Asianet Suvarna News Asianet Suvarna News

ಮುಸ್ಲಿಂ ಹುಡುಗನ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ!

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಈ ಅಭಿಮಾನಿ ಉಳಿದ ಅಭಿಮಾನಿಗಳಿಗಿಂತ ಸಂಪೂರ್ಣವಾಗಿ ಭಿನ್ನ. ಈ ಸೂಪರ್ ಅಭಿಮಾನಿಯ ಹೆಸರು ಯಮೀನ್ ಸಿದ್ದಿಕಿ. ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಹಿಂದೂ ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿಯ ಮೇಲಿನ ಅಭಿಮಾನ ಮೆರೆದಿದ್ದಾರೆ.
 

Super fan of Yogi Adityanath Muslim youth got Uttar Pradesh CM tattoo inked on his chest san
Author
Bengaluru, First Published Jun 13, 2022, 10:49 PM IST

ಲಕ್ನೋ (ಜೂನ್ 13): ಸಿನಿಮಾ ನಟರು, ಕ್ರೀಡಾಪಟುಗಳು, ಹಾಲಿವುಡ್ ತಾರೆಯರಿಗೆಯುವ ಜನರ ಕ್ರೇಜ್ ಅನ್ನು ಬಹಳ ಜನರ ನೋಡಿರಬಹುದು. ಆದರೆ, ರಾಜಕಾರಣದಲ್ಲಿ ಅಂಥ ಅಭಿಮಾನ ಕಾಣಸಿಗುವುದು ಬಹಳ ಅಪರೂಪ. ಅದರಲ್ಲೂ ಉತ್ತರ ಭಾರತದಲ್ಲಿ (North India) ಇಂಥ ಕ್ರೇಜ್ ಬಹಳ ಕಡಿಮೆ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ (Uttar Pradesh CM) ಯೋಗಿ ಆದಿತ್ಯನಾಥ್ (Yogi Adityanath) ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಿಫ್ಟ್ ನೀಡಿದ್ದಾನೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಈ ಅಭಿಮಾನಿ ಉಳಿದ ಅಭಿಮಾನಿಗಳಿಗಿಂತ ಭಿನ್ನ. ಈ ವ್ಯಕ್ತಿಯ ಹೆಸರು ಯಮೀನ್ ಸಿದ್ದಿಕಿ (Yameen Siddiqui). 23 ವರ್ಷದ ಯಮೀನ್ ಯೋಗಿಯನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಫರೂಕಾಬಾದ್ ಮತ್ತು ಮೈನ್‌ಪುರಿ ಜಿಲ್ಲೆಯ ಗಡಿಯಲ್ಲಿರುವ ತೆಹಸಿಲ್ ಅಲಿಗಂಜ್‌ನ ಸರಾಯ್ ಆಗಟ್ ನಲ್ಲಿ ಅವರ ಮನೆ ಇದೆ. ಅವರು ಸ್ಥಳೀಯ ಪಟ್ಟಣದಲ್ಲಿ ಚಪ್ಪಲಿಯ ವ್ಯಾಪಾರವನ್ನು ಹೊಂದಿದ್ದಾರೆ.

ಮೊದಲಿನಿಂದಲೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯಾದ ನಂತರ ಯಮೀನ್ ಅವರ ಕಾರ್ಯಶೈಲಿ ಮತ್ತು ಜನಪರ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ. ಮುಖ್ಯಮಂತ್ರಿಯ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಹೆಚ್ಚಿತೆಂದರೆ, ಯೋಗಿ ಅವರ ಹುಟ್ಟುಹಬ್ಬದಂದು (ಜೂನ್ 5) ಅವರು ವಿಶೇಷ ಉಡುಗೊರೆಯನ್ನು ನೀಡಲು ತಮ್ಮ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ.

ಯಮೀನ್ ಇನ್ನೂ ಯುಪಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ, ಆದರೆ ಭವಿಷ್ಯದಲ್ಲಿ ಯಮೀನ್ ಯೋಗಿಯನ್ನು ಭೇಟಿಯಾಗಿ ತಾವು ಹಾಕಿಸಿಕೊಂಡಿರುವ ಹಚ್ಚೆಯನ್ನು ತೋರಿಸಲು ಬಯಸಿದ್ದಾರೆ. 

ಮುಸ್ಲಿಂ ಗೆಳೆಯರ ಟೀಕೆ: ಹಿಂದು ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರ ಹಚ್ಚೆಯನ್ನು ಯಮೀನ್ ಎದೆಯ ಮೇಲೆ ಹಾಕಿಸಿಕೊಂಡಿರುವುದು, ಅವರ ಮುಸ್ಲಿ ಸ್ನೇಹಿತರಿಗೆ ಇಷ್ಟವಾಗಿಲ್ಲ. ಬಹುತೇಕ ಸ್ನೇಹಿತರು ಈ ಕುರಿತಾಗಿ ಅವರನ್ನು ಟೀಕೆ ಮಾಡಿದ್ದು ಮಾತ್ರವಲ್ಲ, ಯಮೀನ್ ರನ್ನು ಯಾವುದೇ ಕಾರ್ಯಕ್ರಮದಲ್ಲೂ ಸೇರಿಸುತ್ತಿಲ್ಲ.  ಯಮೀನ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ರಚನೆಯಾದಾಗಿನಿಂದ, ರಾಜ್ಯದ ಚಿತ್ರಣವೇ ಬದಲಾಗಿದೆ. ಯೋಗಿ ಸರ್ಕಾರದ ಯೋಜನೆ ಎಲ್ಲಾ ಬಡವರಿಗೆ ಒಂದೇ. ಹಿಂದೂ, ಮುಸ್ಲಿಂ, ದಲಿತ ಎಂದು ತಾರತಮ್ಯ ಮಾಡಿಲ್ಲ. ಹಿಂದೂ ಅಥವಾ ಮುಸಲ್ಮಾನರಿರಲಿ ಎಲ್ಲರಿಗೂ ಸಮಾನವಾಗಿ ಯೋಜನೆಗಳ ಲಾಭ ದೊರೆಯುತ್ತಿದೆ ಎಂದಿದ್ದಾರೆ.

ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ, ಕಲ್ಲು ತೂರಿದ ಒಬ್ಬರನ್ನೂ ಬಿಡಬೇಡಿ, ಉತ್ತರ ಪ್ರದೇಶದಲ್ಲಿ ಯೋಗಿಯ ಖಡಕ್ ಆದೇಶ!

ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಯ ನಂತರ ನಡೆದ ಕಲ್ಲು ತೂರಾಟ ಮತ್ತು ಗದ್ದಲದ ಬಗ್ಗೆ ಮಾತನಾಡಿದ ಯಮೀನ್, ಯೋಗಿ ಆದಿತ್ಯನಾಥ್ ಅವರು ಉತ್ತಮ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳು ಈ ಕಲ್ಲು ತೂರಾಟ ಮತ್ತು ಗದ್ದಲವನ್ನು ಉಂಟುಮಾಡಲು ಸಂಚು ರೂಪಿಸಿದ್ದವು ಎಂದಿದ್ದಾರೆ.

ಹಿಂಸಾಚಾರದ ಬೆನ್ನಲ್ಲೇ ಸಿಎಂ ಯೋಗಿ ಕಠಿಣ ನಿರ್ಧಾರ, ಆರೋಪಿಗಳ ವಿರುದ್ಧ ಕ್ರಮಕ್ಕೆ ಕೈಗೊಳ್ಳಲು ಸೂಚನೆ!

ಆಕ್ಷೇಪಾರ್ಹ ಪೋಸ್ಟ್ ಮಾಡಿದ ವ್ಯಕ್ತಿಯ ಬಂಧನ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಕ್ರಮ್ ಅಲಿ ಅಕಾ ಗುಲ್ಬಹಾರ್, ಖಜ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ತೆಟಾರಿಯಾ ಗ್ರಾಮದ ನಿವಾಸಿಯಾಗಿದ್ದು, ಪೇಂಟರ್ ಆಗಿದ್ದಾನೆ. ಅವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಅದು ವೈರಲ್ ಆಗಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios