ಗೋವನ್ನು ಹಿಂದುಗಳು ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಹೀಗಾಗಿಯೋ ಗೋ ಸಂರಕ್ಷಣೆ, ಗೋ ಹತ್ಯೆ ನಿಷೇಧ ಕಾಯ್ದೆಗಳನ್ನು ಹಲವು ರಾಜ್ಯಗಳು ಜಾರಿಗೆ ತಂದಿದೆ. ಇದರ ನಡುವೆ ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ಕೋರ್ಟ್ ತರಿಸ್ಕರಿಸಿದೆ.

ನವದೆಹಲಿ(ಅ.10): ಗೋ ಮಾತೆಗೆ ದೇವರ ಸ್ಥಾನ. ಗೋವು ಹಿಂದೂಗಳ ಪೂಜ್ಯನೀಯ ಮಾತೆ. ಈ ಕಾರಣಕ್ಕೆ ಹಲವು ತಿಕ್ಕಾಟಗಳು ನಡೆದುಹೋಗಿದೆ. ಕೆಲ ರಾಜ್ಯಗಳಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆಯೂ ಜಾರಿಯಲ್ಲಿದೆ. ಕೆಲ ರಾಜ್ಯಗಳು ಈ ಕಾಯ್ದೆ ಜಾರಿಗೆ ತರಲು ಯತ್ನಿಸುತ್ತಿದೆ. ಈ ಹೋರಾಟದ ನಡುವೆ ಗೋವನ್ನು ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಇದು ನ್ಯಾಯಾಲಯದ ಕೆಲಸವಲ್ಲ ಈ ರೀತಿಯ ಅರ್ಜಿ ಯಾಕೆ ಸಲ್ಲಿಸಿದ್ದೀರಿ ಎಂದು ನ್ಯಾಯಾಲಯ ಅರ್ಜಿದಾರರಿಗೆ ಪ್ರಶ್ನಿಸಿದೆ. ಇಷ್ಟೇ ಅಲ್ಲ ಅರ್ಜಿಯನ್ನು ತಿರಸ್ಕರಿಸಿದೆ. ಈ ಮೂಲಕ ಗೋವು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂಬ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಗೋವಂಶ ಸೇವಾ ಕೇಂದ್ರ ಎಂಬ ಸರ್ಕಾರೇತರ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿಯನ್ನು ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಹಾಗೂ ಅಭಯ್ ಎಸ್ ಓಕಾ ಅವರಿದ್ದ ಪೀಠ ಅರ್ಜಿಯನ್ನು ತರಿಸ್ಕರಿಸಿದೆ. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ನಿರ್ದೇಶನ ನೀಡದಿದ್ದರೆ ವ್ಯಕ್ತಿಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಾ? ಎಂದು ಪೀಠ ಪ್ರಶ್ನಿಸಿತು. 

ಪುಣ್ಯಕೋಟಿ ದತ್ತು ಯೋಜನೆ ಯಶಸ್ಸಿಗೆ ಸಚಿವ ಚವ್ಹಾಣ್‌ ಕರೆ

ಗೋ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವುದು, ದಂಡ ವಿಧಿಸುವುದು ನ್ಯಾಯಾಲದ ಕೆಲಸವಲ್ಲ. ಇಲ್ಲಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆಯಾ? ಇಂತಹ ಅರ್ಜಿಗಳನ್ನು ಯಾಕೆ ಸಲ್ಲಿಸುತ್ತಿದ್ದೀರಿ ಎಂದು ಪೀಠ ಅರ್ಜಿದಾರರನ್ನು ಪ್ರಶ್ನಿಸಿದೆ. ಭಾರತದಲ್ಲಿ ಗೋ ಸಂರಕ್ಷಣೆ ಅತ್ಯಂತ ಪ್ರಮುಖ ಹಾಗೂ ಗಂಭೀರ ವಿಚಾರವಾಗಿದೆ ಎಂದು ಅರ್ಜಿದಾರರು ನ್ಯಾಯಾಲದ ಮುಂದೆ ಹೇಳಿದ್ದಾರೆ. ಯಾವ ಮೂಲಭೂತ ಹಕ್ಕನ್ನು ಆಧರಿಸಿ ನೀವು ಅರ್ಜಿ ಸಲ್ಲಿಸಿದ್ದಿರಿ, ನೀವು ಅರ್ಜಿ ಸಲ್ಲಿಸಿದ್ದಕ್ಕೆ ಕಾನೂನನ್ನು ಗಾಳಿಗೆ ತೂರಿ ನಿರ್ಧಾರ ಕೈಗೊಳ್ಳಲಾಗದು’ ಎಂದು ಅರ್ಜಿದಾರರ ಪರ ಇದ್ದ ವಕೀಲರನ್ನು ಪ್ರಶ್ನಿಸಿದೆ.

ಅರ್ಜಿದಾರರ ವಾದಕ್ಕೆ ಮನ್ನಣೆ ನೀಡದ ಕೋರ್ಟ್ ನ್ಯಾಯಾಲದ ಸಮಯ ಹಾಳುಮಾಡುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿತು. ಇಷ್ಟೇ ಅಲ್ಲ ದಂಡ ಹಾಕಲು ಮುಂದಾಯಿತು. ಈ ವೇಳೆ ಅರ್ಜಿದಾರರ ಪರ ವಕೀಲ, ಅರ್ಜಿ ಹಿಂಪಡೆಯುವುದಾಗಿ ಸ್ಪಷ್ಟನೆ ನೀಡಿದರು. ಇದರಿಂದ ದಂಡದಿಂದ ಬಚಾವ್ ಆದರು.

ಗೋವು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ ಎಂಬ ಕೂಗು ಹಲವು ವರ್ಷಗಳಿಂದಲೇ ಇದೆ. ಈ ಕೂಗು ಹಲವು ಭಾರಿ ಚರ್ಚೆಗೆ ಒಳಪಟ್ಟಿದೆ. ಇತ್ತೀಚೆಗೆ ಈ ರೀತಿಯ ಕೂಗು ಕೇಳಿಬಂದಿತ್ತು. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋ ಆಧರಿತ ಉತ್ಪನ್ನ, ಪಶು ಆಹಾರಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು, ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಿ, ವಿಧಾನಸಭೆ ಅಧಿವೇಶನದಲ್ಲಿ ಕೃಷಿಕರ ಸಮಸ್ಯೆ ಚರ್ಚೆಗೆ ದಿನ ಮೀಸಲಿಡಿ ಎಂದು ಅಂಕೋಲಾ ತಾಲೂಕು ಕೈಗಡಿ ಗ್ರಾಮದಲ್ಲಿ ಆಯೋಜಿಸಿದ್ದ ಅನ್ನದಂಗಳದಲ್ಲಿ ಮಾತುಕತೆ ಎಂಬ ವಿಶಿಷ್ಟಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಅವರೆದುರು ರೈತರು ಇಂಥ ಅನೇಕ ಅಹವಾಲುಗಳ ಪಟ್ಟಿಯನ್ನೇ ಇಟ್ಟರು.

Bakrid: ತುಮಕೂರಿನಲ್ಲಿ ಗೋ ಹತ್ಯೆ ಮಾಡುತ್ತಿದ್ದ ಮೂವರ ಬಂಧನ

ರೈತರಿಂದಲೇ ಉತ್ಪಾದಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಶ್ರೀಲಂಕಾದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ಕೈಗೊಳ್ಳಲಾಗುತ್ತಿದ್ದು, ಅಲ್ಲಿಗೆ ಅಧ್ಯಯನಕ್ಕಾಗಿ ದೇಶದ ರೈತರ ಪ್ರವಾಸ ಹಮ್ಮಿಕೊಳ್ಳಬೇಕು. ಕೃಷಿಕರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ನರೇಗಾದಲ್ಲಿ ದೊಡ್ಡ ಹಿಡುವಳಿದಾರರಿಗೆ ಕನಿಷ್ಠ ಎರಡು ಹೆಕ್ಟೇರ್‌ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದಿದ್ದರು.