ವಜಾಗೊಂಡ 25,000 ಶಿಕ್ಷಕರ ಬದಲಿಗೆ ಹೊಸ ನೇಮಕಾತಿಯಾಗುವವರೆಗೆ 9 ರಿಂದ 12ನೇ ತರಗತಿವರೆಗಿನ ಶಿಕ್ಷಕರು ಬೋಧನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನವದೆಹಲಿ: ಅಕ್ರಮವಾಗಿ ನೇಮಕಾತಿ ಆರೋಪ ಹೊರಿಸಿ 25 ಸಾವಿರಕ್ಕೂ ಅಧಿಕ ಸರ್ಕಾರಿ ಶಿಕ್ಷಕರನ್ನು ಇತ್ತೀಚೆಗಷ್ಟೇ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಅದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಳಂಕರಹಿತ ಶಿಕ್ಷಕರಿಗೆ ಬೋಧನೆ ಮುಂದುವರೆಸಲು ಅನುಮತಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಸಂಜೀವ್ ಖನ್ನಾ, ಕೋರ್ಟ್ ಆದೇಶದಿಂದಾಗಿ ವಿದ್ಯಾರ್ಥಿಗಳಿಗೆ ಕಷ್ಟವಾಗಬಾರದು. ಆದ್ದರಿಂದ ಹೊಸ ನೇಮಕಾತಿಯಾಗುವ ತನಕ 9, 10, 11 ಮತ್ತು 12ನೇ ತರಗತಿಯ ಶಿಕ್ಷಕರು ಬೋಧನೆಯನ್ನು ಮುಂದುವರೆಸಬಹುದು. ರಾಜ್ಯದ ಶಾಲಾ ಸೇವಾ ಆಯೋಗ ಮೇ 31ರ ಹೊತ್ತಿಗೆ ಹೊಸ ನೇಮಾತಿಗೆ ಜಾಹೀರಾತು ನೀಡಬೇಕು ಮತ್ತು ಡಿ.31ರೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದೆ. ಈ ಸಂಬಂಧ ಕೆಲ ಸೂಚನೆಗಳನ್ನೂ ನೀಡಿರುವ ಸುಪ್ರೀಂ, ರಾಜ್ಯ ಸರ್ಕಾರ ಮತ್ತು ಆಯೋಗ ಮೇ 31ರೊಳಗೆ ಅಫಿಡವಿಟ್ ಸಲ್ಲಿಸಬೇಕು. ಡಿ. 31ರೊಳಗೆ ನೇಮಕಾತಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಜಾಹೀರಾತು ಪ್ರತಿ ಮತ್ತು ವೇಳಾಪಟ್ಟಿಯನ್ನು ಲಗತ್ತಿಸಬೇಕು ಎಂದು ಹೇಳಿದೆ.
ಮುರ್ಷಿದಾಬಾದ್ ಹಿಂಸಾಚಾರದಲ್ಲಿ ಬಾಂಗ್ಲಾ ಒಳನುಸುಳುಕೋರರ ಕೈವಾಡ: ಗೃಹ ಇಲಾಖೆ
ಆದರೆ, ಗ್ರೂಪ್ ಸಿ ಮತ್ತು ಡಿ ನೌಕರರಲ್ಲಿ ಕಳಂಕಿತರ ಸಂಖ್ಯೆ ಅಧಿಕವಿರುವುದರಿಂದ ಅವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದೂ ಪೀಠ ತಿಳಿಸಿದೆ. 2016ರಲ್ಲಿ ನಡೆದ ನೇಮಕಾತಿಯಲ್ಲಿ ಹಲವು ಅಕ್ರಮಗಳು ನಡೆದಿದ್ದರಿಂದ 25,753 ಶಿಕ್ಷಕರನ್ನು ವಜಾಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇದರಿಂದ ಕೆಲಸ ಕಳೆದುಕೊಂಡವರಿಗಷ್ಟೇ ಅಲ್ಲದೆ ಸರ್ಕಾರಿ ಶಾಲೆಗಳಿಗೂ ಸಮಸ್ಯೆಯಾಗಿತ್ತು. ಈ ಸಂಬಂಧ ಮರುಪರಿಶೀಲನೆ ಕೋರಿ ಮಮತಾ ಸರ್ಕಾರ ಸುಪ್ರಿಂ ಮೊರೆಹೋಗಿತ್ತು.
ಪಶ್ಚಿಮ ಬಂಗಾಳದಲ್ಲಿ ಗಲಭೆ; ದೀದಿ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ
ಪಾಕಿಸ್ತಾನಿಯಿಂದ ತೆಲಂಗಾಣದ ಇಬ್ಬರು ಕೆಲಸಗಾರರ ಹತ್ಯೆ!
ಹೈದರಾಬಾದ್: ಪಾಕಿಸ್ತಾನಿಯೊಬ್ಬ ತಲವಾರಿನಿಂದ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವಿಗೀಡಾಗ ಘಟನೆ ನಡೆದಿದೆ. ಮೃತರಿಬ್ಬರು ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಧಾರ್ಮಿಕ ಘೋಷಣೆಯೊಂದನ್ನ ಕೂಗುತ್ತಾ ಬಂದ ಆರೋಪಿ ದುಬೈನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರ ಮೇಲೆ ಖಡ್ಗದಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ 35 ವರ್ಷದ ಅಶ್ಟಪು ಪ್ರೇಮ್ ಸಾಗರ್ ಹತ್ಯೆಯಾದವರಲ್ಲಿ ಒಬ್ಬರಾಗಿದ್ದು, ಏಪ್ರಿಲ್ 11 ರಂದು ಈ ಘಟನೆ ನಡೆದಿದೆ. ಇವರ ಚಿಕ್ಕಪ್ಪ ಪೊಶೆಟ್ಟಿ ಎಂಬುವವರು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
ಅಶ್ಟಪು ಪ್ರೇಮ್ ಸಾಗರ್ ದುಬೈನ ಬೇಕರಿಯೊಂದಲ್ಲಿ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಇವರು ಕೊನೆಯದಾಗಿ ಊರಿಗೆ ಬಂದು ಕುಟುಂಬದವರನ್ನು ಭೇಟಿ ಮಾಡಿ ಹೋಗಿದ್ದರು ಎಂದು ಪ್ರೇಮ್ ಸಾಗರ್ ಚಿಕ್ಕಪ್ಪ ಪೋಶೆಟ್ಟಿ ಹೇಳಿದ್ದಾರೆ. ಪಾಕಿಸ್ತಾನಿ ಪ್ರಜೆಯಿಂದ ಹತ್ಯೆಗೀಡಾದ ಪ್ರೇಮ್‌ಸಾಗರ್ ಅವರಿಗೆ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಇನ್ನೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿಲ್ಲ. ಪ್ರೇಮ್ ಸಾಗರ್ ಅವರ ಶವವನ್ನು ಭಾರತಕ್ಕೆ ತರಲು ಸರ್ಕಾರ ನೆರವಾಗಬೇಕು ಎಂದು ಪ್ರೇಮ್ ಸಾಗರ್ ಅವರ ಚಿಕ್ಕಪ್ಪ ಪೋಶೆಟ್ಟಿ ಹೇಳಿದ್ದಾರೆ. ಪ್ರೇಮಸಾಗರ್ ಕುಟುಂಬವೂ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದು ಸಹಾಯ ಮಾಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಾಗೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ಇನ್ನೊಬ್ಬ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತ ನಿಜಮಾಬಾದ್ ಜಿಲ್ಲೆಯ ನಿವಾಸಿ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ತಲವಾರ್ ದಾಳಿಯಲ್ಲಿ ಸಾಗರ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆತನ ಪತ್ನಿ ಭವಾನಿ ಎಂಬುವವರು ಮಾಹಿತಿ ನೀಡಿದ್ದಾರೆ. ಗಾಯಾಳು ಸಾಗರ್ ಕೂಡ ನಿಜಮಾಬಾದ್ ಮೂಲದವರಾಗಿದ್ದಾರೆ.
