Asianet Suvarna News Asianet Suvarna News

ಅತ್ಯಾ​ಚಾರ ಸಂತ್ರ​ಸ್ತೆಯ ಮದ್ವೆ ಆಗಲು ಹೇಳಿ​ಲ್ಲ: ಸುಪ್ರೀಂ ಕೋರ್ಟ್‌ ಸ್ಪಷ್ಟ​ನೆ

ಅತ್ಯಾ​ಚಾರ ಸಂತ್ರ​ಸ್ತೆಯ ಮದ್ವೆ ಆಗಲು ಹೇಳಿ​ಲ್ಲ| ಸುಪ್ರೀಂ ಕೋರ್ಟ್‌ ಸ್ಪಷ್ಟ​ನೆ| ಅತ್ಯಾ​ಚಾ​ರದ ಆರೋ​ಪಿಗೆ ಸಂತ್ರಸ್ತೆಯನ್ನು ಮದುವೆ ಆಗಲು ಹೇಳಿ​ಲ್ಲ| ಸಂತ್ರ​ಸ್ತೆ​ಯನ್ನು ಮದು​ವೆ​ಯಾ​ಗು​ವೆಯಾ ಎಂದಷ್ಟೇ ಪ್ರಶ್ನೆ| ಈ ಬಗ್ಗೆ ತಪ್ಪಾಗಿ ಅರ್ಥೈ​ಸ​ಲಾ​ಗಿ​ದೆ: ಸುಪ್ರೀಂ ಕೋರ್ಟ್‌

Supreme Court has highest respect for womanhood says CJI Bobde pod
Author
Bangalore, First Published Mar 9, 2021, 7:19 AM IST

ನವ​ದೆ​ಹ​ಲಿ(ಮಾ.09): ಮಹಿ​ಳೆ​ಯರ ಕುರಿ​ತಾಗಿ ಸರ್ವೋಚ್ಚ ನ್ಯಾಯಾ​ಲ​ಯಕ್ಕೆ ಅತಿ​ಹೆಚ್ಚು ಮತ್ತು ವಿಶೇ​ಷ ಗೌರ​ವ​ವಿದೆ. ಆದರೆ ಕಳೆದ ವಾರ ಅತ್ಯಾ​ಚಾ​ರಕ್ಕೆ ಸಂಬಂಧಿ​ಸಿದ ವಿಚಾ​ರಣೆ ವೇಳೆ ತನ್ನ ಹೇಳಿ​ಕೆ​ಯನ್ನು ತಪ್ಪಾಗಿ ಅರ್ಥೈ​ಸ​ಲಾ​ಗಿದೆ ಸಿಜೆಐ ಎಸ್‌. ಎ. ಬೋಬ್ಡೆ ನೇತೃ​ತ್ವದ ಸುಪ್ರೀಂ ಕೋರ್ಟ್‌ ಪೀಠ ಸ್ಪಷ್ಟಪಡಿಸಿದೆ.

‘ಸಂತ್ರ​ಸ್ತೆ​ಯನ್ನು ವಿವಾ​ಹ​ವಾ​ಗು​’ ಎಂದು ಅತ್ಯಾ​ಚಾ​ರ​ವೆ​ಸ​ಗಿದ ಆರೋ​ಪಿಗೆ ಸುಪ್ರೀಂ ಪೀಠ ಕೇಳಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತ​ವಾ​ಗಿತ್ತು. ಈ ಹಿನ್ನೆ​ಲೆ​ಯಲ್ಲಿ ಅಂತಾ​ರಾ​ಷ್ಟ್ರೀಯ ಮಹಿಳಾ ದಿನಾ​ಚ​ರ​ಣೆ​ಯಾದ ಸೋಮ​ವಾ​ರವೇ ಸುಪ್ರೀಂ ಕೋರ್ಟ್‌ ತನ್ನ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದೆ.

‘ಅತ್ಯಾ​ಚಾ​ರ​ದಿಂದಾ​ಗಿ ಗರ್ಭ​ ಧರಿ​ಸಿದ 14 ವರ್ಷದ ಯುವ​ತಿಯು ತನ್ನ ಗರ್ಭಕ್ಕೆ 26 ವಾರ ಆಗಿ​ದ್ದರೂ, ಗರ್ಭ​ಪಾ​ತಕ್ಕೆ ಅನು​ಮ​ತಿ ನೀಡ​ಬೇ​ಕೆಂಬ ಪ್ರಕ​ರ​ಣದ ಕುರಿ​ತಾಗಿ ಸುಪ್ರೀಂಕೋರ್ಟ್‌ ವಿಚಾ​ರ​ಣೆ ನಡೆ​ಸಿತು. ಈ ವೇಳೆ ಕಳೆದ ವಾರ ಅತ್ಯಾ​ಚಾ​ರದ ಸಂತ್ರ​ಸ್ತೆ​ಯನ್ನು ವಿವಾ​ಹ​ವಾ​ಗು​ವೆಯಾ ಎಂದು ಆರೋ​ಪಿಗೆ ಪ್ರಶ್ನಿ​ಸಿ​ದ್ದೇವೆ.

ಆದರೆ ಸಂತ್ರ​ಸ್ತೆ​ಯನ್ನು ವಿವಾ​ಹ​ವಾ​ಗ​ಬೇಕು ಎಂದು ಆದೇ​ಶಿ​ಸಿರ​ಲಿಲ್ಲ. ದಾಖ​ಲೆ​ಗಳ ಅನ್ವಯ ಈ ಪ್ರಶ್ನೆ ಕೇಳ​ಲಾ​ಗಿತ್ತು. ಆದರೆ ಈ ಬಗ್ಗೆ ತಪ್ಪಾಗಿ ವರ​ದಿ​ಯಾ​ಗಿದೆ. ಮಹಿ​ಳೆ​ಯರ ಬಗ್ಗೆ ನಮಗೂ ಹೆಚ್ಚು ಗೌರ​ವ​ವಿದೆ’ ಎಂದು ನ್ಯಾಯ​ಪೀಠ ಹೇಳಿತು.

Follow Us:
Download App:
  • android
  • ios