ಉತ್ತರ ಪ್ರದೇಶದ ಮದರಸಾಗಳಿಗೆ ಶುಕ್ರವಾರದ ಬದಲು ಭಾನುವಾರ ರಜೆ ?
ಉತ್ತರಪ್ರದೇಶದಲ್ಲಿ ಮದರಸಾಗಳಲ್ಲಿ ವಾರದ ರಜೆಯನ್ನು ಶುಕ್ರವಾರದ ಬದಲು ಭಾನುವಾರ ನಿಗದಿ ಮಾಡುವ ಪ್ರಸ್ತಾವನೆಯನ್ನು ಮುಂದಿನ ತಿಂಗಳು ಚರ್ಚಿಸಲಾಗುತ್ತದೆ ಎಂದು ಮದರಸಾ ಶಿಕ್ಷಣ ಮಂಡಳಿ ಅಧ್ಯಕ್ಷ ಇಫ್ತಿಕಾರ್ ಅಹಮ್ಮದ್ ಜಾವೇದ್ ಬುಧವಾರ ಹೇಳಿದ್ದಾರೆ.

ಲಕ್ನೋ: ಉತ್ತರಪ್ರದೇಶದಲ್ಲಿ ಮದರಸಾಗಳಲ್ಲಿ ವಾರದ ರಜೆಯನ್ನು ಶುಕ್ರವಾರದ ಬದಲು ಭಾನುವಾರ ನಿಗದಿ ಮಾಡುವ ಪ್ರಸ್ತಾವನೆಯನ್ನು ಮುಂದಿನ ತಿಂಗಳು ಚರ್ಚಿಸಲಾಗುತ್ತದೆ ಎಂದು ಮದರಸಾ ಶಿಕ್ಷಣ ಮಂಡಳಿ ಅಧ್ಯಕ್ಷ ಇಫ್ತಿಕಾರ್ ಅಹಮ್ಮದ್ ಜಾವೇದ್ ಬುಧವಾರ ಹೇಳಿದ್ದಾರೆ. ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆ ದಿನವಾಗಿರುವ ಕಾರಣ ಆ ದಿನ ಮದರಸಾಗಳಿಗೆ ರಜೆ ಇರುತ್ತದೆ. ಆದರೆ ಮದರಸಾಗೆ ಏಕೆ ವಿಶೇಷ ಪ್ರಾಧಾನ್ಯ? ಇತರ ಶಿಕ್ಷಣ ಸಂಸ್ಥೆಗಳಂತೆ ಅವಕ್ಕೂ ಭಾನುವಾರ ರಜೆ ಇರಬೇಕು ಎಂಬುದು ಕೆಲವರ ಬೇಡಿಕೆ. ಹೀಗಾಗಿ ಈ ಬೇಡಿಕೆಯನ್ನು ಉತ್ತರ ಪ್ರದೇಶ ಸರ್ಕಾರ ಪರಿಶೀಲಿಸುತ್ತಿದೆ. ಈ ಕುರಿತು ಇತ್ತೀಚೆಗೆ ನಡೆದ ಮದರಸಾಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಪರ-ವಿರೋಧ ವ್ಯಕ್ತವಾಯಿತು. ಜನವರಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಜೆಯ ಕುರಿತ ಪ್ರಸ್ತಾವನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಜಾವೇದ್ ಹೇಳಿದ್ದಾರೆ.
ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು: ತನಿಖೆಗೆ ಆದೇಶ
Uttar Pradesh: ಮದರಸಾ ವಿದ್ಯಾರ್ಥಿಗಳಿಗಿಲ್ಲ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ