ನವದೆಹಲಿ(ಜೂ.02): ಭಾರತ ಪುರಾತನ ಹೆಸರು. ಇದೀಗ ಎಲ್ಲಾ ಅಧೀಕೃತ ದಾಖಲೆಗಳಲ್ಲಿ ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತು ಮುಖ್ಯನ್ಯಾಯಮೂರ್ತಿ ಎಸ್ ಎ ಬೊಡೆ ನೇತೃತ್ವದ ಪೀಠ PIL ಅರ್ಜಿಯನ್ನು ಮುಂದೂಡಿದೆ. 

ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಿಲ್ಲ..! ಸುಪ್ರೀಂ ಸಾಂತ್ವನ

ಯಾವುದೇ ದಿನಾಂಕ ನೀಡದೆ ವಿಚಾರಣೆ ಮುಂದೂಡಲಾಗಿದೆ. ನಮಹ ಅನ್ನೋ ವ್ಯಕ್ತಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸರ್ತಿ ಅರ್ಜಿ ಸಲ್ಲಿಸಿದ್ದರು. ಅರ್ಟಿಕಲ್ 21ರ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ತನ್ನ ದೇಶವನ್ನು ಭಾರತ ಎಂದು ಕರೆಯಲ ಅರ್ಹನಾಗಿದ್ದಾನೆ. ಇದಕ್ಕಾಗಿ ಇಂಡಿಯಾ ಬದಲು ಅದೀಕೃತವಾಗಿ ಭಾರತ ಎಂದು ಮಾಡಬೇಕಾಗಿ ಮನವಿ ಸಲ್ಲಿಸಿದ್ದರು.

2016ರಲ್ಲೂ ಇದೇ ರೀತಿ ಅರ್ಜಿ
2016ರಲ್ಲೂ ಇದೇ ರೀತಿ ಅರ್ಜಿ ಸಲ್ಲಿಸಿಕೆಯಾಗಿತ್ತು. ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಲಲಿತ್ ನೇತೃತ್ವಗ ಪೀಠ್ ಅರ್ಜಿ ತರಿಸ್ಕರಿಸಿತ್ತು. ಇಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ಗೆ ಭಾವನಾತ್ಮಕ ವಿಚಾರವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುವುದೊಂದೆ ಕೆಲಸ ಎಂದುಕೊಂಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿತ್ತು. 

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಸಾಮಾಜಿಕ ಜಾಲತಾಣದಲ್ಲಿ ಬೈಬೇ ಇಂಡಿಯಾ ಅಭಿಯಾನ ಜೋರಾಗಿದೆ. #ByebyeindiaonlyBharat ಅಭಿಯಾನ ನಡೆಯುತ್ತಿದೆ. ಇಂಡಿಯಾ ಹೆಸರು ಬೇಡ, ಭಾರತ್ ಹೆಸರು ಮರುನಾಮಕರಣ ಮಾಡಿ ಅನ್ನೋ ಕೂಗು ಕೇಳಿಬರುತ್ತಿದೆ.