Asianet Suvarna News Asianet Suvarna News

ಕರ್ನಾಟಕದ 3 ಜಿಲ್ಲೆಗಳಲ್ಲಿ ಹೊರತೆಗೆದ ಕಬ್ಬಿಣದ ಅದಿರು ರಫ್ತಿಗೆ ಸುಪ್ರೀಂ ಓಕೆ

ಕರ್ನಾಟಕದ 3 ಜಿಲ್ಲೆಗಳಲ್ಲಿ ಗಣಿಗಳಿಂದ ಈಗಾಗಲೇ ಹೊರತೆಗೆಯಲಾಗಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಹೀಗಾಗಿ ದಶಕಗಳಿಂದ ಗಣಿ ಪ್ರದೇಶ ಮತ್ತು ಬಂದರುಗಳಲ್ಲಿ ಸಂಗ್ರಹವಾಗಿದ್ದ ಭಾರೀ ಪ್ರಮಾಣದ ಅದಿರನ್ನು ರಫ್ತು ಮಾಡಲು ಗಣಿ ಕಂಪನಿಗಳಿಗೆ ಅವಕಾಶ ಸಿಕ್ಕಿದಂತಾಗಿದೆ.

Supreme Court Permits Mining Firms To Export Excavated Iron Ores From Karnataka gvd
Author
Bangalore, First Published May 21, 2022, 3:06 AM IST

ನವದೆಹಲಿ (ಮೇ.21): ಕರ್ನಾಟಕದ 3 ಜಿಲ್ಲೆಗಳಲ್ಲಿ ಗಣಿಗಳಿಂದ ಈಗಾಗಲೇ ಹೊರತೆಗೆಯಲಾಗಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಹೀಗಾಗಿ ದಶಕಗಳಿಂದ ಗಣಿ ಪ್ರದೇಶ ಮತ್ತು ಬಂದರುಗಳಲ್ಲಿ ಸಂಗ್ರಹವಾಗಿದ್ದ ಭಾರೀ ಪ್ರಮಾಣದ ಅದಿರನ್ನು ರಫ್ತು ಮಾಡಲು ಗಣಿ ಕಂಪನಿಗಳಿಗೆ ಅವಕಾಶ ಸಿಕ್ಕಿದಂತಾಗಿದೆ. ಅನಿಯಂತ್ರಿತ ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕದ ಕಬ್ಬಿಣದ ಅದಿರು ಗಣಿಗಾರಿಕೆ ಮೇಲೆ ಹೇರಿದ್ದ ಸಮಯಕ್ಕೂ, ಈಗಿನ ಸಮಯಕ್ಕೂ ಬಹಳ ಬದಲಾವಣೆ ಆಗಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ಅದಿರಿನ ರಫ್ತಿಗೆ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸುತ್ತಿರುವುದಾಗಿ ಹೇಳಿತು.

2012ರಲ್ಲಿ ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಮಾಡುವುದರ ಮೇಲೆ ಸುಪ್ರೀಂಕೋರ್ಚ್‌ ನಿಷೇಧವನ್ನು ಹೇರಿತ್ತು. ಅನಿಯಂತ್ರಿತ ಗಣಿಗಾರಿಕೆಯಿಂದ ಪರಿಸರದ ಅವನತಿಯನ್ನು ತಡೆಗಟ್ಟಲು ಹಾಗೂ ರಾಜ್ಯದ ಖನಿಜ ಸಂಪನ್ಮೂಲಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ ಇ-ಹರಾಜಿಗೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ವಿದೇಶಗಳಲ್ಲಿನ ಕಂಪನಿಗಳ ಜೊತೆ ನೇರ ಒಪ್ಪಂದ ಮಾಡಿಕೊಂಡು ಕಬ್ಬಿಣದ ಅದಿರು ರಫ್ತು ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು. ನ್ಯಾಯಾಲಯದ ಈ ಆದೇಶದಿಂದಾಗಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಗಳಲ್ಲಿ ಈಗಾಗಲೇ ಅಗೆದಿಟ್ಟ ಕಬ್ಬಿಣದ ಅದಿರಿನ ರಫ್ತಿಗೆ ಅವಕಾಶ ಸಿಗಲಿದೆ.

ಕೋವಿಡ್‌ ಲಸಿಕೆ ಪಡೆಯುವಂತೆ ಬಲವಂತ ಮಾಡುವಂತಿಲ್ಲ: ಸುಪ್ರೀಂ

ರಾಜ್ಯಕ್ಕೂ ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ: ಜಿಎಸ್‌ಟಿ ಮಂಡಳಿಯ ಶಿಫಾರಸುಗಳ ಪಾಲನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಡ್ಡಾಯವಲ್ಲ. ನಮ್ಮದು ಸಹಕಾರ ಒಕ್ಕೂಟ ವ್ಯವಸ್ಥೆಯಾದ ಕಾರಣ, ಮಂಡಳಿಯ ಶಿಫಾರಸುಗಳು ಕೇವಲ ಮೌಲ್ಯಯುತ ಸಲಹೆಗಳಾಗಿರುತ್ತವೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಜೊತೆಗೆ ಜಿಎಸ್‌ಟಿ ನಿಯಮ ರೂಪಿಸುವಲ್ಲಿ ಸಂಸತ್‌ ಮತ್ತು ರಾಜ್ಯ ವಿಧಾನಸಭೆಗಳು ಸಮಾನ ಅಧಿಕಾರ ಹೊಂದಿವೆ. ಜಿಎಸ್‌ಟಿ ಮಂಡಳಿಯು ಮಾಡುವ ಶಿಫಾರಸುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಮಾತುಕತೆಯ ಮೂಲಕ ಹೊರಬರುವ ಫಲ. 

ಬೊಮ್ಮಾಯಿ ದಿಲ್ಲಿಗೆ: ಆದರೆ, ಸಚಿವ ಸಂಪುಟ ಸಮಾಲೋಚನೆ ಮೇ 3ಕ್ಕೆ?

ಜಿಎಸ್‌ಟಿ ಮಂಡಳಿಯು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕೇವಲ ಒಂದು ಸಾಂವಿಧಾನಿಕ ಸಂಸ್ಥೆಯಲ್ಲ, ಬದಲಾಗಿ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ತಂಭ ಎಂದು ಹೇಳಿದೆ. ಸುಪ್ರೀಂಕೋರ್ಟ್‌ನ ಈ ಆದೇಶ, ಒಕ್ಕೂಟ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ತದ್ದು ಎಂದು ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಹರ್ಷ ವ್ಯಕ್ತಪಡಿಸಿದ್ದರೆ, ಆದೇಶವು ಹಾಲಿ ಜಾರಿಯಲ್ಲಿರುವ ಒಂದು ದೇಶ, ಒಂದು ತೆರಿಗೆ ಪದ್ಧತಿಯ ಜಾರಿಗೆ ಯಾವುದೇ ಅಡ್ಡಿಯಾಗದು. ಮಂಡಳಿಯ ಆದೇಶವನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯಗಳಿಗಿದೆ ಎಂಬ ಅಂಶವು ಹಾಲಿ ಕಾನೂನಿನಲ್ಲಿಯೇ ಸ್ಪಷ್ಟವಾಗಿದೆ. ಮೇಲಾಗಿ ಕಳೆದ 5 ವರ್ಷಗಳಲ್ಲಿ ಯಾರೂ ಈ ಅಧಿಕಾರವನ್ನು ಬಳಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Follow Us:
Download App:
  • android
  • ios