ಉಗ್ರರ ಪರ ಕೆಲಸ ಮಾಡಿದ ಇಬ್ಬರು ಪೊಲೀಸರು ಸೇರಿ ತನ್ನ 11 ಉದ್ಯೋಗಿಗಳು ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ 11 ನೌಕರರು ವಜಾ

ಶ್ರೀನಗರ (ಜು.11): ಉಗ್ರರ ಪರ ಕೆಲಸ ಮಾಡಿದ ಇಬ್ಬರು ಪೊಲೀಸರು ಸೇರಿ ತನ್ನ 11 ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾಗೊಳಿಸಿದೆ. ವಜಾಗೊಂಡವರಲ್ಲಿ ಹಿಜ್ಬುಲ್‌ ಉಗ್ರ ಸಂಘಟನೆ ಮುಖ್ಯಸ್ಥ ಸಲಾಹುದ್ದೀನ್‌ನ ಮಕ್ಕಳಾದ ಸಯ್ಯದ್‌ ಅಹ್ಮದ್‌ ಶಕೀಲ್‌ ಹಾಗೂ ಶಾಹಿದ್‌ ಯೂಸುಫ್‌ ಕೂಡ ಸೇರಿದ್ದಾರೆ.

ಶ್ರೀನಗರ ಎನ್‌ಕೌಂಟರ್‌ನಲ್ಲಿ CRPF ಯೋಧರಿಗೆ ಗಾಯ, ಬೆಚ್ಚಿ ಬೀಳಿಸುವ ಗುಂಡಿನ ಚಕಮಕಿ ವಿಡಿಯೋ! ..

ಅನಂತ್‌ನಾಗ್‌ನ ನಾಲ್ವರು, ಬದ್ಗಾಮ್‌ನ ಮೂವರು ಮತ್ತು ಬಾರಾಮುಲ್ಲಾ, ಶ್ರೀನಗರ, ಪುಲ್ವಾಮಾ ಮತ್ತು ಕುಪ್ವಾರಾದ ತಲಾ ಒಬ್ಬರನ್ನು ಸಂವಿಧಾನದ 311 ನೇ ವಿಧಿ ಅನ್ವಯ ವಜಾಗೊಳಿಸಲಾಗಿದೆ. ವಜಾಗೊಳಿಸಿದ 11 ಉದ್ಯೋಗಿಗಳಲ್ಲಿ ನಾಲ್ವರು ಶಿಕ್ಷಣ ಇಲಾಖೆ, ಇಬ್ಬರು ಪೊಲೀಸ್‌ ಇಲಾಖೆ ಹಾಗೂ ಕೃಷಿ, ಕೌಶಲ್ಯ ಅಭಿವೃದ್ಧಿ, ವಿದ್ಯುತ್‌ ಮತ್ತು ಆರೋಗ್ಯ ಇಲಾಖೆ ಹಾಗೂ ಸ್ಕಿಮ್ಸ್‌ನಲ್ಲಿ ತಲಾ ಒಬ್ಬರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಜಾಗೊಂಡವರು ಉಗ್ರರ ಪರ ಪರೋಕ್ಷವಾಗಿ ನಿಧಿ ಸಂಗ್ರಹ ಹಾಗೂ ಇತರ ಕೆಲಸ ಮಾಡುತ್ತಿದ್ದುದು ಎನ್‌ಐಎ ತನಿಖೆ ವೇಳೆ ಖಚಿತಪಟ್ಟಿತ್ತು.