ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಬೆಳಕಿನ ಹಬ್ಬ ಆಚರಿಸಲು ದೇಶವೇ ಸಜ್ಜಾಗಿದೆ. ಕಳೆದೆರಡು ಕೊರೋನಾ, ಸಾವು ನೋವಿನಿಂದ ದೀಪಾವಳಿ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ದೀಪಾವಳಿ ಹಬ್ಬಕ್ಕೆ ಸಕಲ ತಯಾರಿಗಳು ನಡೆಯುತ್ತಿದೆ. ಆದರೆ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ಹೇರಿರುವ ನಿರ್ಬಂಧ ತೆರವಿಗೆ  ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನವದೆಹಲಿ(ಅ.10): ದೀಪಾವಳಿ ಹಬ್ಬ ಆಚರಣೆಗೆ ಭಾರತ ಸಜ್ಜಾಗಿದೆ. ದೇಶಾದ್ಯಂತ ವಿಜೃಂಭಣೆಯಿಂದ ಬೆಳಕಿನ ಹಬ್ಬ ಆಚರಣೆಗೆ ತಯಾರಿ ನಡೆಯುತ್ತಿದೆ. ಇದರ ನಡುವೆ ದೀಪಾವಳಿ ಹಬ್ಬದ ವೇಳೆ ಸಿಡಿಸುವ ಪಟಾಕಿಗೆ ಹಲವು ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಅದರಲ್ಲೂ ಪ್ರಮುಖವಾಗಿ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿರುವ ಕಾರಣ ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ತೆರವಿಗೆ ಬಿಜೆಪಿ ಸಂಸದ ಮನೋಜ್ ತಿವಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ದೀಪಾವಳಿ ಹಬ್ಬದ ಬಳಿಕ ಸೃಷ್ಟಿಯಾಗುವ ಮಾಲಿನ್ಯದ ಕುರಿತು ಯೋಚಿಸಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇಷ್ಟೇ ಅಲ್ಲ ದೀಪಾವಳಿ ಹಬ್ಬದ ಪಟಾಕಿ ಸಿಡಿಸುವ ಆಚರಣೆ ಮೇಲೆ ಹೇರಿರುವ ನಿರ್ಬಂಧ ತೆರವಿಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಜಸ್ಟೀಸ್ ಎಂಆರ್ ಶಾ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ದೀಪಾವಳಿ ಹಬ್ಬದ ದಿನ ಹಾಗೂ ಬಳಿಕ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿ ಪಟಾಕಿ ಕೊಡುಗೆ ಹೆಚ್ಚಿದೆ. ಹೀಗಾಗಿ ಮಾಲಿನ್ಯ ದೃಷ್ಟಿಯಿಂದ ಪಟಾಕಿ ಹಬ್ಬಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ತೆರವು ಮಾಡಿದರೆ ಮಾಲಿನ್ಯದ ಪ್ರಮಾಣ ಕೈಮೀರಲಿದೆ ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ದೀಪಾವಳಿ ಹಬ್ಬದ ರಜಾ ದಿನಕ್ಕೂ ಮೊದಲು ಈ ಅರ್ಜಿ ಕುರಿತು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

Diwali 2022: ಇನ್ನೆರಡು ವಾರದಲ್ಲಿ ದೀಪಾವಳಿ.. ಐದು ದಿನಗಳ ಹಬ್ಬದ ಮಹತ್ವ ಏನು?

ದೀಪಾವಳಿ ಸಂದರ್ಭದಲ್ಲಿ ದೆಹಲಿಯಲ್ಲಿ ಪಟಾಕಿ ಮಾರಾಟ , ಖರೀದಿ ಹಾಗೂ ಸಿಡಿಸಲು ನಿರ್ಬಂಧ ಹೇರಲಾಗಿದೆ. ಇದನ್ನು ಪ್ರಶ್ನಿಸಿ ಮನೋಜ್ ತಿವಾರಿ ಕೋರ್ಟ್ ಮೆಟ್ಟಿಲೇರಿದ್ದರು. ಕನಿಷ್ಠ ಹಸಿರು ಪಟಾಕಿಗೆ ಅನುಮತಿ ನೀಡಬೇಕು ಎಂದು ವಾದಿಸಲಾಯಿತು. ಈ ವೇಳೆ ಕೋರ್ಟ್, ಪಟಾಕಿ ಸಿಡಿಸಲು ನಿರ್ಬಂಧ ವಿಧಿಸಲಾಗಿದೆ. ಇದರಲ್ಲಿ ಗ್ರೀನ್ ಪಟಾಕಿ ಸೇರಲಿದೆ. ದೀಪಾವಳಿ ಬಳಿಕ ದೆಹಲಿಯಲ್ಲಿ ಮಾಲಿನ್ಯವನ್ನು ಗಮನಿಸಿದ್ದೀರಾ ಎಂದು ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಈ ಕುರಿತು ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ದೀಪಾವಳಿ ಹಬ್ಬದ ರಜಾ ದಿನಕ್ಕೂ ಮೊದಲು ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದೀಪಾವಳಿ ನಂತರ ಮತ್ತು ಬೆಳೆ ತ್ಯಾಜ್ಯ ಸುಡುವುದರಿಂದ ಗಾಳಿಯ ಗುಣಮಟ್ಟಹದಗೆಟ್ಟಿದ್ದು, ಉಸಿರಾಟ ಸಂಬಂಧಿತ ಸಮಸ್ಯೆಗಳು ಶೇ.20ರಷ್ಟುಹೆಚ್ಚಳಗೊಂಡಿವೆ ಎಂದು ವೈದ್ಯರು ತಿಳಿಸಿದಾರೆ. ಅದರಲ್ಲೂ ಈ ವಾಯುಮಾಲಿನ್ಯದಿಂದ ಕೋವಿಡ್‌ನಿಂದ ಗುಣಮುಖರಾದವರಿಗೂ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಎಚ್ಚರಿಸಿದ್ದಾರೆ

Diwali 2022 : ಇವರಿಗೆಲ್ಲಾ ಏನಾದರೂ ಉಡುಗೊರೆ ಕೊಡೋದ ಮರೀಬೇಡಿ

ದೀಪಾವಳಿ ಪಟಾಕಿ ಮಾರಾಟ ರಹದಾರಿಗೆ ಅರ್ಜಿ ಆಹ್ವಾನ
 ದೀಪಾವಳಿ ಹಬ್ಬವು ಅ.24 ರಿಂದ 26 ರವರೆಗೆ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಪಟಾಕಿ ಮಾರಾಟ ಮಾಚಲಿಚ್ಛಿಸುವವರು ರಹದಾರಿಯನ್ನು ಪಡೆಯುವ ಸಂಬಂಧ ಭರ್ತಿ ಮಾಡಿದ ನಮೂನೆ ಫಾರಂ ಎಲ್‌ಇ-5 ಅನ್ನು ಸೆ.17ರ ಒಳಗೆ ತಮ್ಮ ಕಚೇರಿಗೆ ಸಲ್ಲಿಸುವಂತೆ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಸೂಚಿಸಿದ್ದಾರೆ. ಹಾಗೆಯೇ, ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.