ಭಯೋತ್ಪಾದಕರ ಮೇಲೆ ಗುಂಡಿನ ಸುರಿಮಳೆಗೈದ ಸೇನೆ ಶ್ರೀನಗರದ ಎನ್‌ಕೌಂಟರ್ ವಿಡಿಯೋದಲ್ಲಿ ಗುಂಡಿನ ಮೊರೆತ ಸತತ ಕಾರ್ಯಾಚರಣೆಯಲ್ಲಿ ಇಬ್ಬರು CRPF ಯೋಧರಿಗೆ ಗಾಯ  

ಶ್ರೀನಗರ(ಜೂ.28): ಕಣಿವೆ ರಾಜ್ಯದಲ್ಲಿ ಉಗ್ರರ ಹತ್ತಿಕ್ಕಲು ಭಾರತೀಯ ಸೇನೆ, CRPF ಹಾಗೂ ಜಮ್ಮು ಕಾಶ್ಮೀರ ಪೊಲೀಸ್ ಸತತ ಹೋರಾಟ ನಡೆಸುತ್ತಿದೆ. ಕಳೆದೊಂದು ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕಕಾರಿ ಬೆಳವಣಿಗೆ ನಡೆಯತ್ತಿದೆ. ಮಿಲಿಟರಿ ಏರ್‌ಬೇಸ್ ಮೇಲೆ ಡ್ರೋನ್ ದಾಳಿ, 6ಕೆಜಿ IED ಸ್ಫೋಟಕ ವಶ, ಪೊಲೀಸ್ ಅಧಿಕಾರಿ ಮನೆ ಮೇಲೆ ದಾಳಿ, ಮತ್ತೆರೆಡು ಹೊಸ ಡ್ರೋನ್ ಪತ್ತೆ ಸೇರಿದಂತೆ ಭಯೋತ್ಪಾದನಾ ಚಟುವಟಿಕೆ ಒಂದರ ಮೇಲೊಂದರಂತೆ ಘಟನೆ ನಡೆದಿದೆ. ಇದರ ನಡುವೆ ಸೇನೆ ಉಗ್ರರ ವಿರುದ್ಧದ ಕಾರ್ಯಚರಣೆ ನಡೆಸುತ್ತಿದೆ. ಶ್ರೀನಗರದ ನಡೆದ ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು CRPF ಯೋಧರು ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮತ್ತೆರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ!.

ಮಲ್ಹೋರ ಪರಿಂಪೋರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಭಾರತೀಯ ಸೇನೆ, ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದೆ. ಮಾಹಿತಿ ಪಡೆದು ಮಲ್ಹೋರ ಪರಿಂಪೋರ ವಲಯದಲ್ಲಿ ಸೇನೆ ಕಾರ್ಯಚಣೆ ಆರಂಭಿಸಿತು. ಈ ವೇಳೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. 

Scroll to load tweet…

ಡ್ರೋನ್ ದಾಳಿ: ಕಾಶ್ಮೀರ ಉಗ್ರವಾದದಲ್ಲಿ ಟರ್ನಿಂಗ್‌ ಪಾಯಿಂಟ್‌!

ಉಗ್ರರೊಂದಿಗೆ ಸೇನೆ ನಡೆಸಿದ ಗುಂಡಿನ ದಾಳಿ ವಿಡಿಯೋ ಇದೀಗ ಭಾರತೀಯರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಗುಂಡಿನ ಮೊರೆತೆದ ವಿಡಿಯೋ ಎದೆ ಝಲ್ ಎನಿಸುವಂತಿದೆ. ಈ ಕಾಳಗದಲ್ಲಿ CRPF ಡೆಪ್ಯೂಟಿ ಸೂಪರಿಡೆಂಟ್ ಹಾಗೂ ಕಾನ್ಸ್‌ಸ್ಟೇಬಲ್ ಗಾಯಗೊಂಡಿದ್ದಾರೆ.

Scroll to load tweet…

ಪುಲ್ವಾಮಾ ಉಗ್ರರ ದಾಳಿ: ಮನೆಯೊಳಗೆ ನುಗ್ಗಿ ಪೊಲೀಸ್‌ ಅಧಿಕಾರಿ ಹಾಗೂ ಪತ್ನಿ ಹತ್ಯೆ!.

ಡ್ರೋನ್ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಮತ್ತಷ್ಟು ಅಲರ್ಟ್ ಆಗಿದೆ. ಹೀಗಾಗಿ ಉಗ್ರರ ಬೆನ್ನಟ್ಟುತ್ತಿದೆ. ಉಗ್ರರ ಅಡಗುತಾಣಗಳ ಮೇಲೆ ಸೇನೆ ದಾಳಿ ಮಾಡುತ್ತಿದೆ. ಇದೀಗ ಮಲ್ಹೋರ ಪರಿಂಪೋರದಲ್ಲಿ ಕಾರ್ಯಚರಣೆ ಮುಂದುವರಿದಿದೆ.