Asianet Suvarna News Asianet Suvarna News

ಸುಳ್ಳುಸುದ್ದಿ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ರೋಶ

  • ಯಾವುದೇ ಲಂಗು ಲಗಾಮಿಲ್ಲದೆ ವರದಿ ಮಾಡುವ ಸಾಮಾಜಿಕ ಮಾಧ್ಯಮಗಲ ವಿರುದ್ಧ ಗರಂ
  • ‘ಇಂಥ ಮಾಧ್ಯಮಗಳ ನಿಯಂತ್ರಣಕ್ಕೆ ಯಾವುದೇ ನಿಯಮಗಳಿಲ್ಲವೇ?’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಮ್
supreme Court slams in fake news snr
Author
Bengaluru, First Published Sep 3, 2021, 7:00 AM IST

 ನವದೆಹಲಿ (ಸೆ.03):  ಯಾವುದೇ ಲಂಗು ಲಗಾಮಿಲ್ಲದೆ ವರದಿ ಮಾಡುವ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್‌ ಚಾನಲ್‌ಗಳು ಹಾಗೂ ಕೆಲವು ವೆಬ್‌ಸೈಟ್‌ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ‘ಇಂಥ ಮಾಧ್ಯಮಗಳು ಎಲ್ಲದಕ್ಕೂ ಕೋಮು ಬಣ್ಣ ಹಚ್ಚುತ್ತವೆ ಹಾಗೂ ದೇಶಕ್ಕೆ ಕೆಟ್ಟಹೆಸರು ತರುತ್ತವೆ’ ಎಂದಿದೆ. ಅಲ್ಲದೆ, ‘ಇಂಥ ಮಾಧ್ಯಮಗಳ ನಿಯಂತ್ರಣಕ್ಕೆ ಯಾವುದೇ ನಿಯಮಗಳಿಲ್ಲವೇ?’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ದಿಲ್ಲಿಯ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ಕಳೆದ ವರ್ಷ ತಬ್ಲೀಘಿ ಜಮಾತ್‌ನವರು ಸಭೆ ಸೇರಿ ಕೋವಿಡ್‌ ಹರಡಲು ಕಾರಣವಾಗಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಸುದ್ದಿಯಾಗಿತ್ತು. ಇಂಥ ನಕಲಿ ಸುದ್ದಿಗಳನ್ನು ತಡೆಗಟ್ಟಿಹಾಗೂ ಸುಳ್ಳುಸುದ್ದಿ ಹರಡಿಸುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಜಮೀಯತ್‌ ಉಲೇಮಾ ಎ ಹಿಂದ್‌ ಸೇರಿದಂತೆ ಕೆಲವು ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಇದರ ವಿಚಾರಣೆ ವೇಳೆ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಂಡ್ಯದ ಮಗಳು ಜ| ನಾಗರತ್ನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ!

‘ಈ ದೇಶದಲ್ಲಿ ಪ್ರತಿಯೊಂದನ್ನೂ ಕೋಮು ದೃಷ್ಟಿಕೋನದಿಂದ ನೋಡಲಾಗುತ್ತದೆ. ಇಂಥದ್ದರಿಂದ ದೇಶಕ್ಕೇ ಕೆಟ್ಟಹೆಸರು. ಇವುಗಳ ನಿಯಂತ್ರಣಕ್ಕೆ ಏನೂ ಕ್ರಮ ಕೈಗೊಂಡಿಲ್ಲವೇ?’ ಎಂದು ನ್ಯಾ

ಎನ್‌.ವಿ.ರಮಣ ಅವರ ಪೀಠ ಪ್ರಶ್ನಿಸಿತು. ನಂತರ, ಹೊಸ ಮಾಹಿತಿ ತಂತಜ್ಞಾನ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿರುವ ವಿವಿಧ ಕೋರ್ಟ್‌ಗಳಲ್ಲಿನ ಅರ್ಜಿಗಳನ್ನು ಸುಪ್ರೀಂಕೋರ್ಟ್‌ನಲ್ಲೇ ಒಂದುಗೂಡಿಸಿ ವಿಚಾರಣೆ ನಡೆಸಲು ನಿರ್ಧರಿಸಿ 6 ವಾರ ವಿಚಾರಣೆ ಮುಂದೂಡಿತು.

ಇದಕ್ಕೆ ಉತ್ತರಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಕೇವಲ ಮತೀಯ ಸುದ್ದಿಗಳಷ್ಟೇ ಅಲ್ಲ, ಸುಳ್ಳು ಸುದ್ದಿಗಳನ್ನೂ ಪ್ರಸಾರ ಮಾಡಲಾಗುತ್ತಿದೆ. ಇವುಗಳ ನಿಯಂತ್ರಣಕ್ಕೆಂದೇ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ರೂಪಿಸಲಾಗಿದೆ ಎಂದರು.

ಆಗ ಮಧ್ಯಪ್ರವೇಶಿಸಿದ ಪೀಠ, ‘ಟ್ವೀಟರ್‌, ಫೇಸ್‌ಬುಕ್‌ಗಳು ಸಾಮಾನ್ಯರ ಪ್ರಶ್ನೆಗಳಿಗೆ ಸ್ಪಂದಿಸುವುದೇ ಇಲ್ಲ. ಅವುಗಳಿಗೆ ಜವಾಬ್ದಾರಿ ಎಂಬುದೇ ಇಲ್ಲ. ನ್ಯಾಯಾಲಯದಂಥ ಘನತೆವೆತ್ತ ಸಂಸ್ಥೆಗಳ ಬಗ್ಗೆ ಮನಬಂದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಲಾಗಿದೆ. ಇಂಥ ಬರಹಗಾರರು ‘ನಮಗೆ ಬರೆವ ಹಕ್ಕಿದೆ’ ಎಂದು ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿತು.

‘ಕೇವಲ ಬಲಶಾಲಿ ವ್ಯಕ್ತಿಗಳಿಗೆ ಮಾತ್ರ ಇಂಥ ಮಾಧ್ಯಮಗಳು ಪ್ರತಿಕ್ರಿಯಿಸುತ್ತವೆ. ಸಾಮಾನ್ಯರು ಅಥವಾ ನ್ಯಾಯಾಧೀಶರಿಗೆ ಬೆಲೆ ಕೊಡುವುದಿಲ್ಲ. ಇದು ನಮ್ಮ ಅನುಭವ. ಯೂಟ್ಯೂಬ್‌, ವೆಬ್‌ ಪೋರ್ಟಲ್‌ಗಳಲ್ಲಿನ ಸುದ್ದಿಗಳಿಗೆ ಲಂಗು ಲಗಾಮೇ ಇಲ್ಲ. ಇಂದು ಯಾರು ಬೇಕಾದರೂ ಯೂಟ್ಯೂಬ್‌ ಚಾನಲ್‌ ಆರಂಭಿಸಬಹುದು. ಇಂಥ ಯೂಟ್ಯೂಬ್‌ ಚಾನಲ್‌ಗಳಲ್ಲಿ ಯಾವುದೇ ಲಂಗು ಲಗಾಮಿಲ್ಲದ ಸುಳ್ಳು ಸುದ್ದಿಗಳು ಲಭ್ಯ ಇರುತ್ತವೆ. ದಿನಪತ್ರಿಕೆ ಹಾಗೂ ಟೀವಿ ಚಾನಲ್‌ಗಳ ನಿಯಂತ್ರಣಕ್ಕೆ ನಿಯಮಗಳಿವೆ. ಆದರೆ ವೆಬ್‌ ಪೋರ್ಟಲ್‌, ಯೂಟ್ಯೂಬ್‌ ಮೇಲೆ ನಿಯಂತ್ರಣವಿಲ್ಲವೇ? ಇವುಗಳ ನಿಯಂತ್ರಣಕ್ಕೆ ಯಾವ ಕ್ರಮ ಜರುಗಿಸಿದ್ದೀರಿ’ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮೆಹ್ತಾ, ‘ನೂತನ ಐಟಿ ನಿಯಮಗಳನ್ನು ಇಂಥವುಗಳ ನಿಯಂತ್ರಣಕ್ಕೆಂದೇ ರೂಪಿಸಲಾಗಿದೆ. ಆದರೆ ಮಾಧ್ಯಮ ಸ್ವಾತಂತ್ರ್ಯ ಹಾಗೂ ಜನರ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದೇ ದೊಡ್ಡ ಸಮಸ್ಯೆ ಎಂದು ಕಳೆದ ವರ್ಷ ನ.13ರಂದು ಕೇಂದ್ರ ವಾರ್ತಾ ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ ಹೇಳಿದೆ’ ಎಂದರು.

Follow Us:
Download App:
  • android
  • ios