ನವದೆಹಲಿ(ಫೆ.16): ಪತ್ರಕರ್ತ ರಾಜದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಬಿಗಿಗೊಳ್ಳುತ್ತಿದೆ. 2020ರ ಆಗಸ್ಟ್ ತಿಂಗಳಲ್ಲಿ ನ್ಯಾಯಾಂಗದ ವಿರುದ್ಧ ಟ್ವೀಟ್ ಮಾಡಿದ್ದ ಸರ್ದೇಸಾಯಿ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದೆ.

ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್‌ದೀಪ್, ತರೂರ್‌ಗೆ FIR ಸಂಕಷ್ಟ

ನ್ಯಾಯಾಂಗ ನಿಂದನೆ ಕುರಿತು ಅಸ್ತಾ ಖುರಾನ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಪ್ರಕರಣ ದಾಖಲಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನ ಕ್ರಮಕ್ಕೆ  ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಒಪ್ಪಿಗೆ ನೀಡಲು ನಿರಾಕರಿಸಿದ್ದರು. 2020ರ ಸೆಪ್ಟೆಂಬರ್ ತಿಂಗಲಲ್ಲಿ ಅಸ್ತಾ ಖುರಾನ ಪೀಟೀಶನ್ ಸಲ್ಲಿಕೆ ಮಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ರಾಜದೀಪ್ ಸರ್ದೇಸಾಯಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದೆ.  
 
ಸೆಪ್ಟೆಂಬರ್ ತಿಂಗಳಲ್ಲಿ ಅಟಾರ್ನಿ ಜನರಲ್ ಸರ್ದೇಸಾಯಿ ವಿರುದ್ಧ  ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಅರ್ಜಿದಾರ ಅಸ್ತಾ ಖುರಾನ ಹೊಸ ಅರ್ಜಿ ಸಲ್ಲಿಕೆ ಮಾಡಿದ್ದರು. ಸೆಪ್ಟೆಂಬರ್ 21, 2020ರಂದು ಅರ್ಜಿ ದಾಖಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಸುಮೋಟೋ ಕೇಸ್ ದಾಖಲಿಸಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್‌ಗೆ ಒಂದು ರುಪಾಯಿ ದಂಡ!

ರಾಜದೀಪ್ ಸರ್ದೇಸಾಯಿ ನ್ಯಾಯಾಂಗ ನಿಂದನೆ ವಿವರ
ಸುಪ್ರೀಂ ಕೋರ್ಟ್ ಹಾಗೂ ಮುಖ್ಯನ್ಯಾಯಮೂರ್ತಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿತ್ತು. ದೂಷಿ ಎಂದು ಸಾಬೀತಾಗಿರುವ ಪ್ರಶಾಂತ್ ಭೂಷಣ್‌ಗೆ 1 ರೂಪಾಯಿ ದಂಡ ವಿದಿಸಿತ್ತು. ನ್ಯಾಯಾಲದ ಈ ತೀರ್ಪನ್ನು ರಾಜಜೀಪ್ ಸರ್ದೇಸಾಯಿ ಅಣಕಿಸಿದ್ದರು. ಸುಪ್ರೀಂ ಕೋರ್ಟ್ ಮುಜುಗರದಿಂದ ಹೊರಬರಲು ಈ ರೀತಿ ತೀರ್ಪು ನೀಡಿದೆ ಎಂದು ಸರ್ದೇಸಾಯಿ 31.08.2020ರಂದು ಟ್ವೀಟ್ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ರಾಜದೀಪ್ ಸರ್ದೇಸಾಯಿ 14/08/2020ರಲ್ಲಿ ಪ್ರಶಾಂತ್ ಭೂಷಣ್ ಪ್ರಕರಣದ ತೀರ್ಪನ್ನು ಕಾಶ್ಮೀರದ ಹೇಬಿಯಸ್ ಕಾರ್ಪಸ್ ಪಿಟೀಶನ್‌ಗೆ ಹೋಲಿಕೆ ಮಾಡಿದ್ದರು.

ಇದೇ ಟ್ವೀಟ್ ರಾಜದೀಪ್ ಸರ್ದೇಸಾಯಿಗೆ ಸಂಕಷ್ಟ ತಂದಿದೆ. ಇತ್ತೀಚೆಗೆ ರೈತ ಹೋರಾಟದಲ್ಲಿ ತಪ್ಪು ಸಂದೇಶ ಟ್ವೀಟ್ ಮಾಡಿದ್ದರು. ಈ ಕುರಿತು FIR ದಾಖಲಾಗಿದೆ.