Asianet Suvarna News Asianet Suvarna News

ಇನ್ಮುಂದೆ ವೇಶ್ಯೆ ಲೈಂಗಿಕ ಕಾರ‍್ಯಕರ್ತೆ: ಕೆಲ ಪದಗಳ ಬಳಕೆಗೆ ಸುಪ್ರೀಂಕೋರ್ಟ್ ನಿರ್ಬಂಧ

ಲಿಂಗಾಧಾರಿತ ಅಸಮಾನತೆಯನ್ನು ಬದಲಾಯಿಸುವ ಗುರಿ ಹೊಂದಿರುವ ಹೊಸ ಕೈಪಿಡಿಯನ್ನು ಸುಪ್ರೀಂಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ.

supreme court banned words like Housewife concubine prostitute in court verdict New manual for using honorific terms akb
Author
First Published Aug 17, 2023, 7:40 AM IST

ನವದೆಹಲಿ: ಲಿಂಗಾಧಾರಿತ ಅಸಮಾನತೆಯನ್ನು ಬದಲಾಯಿಸುವ ಗುರಿ ಹೊಂದಿರುವ ಹೊಸ ಕೈಪಿಡಿಯನ್ನು ಸುಪ್ರೀಂಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ. ಹೀಗಾಗಿ ಇನ್ನುಮುಂದೆ ಕೋರ್ಟ್ ತೀರ್ಪಲ್ಲಿ ಹೌಸ್‌ವೈಫ್‌, ಹಾದರಗಿತ್ತಿ, ವೇಶ್ಯೆ ಮುಂತಾದ ಪದಗಳನ್ನು ತೀರ್ಪು ಹಾಗೂ ಆದೇಶ ಪ್ರಕಟಣೆಗಳಲ್ಲಿ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಇದರ ಬದಲಾಗಿ ಕೆಲವು ಗೌರವ ಸೂಚಕ ಪದಗಳನ್ನು ಪ್ರಕಟಿಸಲಾಗಿದೆ. ‘ಮಹಿಳೆಯ ಚಾರಿತ್ರ್ಯ, ಆಕೆಯ ಉಡುಗೆ-ತೊಡುಗೆ, ಜೀವನಶೈಲಿ ಆಧರಿಸಿ ಕೆಲವು ಪದಗಳನ್ನು ಬಳಸಲಾಗುತ್ತಿದೆ. ಅವು ಸೂಕ್ತ ಎನ್ನಿಸುವುದಿಲ್ಲ. ಹೀಗಾಗಿ ಅಂಥ ಪದ ತೆಗೆದುಹಾಕಿ ಗೌರವಸೂಚಕ ಪದ ಪ್ರಕಟಿಸಲಾಗಿದೆ’ ಎಂದು ಕೋರ್ಟ್‌ ಹೇಳಿದೆ. ಇದೇ ವೇಳೆ ‘ಹಳೆಯ ತೀರ್ಪು/ಆದೇಶಗಳಲ್ಲಿ ಕೆಲವು ಮಹಿಳೆಯರ ಬಗ್ಗೆ ರೂಢಿಗತ ಅಥವಾ ಊಹಾತ್ಮಕ ಪದಗಳಿದ್ದವು. ಇಂಥವು ಇನ್ನು ಇರುವುದಿಲ್ಲ’ ಎಂದಿದೆ.

ಹೊಸ ಪದ ಏನು?:

30 ಪುಟಗಳ ಹೊಸ ಕೈಪಿಡಿಯ ಅನ್ವಯ, ‘ವೇಶ್ಯೆ’ ಎಂಬ ಪದದ ಬದಲು ಇನ್ನು ‘ಲೈಂಗಿಕ ಕಾರ್ಯಕರ್ತೆಯರು’ ಎಂದು ಕರೆಯಲಾಗುವುದು. ‘ಹಾದರಗಿತ್ತಿ’ ಬದಲು ‘ಮಹಿಳೆ’ ಎಂದು ಬಳಸಲಾಗುವುದು. ‘ಕೀಪ್‌’ ಎಂಬ ಪದದ ಬದಲಾಗಿ, ‘ವ್ಯಕ್ತಿಯೊಬ್ಬ ತನ್ನ ವೈವಾಹಿಕ ಜೀವನದ ಹೊರತಾಗಿ ಮಹಿಳೆಯೊಂದಿಗೆ ಹೊಂದಿರುವ ಪ್ರೀತಿ ಅಥವಾ ಲೈಂಗಿಕ ಸಂಬಂಧ’ ಎಂದು ಬಳಸಲಾಗುವುದು. ‘ಚುಡಾಯಿಸುವುದು’ ಎನ್ನುವ ಪದದ ಬದಲಾಗಿ ಇನ್ನು ‘ಬೀದಿ ಲೈಂಗಿಕ ಕಿರುಕುಳ’ ಎಂದು ಬಳಸಲಾಗುವುದು. ‘ಫ್ಯಾಗಟ್‌’ ಎಂಬ ಪದದ ಬದಲಾಗಿ ವ್ಯಕ್ತಿಯ ಲೈಂಗಿಕ ಆಸಕ್ತಿಯ ಕುರಿತಾದ ನಿರ್ದಿಷ್ಟ ಪದ ಬಳಸಲಾಗುವುದು. ‘ಹೌಸ್‌ವೈಫ್‌’ ಎಂಬ ಪದದ ಬದಲಾಗಿ ‘ಹೌಸ್‌ಮೇಕರ್‌’ (ಮನೆ ಮುನ್ನಡೆಸುವವಳು) ಎಂದು ಬಳಸಲಾಗುವುದು.

ಸೆಕ್ಷನ್‌ 377ಗೆ ಕೊಕ್‌ ನೀಡಿದ ಕೇಂದ್ರ, ಪುರುಷರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯೇ ಇಲ್ಲ!

‘ಮಿಸ್ಟೆರಸ್‌’ ಎಂಬ ಪದವನ್ನು ಇನ್ನು ‘ಪುರುಷನೊಬ್ಬನ ಜತೆ ಆತನ ವೈವಾಹಿಕ ಸಂಬಂಧಕ್ಕೆ ಹೊರತಾಗಿ ಮಹಿಳೆಯೊಬ್ಬಳು ಹೊಂದಿರುವ ಪ್ರೀತಿ ಅಥವಾ ಲೈಂಗಿಕ ಸಂಬಂಧ’ ಎಂದು ಬಳಸಲಾಗುವುದು. ‘ಬಾಸ್ಟರ್ಡ್‌’ ಎಂಬ ಪದದ ಬದಲಾಗಿ ‘ವೈವಾಹಿಕ ಸಂಬಂಧಕ್ಕೆ ಹೊರತಾಗಿ ಜನಿಸಿದ ಮಗು ಅಥವಾ ಮಗುವಿನ ಪೋಷಕರು ಮದುವೆಯಾಗಿಲ್ಲ’ ಎಂದು ಬಳಸಲಾಗುವುದು ಎಂದು ತಿಳಿಸಲಾಗಿದೆ.

ಕೆಟ್ಟ ಪದಗಳಿಂದ KGF ರಾಕಿ ಪಾತ್ರ ಹೀಯಾಳಿಸಿದ ತೆಲುಗು ನಿರ್ದೇಶಕ; ಕ್ಷಮೆ ಕೇಳುವಂತೆ ಅಭಿಮಾನಿಗಳ ಆಗ್ರಹ

ಹಳೆ ಪದ ಹೊಸ ಪದ

ವೇಶ್ಯೆ -ಲೈಂಗಿಕ ಕಾರ‍್ಯಕರ್ತೆ

ಹೌಸ್‌ವೈಫ್‌- ಹೌಸ್‌ಮೇಕರ್‌

ಕೀಪ್‌ - ವಿವಾಹೇತರ ಸಂಬಂಧಿ

ಫ್ಯಾಗಟ್‌ (ಲೈಂಗಿಕಾಸಕ್ತಿಯ ಪದ)

ಮಿಸ್ಟೆರಸ್‌ ವಿವಾಹೇತರ ಸಂಬಂಧಿ

ಬಾಸ್ಟರ್ಡ್‌-  ಪೋಷಕರು ಮದುವೆಯಾಗಿಲ್ಲ
 

Follow Us:
Download App:
  • android
  • ios