ಮಹಾರಾಷ್ಟ್ರದಲ್ಲಿ ನ್ಯಾಯಾಲಯಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ. ಅಭಯ್ ಓಕಾ ಹೇಳಿದ್ದಾರೆ. ಕರ್ನಾಟಕ ಸರ್ಕಾರ ಮಾತ್ರ ನ್ಯಾಯಾಲಯಗಳಿಗೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಪಿಟಿಐ ಮುಂಬೈ (ಫೆ.16): ಮಹಾರಾಷ್ಟ್ರದಲ್ಲಿ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಇಲ್ಲ. ಕೋರ್ಟುಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಸದಾ ಮುಂದಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ। ಅಭಯ್‌ ಓಕಾ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಕೋರ್ಟುಗಳಿಗೆ ಮೂಲಸೌಕರ್ಯ ಪಡೆಯುವಲ್ಲಿ ನಾವು ಪರದಾಡಿದ್ದೆವು. ಮಹಾರಾಷ್ಟ್ರ ಸರ್ಕಾರ ಸೌಲಭ್ಯಗಳನ್ನೇ ನೀಡುತ್ತಿರಲಿಲ್ಲ. ಪುಣೆ ಸಿವಿಲ್‌ ಕೋರ್ಟ್‌ನಲ್ಲಿ ಜಡ್ಜ್‌ಗಳಿಗೆ ಪ್ರತ್ಯೇಕ ಚೇಂಬರ್‌ ಕೂಡ ಇರಲಿಲ್ಲ’ ಎಂದರು.

ಇದನ್ನೂ ಓದಿ: ಮುಂದಿನ ಚುನಾವಣೆ ಗೆಲ್ಲಬೇಕು ಎಂದರೆ ನಮಗೆ ಸಿದ್ದರಾಮಯ್ಯ ಬೇಕೇಬೇಕು: ಸತೀಶ್ ಜಾರಕಿಹೊಳಿ

ಆದರೆ ಕಳೆದ 5 ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಮಹಾರಾಷ್ಟ್ರದಲ್ಲಿ ಕಳೆದ 4 ವರ್ಷದಿಂದ ಶಿವಸೇನೆ-ಬಿಜೆಪಿ ಸರ್ಕಾರ ಇದೆ ಎಂಬುದು ಇಲ್ಲಿ ಗಮನಾರ್ಹ.

ಕಲಬುರಗಿ ಪೀಠ ಫೈವ್‌ಸ್ಟಾರ್‌ ಹೋಟೆಲ್‌:

ಇದೇ ವೇಳೆ ಕರ್ನಾಟಕ ಸರ್ಕಾರ ಕೋರ್ಟುಗಳಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸುತ್ತಿದೆ ಎಂದು ಹೊಗಳಿದ ಅವರು ಕಲಬುರಗಿ ಹೈಕೋರ್ಟ್‌ ಪೀಠವು ಪಂಚತಾರಾ ಹೋಟೆಲ್‌ನಂತಿದೆ ಎಂದು ಪ್ರಶಂಸಿಸಿದರು.

ಕರ್ನಾಟಕದಲ್ಲಿ ಮಹಾರಾಷ್ಟ್ರದ ರೀತಿಯ ಪರಿಸ್ಥಿತಿ ಇಲ್ಲ. ನಾವು ಕೋರ್ಟುಗಳಿಗೆ ಯಾವ ಸೌಲಭ್ಯ ಕೇಳುತ್ತೇವೋ ಆ ಸೌಲಭ್ಯವನ್ನು ಕರ್ನಾಟಕ ಸರ್ಕಾರ ನೀಡುತ್ತದೆ ಎಂದರು.