ನವ​ದೆ​ಹ​ಲಿ(ಜೂ.02): : ಮ​ಹಾ​ಮಾರಿ ಕೋವಿ​ಡ್‌​ನಿಂದಾಗಿ ತಂದೆ-ತಾಯಿ, ಬಂಧು ಬಳಗ ಮತ್ತು ಪೋಷ​ಕ​ರನ್ನು ಕಳೆ​ದು​ಕೊಂಡು ಅನಾ​ಥ​ರಾದ ಮಕ್ಕಳ ಕಲ್ಯಾ​ಣ​ಕ್ಕಾಗಿ ಕೈಗೊ​ಳ್ಳ​ಲಾ​ಗಿ​ರುವ ಯೋಜ​ನೆ​ಗ​ಳ ಮಾಹಿತಿ ನೀಡು​ವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾ​ರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಅಲ್ಲದೆ ಈ ಯೋಜ​ನೆ​ಗಳ ಜಾರಿ ಮತ್ತು ನಿಗಾ ವಹಿ​ಸಲು ಏನೆಲ್ಲಾ ವ್ಯವಸ್ಥೆ ಮಾಡ​ಲಾ​ಗಿದೆ ಎಂಬು​ದರ ಮಾಹಿ​ತಿ​ಯನ್ನೂ ನೀಡಲು ಹೇಳಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ಬಗ್ಗೆ ಮಂಗ​ಳ​ವಾರ ವಿಚಾ​ರಣೆ ನಡೆ​ಸಿದ ಸುಪ್ರೀಂ ಕೋರ್ಟ್‌ ನ್ಯಾಯಾ​ಧೀ​ಶರಾದ ಎಲ್‌. ನಾಗೇ​ಶ್ವರ ರಾವ್‌ ಮತ್ತು ಅನಿ​ರುದ್ಧ ಬೋಸ್‌ ಅವ​ರಿದ್ದ ಪೀಠವು, ಅನಾಥ ಮಕ್ಕ​ಳ ಮಾಹಿತಿ, ಅವರ ಗುರುತು ಮತ್ತು ಅವರ ಕಲ್ಯಾ​ಣ​ಕ್ಕಾಗಿ ಕೈಗೊ​ಳ್ಳ​ಲಾ​ಗಿ​ರುವ ಕ್ರಮ​ಗಳ ವಿಸ್ತೃತ ಮಾಹಿ​ತಿ​ಯನ್ನು ತಮ್ಮ ಆಮಿ​ಕಸ್‌ ಕ್ಯೂರಿ ​(​ಈ ಪ್ರಕ​ರ​ಣ​ದಲ್ಲಿ ನ್ಯಾಯಾ​ಲ​ಯಕ್ಕೆ ಸಲಹೆ ಮತ್ತು ಸೂಚ​ನೆ​ಗ​ಳನ್ನು ನೀಡು​ವ​ವ​ರು) ಆಗಿ​ರುವ ಗೌರವ್‌ ಅಗ​ರ್‌​ವಾಲ್‌ ಅವ​ರಿಗೆ ಸಲ್ಲಿ​ಸಲು ಕಾರ್ಯ​ದರ್ಶಿ ಅಥವಾ ಜಂಟಿ ಕಾರ್ಯ​ದರ್ಶಿ ಹಂತದ ನೋಡಲ್‌ ಅಧಿ​ಕಾ​ರಿ​ಗ​ಳನ್ನು ನೇಮಿ​ಸು​ವಂತೆ ರಾಜ್ಯ​ಗಳು ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳಿಗೆ ನಿರ್ದೇ​ಶಿ​ಸಿದೆ.

ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

ಕರ್ನಾ​ಟಕ ಸೇರಿ​ದಂತೆ ಅತಿ​ಹೆಚ್ಚು ಅನಾ​ಥ​ರಾದ ಮಕ್ಕಳ ಹೊಂದಿದ 10 ರಾಜ್ಯ​ಗಳಿಗೆ ಸಂಬಂಧಿ​ಸಿದ ಅರ್ಜಿ​ಗ​ಳನ್ನು ಮುಂದಿನ ಸೋಮ​ವಾರ ವಿಚಾ​ರಣೆ ನಡೆ​ಸು​ವು​ದಾಗಿ ಹೇಳಿದೆ.

9,346 ಮಕ್ಕಳು ಅನಾಥ:

ಈ ನಡುವೆ, ಕೊರೋನಾದಿಂದ 141 ಮಕ್ಕಳು ತಂದೆ-ತಾಯಿ ಕಳೆದುಕೊಂಡಿದ್ದಾರೆ. 4451 ಮಕ್ಕಳು ಒಬ್ಬ ಪಾಲಕರನ್ನು ಕಳೆದುಕೊಂಡಿದ್ದಾರೆ. ಇವರು ಸೇರಿ 9346 ಮಕ್ಕಳಿಗೆ ರಕ್ಷಣೆ ಬೇಕಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona