ಸುಪ್ರೀಂ ಕೋರ್ಟ್ ದೇಶದಾ ಎಲ್ಲಾ ನ್ಯಾಯಾಲಯಗಳಿಗೆ ಮಹತ್ವದ ಸೂಚನೆ ನೀಡಿದೆ. ಲೈಂಗಿಕ ಅಪರಾಧ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ನೋಡಬೇಕು. ಇಷ್ಟೇ ಅಲ್ಲ ರಾಖಿ ಕಟ್ಟಿಸಿಕೊಳ್ಳುವ, ಮಧ್ಯಸ್ಥಿತಿಕೆ, ಮದುವೆ ಈ ರೀತಿಯ ಯಾವುದೇ ಸಲಹೆ ಸೂಚನೆಗೆ ಆಸ್ಪದವಿಲ್ಲ ಎಂದು ಸುಪ್ರೀಂ ಹೇಳಿದೆ. ಸುಪ್ರೀಂ ಕೋರ್ಟ್ ಸೂಚನೆಯ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ(ಮಾ.19); ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಆರೋಪಿ ಮತ್ತು ದೂರುದಾರರ ನಡುವೆ ರಾಖಿ ಕಟ್ಟಿಸಿ ಇತ್ಯರ್ಥ ಮಾಡುವ, ಮದುವೆ ಅಥವಾ ಮಧ್ಯಸ್ಥಿಕೆ, ರಾಜಿ ಮಾತುಕತೆ ಮಾಡಿಕೊಳ್ಳುವ ಯಾವುದೇ ಕ್ರಮಗಳನ್ನು ನ್ಯಾಯಾಲಯಗಳು ಸೂಚಿಸಬಾರದು ಎಂದು ಸುಪ್ರೀಂ ಕೋರ್ಟ್ ದೇಶದ ನ್ಯಾಯಾಲಯಗಳಿಗೆ ಖಡಕ್ ಸೂಚನೆ ಕೊಟ್ಟಿದೆ.

‘ರೇಪಿಸ್ಟ್‌’ ಜಾಮೀನಿಗೆ ರಾಖಿ ಷರತ್ತು : ಹೈ ಆದೇಶ ಸುಪ್ರೀಂನಲ್ಲಿ ವಜಾ.

ಎ.ಎಂ. ಖಾನ್ವಿಲ್ಕರ್ ಮತ್ತು ಎಸ್. ರವೀಂದ್ರ ಭಟ್ ಒಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನ್ಯಾಯಪೀಠ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಆದೇಶಗಳನ್ನು ಜಾರಿಗೊಳಿಸುವಾಗ ದೇಶದ ನ್ಯಾಯಾಲಯಗಳು ಪಾಲಿಸಬೇಕಾದ ಮಾರ್ಗಸೂಚಿ ಪ್ರಕಟಿಸಿದೆ.

ಅತ್ಯಾ​ಚಾರ ಸಂತ್ರ​ಸ್ತೆಯ ಮದ್ವೆ ಆಗಲು ಹೇಳಿ​ಲ್ಲ: ಸುಪ್ರೀಂ ಕೋರ್ಟ್‌ ಸ್ಪಷ್ಟ​ನೆ

ಸುಪ್ರೀಂ ಕೋರ್ಟ್ ಈ ಸೂಚನೆ ನೀಡಲು ಕಾರಣವಿದೆ. 2020ರ ಜುಲೈ ತಿಂಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಈ ರೀತಿಯ ಷರತ್ತು ವಿಧಿಸಿತ್ತು. ಆರೋಪಿಗೆ ಜಾಮೀನು ನೀಡಲು ಸಂತ್ರಸ್ತೆ ಕೈಯಿಂದ ರಾಖಿ ಕಟ್ಟಿಸಿಕೊಂಡು ಬರಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇಷ್ಟೇ ಅಲ್ಲ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಈ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್ ದೇಶದ ಎಲ್ಲಾ ನ್ಯಾಯಾಲಯಗಳಿಗೆ ಈ ಸೂಚನೆ ನೀಡಿದೆ.