಿರುವ ಅಮೆ​ಜಾನ್‌ ಪ್ರೈಮ್‌ ವಿಡಿ​ಯೋದ ಭಾರ​ತದ ಮುಖ್ಯಸ್ಥೆ ಅಪರ್ಣಾ ಪುರೋ​ಹಿತ್‌ ಅವರ ನಿರೀ​ಕ್ಷಣಾ ಜಾಮೀ​ನಿನ ಮೇಲ್ಮ​ನವಿ ಅರ್ಜಿ​ಯನ್ನು ಸುಪ್ರೀಂ ಶುಕ್ರ​ವಾರ ವಿಚಾ​ರಣೆ ನಡೆ​ಸ​ಲಿದೆ.