ನವದೆಹಲಿ(ಜ.19): ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್‌ ಪರೇಡ್‌ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇದು ಪೊಲೀಸರಿಗೆ ಸಂಬಂಧಿಸಿದ ವಿಷಯ ಎಂದು ಸ್ಪಷ್ಟಪಡಿಸಿದೆ.

ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವ ಟ್ರಾಕ್ಟರ್‌ ಪರೇಡ್‌ ಅಥವಾ ಟ್ರಾಲಿ ಮಾಚ್‌ರ್‍ ಅಥವಾ ಇನ್ನಾವುದೇ ಪ್ರತಿಭಟನೆಗಳಿಗೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಸೋಮವಾರ ಇದರ ವಿಚಾರಣೆ ನಡೆಸಿದ ನ್ಯಾ

ಎಸ್‌.ಎ. ಬೋಬ್ಡೆ ಅವರ ಪೀಠ, ‘ಇವುಗಳುಗೆ ಅನುಮತಿ ನೀಡಬೇಕೋ ಬೇಡವೋ ಎಂದು ನಿರ್ಧರಿಸುವ ಅಧಿಕಾರ ಪೊಲೀಸರಿಗೆ ಇದೆ. ಪೊಲೀಸರ ಅಧಿಕಾರ ಏನು, ಅವರೇನು ಮಾಡಬೇಕು ಎಂದು ನಾವು ಹೇಳಬೇಕಾ? ಅದನ್ನೆಲ್ಲ ನಾವು ಹೇಳಲ್ಲ’ ಎಂದು ಹೇಳಿ ಜನವರಿ 20ಕ್ಕೆ ವಿಚಾರಣೆ ಮುಂದೂಡಿತು.