Asianet Suvarna News Asianet Suvarna News

ಕಳೆದ ವರ್ಷ ದೇಶದಲ್ಲಿ ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣ 18% ಏರಿಕೆ!

*2020ರಲ್ಲಿ10,677 ಕೃಷಿಕರ ಆತ್ಮಹತ್ಯೆ 
*ಗುರುವಾರ ಬಿಡುಗಡೆಯಾದ NCRB ವರದಿಯಲ್ಲಿ ಬಹಿರಂಗ
*ಮಹಾರಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ!
*CAPF ಸಿಬ್ಬಂದಿಗಳ  ವರದಿ ಕೈಬಿಟ್ಟ ಎನ್‌ಸಿಆರ್‌ಬಿ 

Suicides among farm workers rose 18% in 2020 reports National Crime Records Bureau
Author
Bengaluru, First Published Oct 30, 2021, 2:36 PM IST
  • Facebook
  • Twitter
  • Whatsapp

ನವದೆಹಲಿ(ಅ. 30 ) : ಗುರುವಾರ (ಅ. 28) ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ( National Crime Records Bureau- NCRB) ವರದಿಯ ಪ್ರಕಾರ 2020 ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಕೃಷಿ ಕಾರ್ಮಿಕರ ಸಂಖ್ಯೆ ಹಿಂದಿನ ವರ್ಷಕ್ಕಿಂತ 18% ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಸ್ವಂತ ಭೂಮಿಯನ್ನು ಹೊಂದಿರುವ ರೈತರ ಆತ್ಮಹತ್ಯೆ ಪ್ರಮಾಣ ಕಳೆದ ವರ್ಷ ಇಳಿಕೆ ಕಂಡಿದೆ.

ಹೆಚ್ಚು ಆತ್ಮಹತ್ಯೆ: ಕರ್ನಾಟಕ ನಂ.5 - ಮಹಾರಾಷ್ಟ್ರ ನಂ.1

ಕಳೆದ ವರ್ಷ ಭಾರತೀಯ ಆರ್ಥಿಕತೆಯಲ್ಲಿ ಕೃಷಿ ವಲಯದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು. ಕೊರೊನಾ ಲಾಕ್‌ಡೌನ್‌ನಿಂದ ಇತರ ಉದ್ಯಮಗಳನ್ನು ನಷ್ಟವನ್ನು ಅನುಭವಿಸಿದ್ದವು. ಆದರೆ ಉತ್ತಮ ಮಾನ್ಸೂನ್ ಮತ್ತು ನಿರಂತರ ಕೃಷಿ ಚಟುವಟಿಕೆಗಳ ಮುಂದುವರಿಕೆಯ ಹಿನ್ನೆಲೆಯಲ್ಲಿ ಈ ವಲಯ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಪಿಎಂ ಕಿಸಾನ್‌ನಂತಹ ಆದಾಯ ಬೆಂಬಲ ಯೋಜನೆಗಳಿಂದ ಪ್ರಯೋಜನ ಪಡೆಯದ ಅಥವಾ ಭೂರಹಿತ ಕೃಷಿ ಕಾರ್ಮಿಕರು ಕೊರೊನಾ ಲಾಕ್‌ಡೌನ್‌ನಲ್ಲಿ ಹೆಚ್ಚಿನ ಮಟ್ಟದ ಸಂಕಷ್ಟವನ್ನು ಎದುರಿಸಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಎನ್‌ಸಿಆರ್‌ಬಿ ವರದಿಯು ರೈತರ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ.

2020ರಲ್ಲಿ 10,677  ಕೃಷಿಕರ ಆತ್ಮಹತ್ಯೆ!

ಒಟ್ಟಾರೆಯಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 10,677 ಜನರು 2020ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ, ಇದು 2019 ರಲ್ಲಿ ಸಾವನ್ನಪ್ಪಿದ 10,281 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇವರಲ್ಲಿ ಹಲವರು ಕೃಷಿ ಚಟುವಟಿಕೆ ಹಾಗೂ ಕೆಲಸವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದವರು ಎಂದು ವರದಿ ತಿಳಿಸಿದೆ. 2020 ರಲ್ಲಿ ಕೃಷಿ ಕಾರ್ಮಿಕರಲ್ಲಿ 5,098 ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರು, ಇದು ಕಳೆದ ವರ್ಷ ಸಾವನ್ನಪ್ಪಿದ 4,324 ಕ್ಕಿಂತ 18% ಹೆಚ್ಚಾಗಿದೆ.

ಪ್ರಿಯಾಂಕಾ ಬಳಿ ನೋವು ತೋಡಿಕೊಳ್ಳುತ್ತಾ ಪ್ರಜ್ಞಾಹೀನಳಾದ ರೈತನ ಮಗಳು!

ಆದಾಗ್ಯೂ ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡುವ ರೈತರಲ್ಲಿ, ಆತ್ಮಹತ್ಯೆಗಳ ಸಂಖ್ಯೆ  5,129 ರಿಂದ 4,940 ಕ್ಕೆ ಇಳಿದಿದೆ. ಲೀಸ್ ಜಮೀನು ಪಡೆದು ಕೃಷಿ ಮಾಡುವ ಹಿಡುವಳಿದಾರ ರೈತರಲ್ಲಿ, ಆತ್ಮಹತ್ಯೆಗಳು 828 ರಿಂದ 639 ಕ್ಕೆ 23% ರಷ್ಟು ಕಡಿಮೆಯಾಗಿದೆ. ಕೃಷಿ ವಲಯದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರಿದ ರಾಜ್ಯದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಒಟ್ಟು 4,006 ಕೃಷಿಕರ ಆತ್ಮಹತ್ಯೆಗಳ ಜತೆ ಕೃಷಿ ಕಾರ್ಮಿಕರ ಆತ್ಮಹತ್ಯೆಯಲ್ಲಿ 15% ಹೆಚ್ಚಳವಾಗಿದೆ. ಕರ್ನಾಟಕ (2016), ಆಂಧ್ರಪ್ರದೇಶ (889) ಮತ್ತು ಮಧ್ಯಪ್ರದೇಶ (735) ಆತ್ಮಹತ್ಯೆ ಪ್ರಕರಣಗಳಲ್ಲಿ ಕಳಪೆ ದಾಖಲೆ ಹೊಂದಿರುವ ಇತರ ರಾಜ್ಯಗಳು. 

CAPF ಸಿಬ್ಬಂದಿಗಳ  ವರದಿ ಕೈಬಿಟ್ಟ ಎನ್‌ಸಿಆರ್‌ಬಿ 

ಎನ್‌ಸಿಆರ್‌ಬಿ.  ಅಪಘಾತದಿಂದಾಗಿ ಸಾವುಗಳು ಮತ್ತು ಆತ್ಮಹತ್ಯೆಗಳ ವರದಿಯ 2020 ರ ಆವೃತ್ತಿಯಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (Central Armed Police Forces) ಅಧ್ಯಾಯವನ್ನು ಯಾವುದೇ ಕಾರಣವನ್ನು ಹೇಳದೆ ಕೈಬಿಟ್ಟಿದೆ. 2019 ರ ವರದಿಯ ಪ್ರಕಾರ, ಒಟ್ಟು 104 CAPF ಸಿಬ್ಬಂದಿ ವಿವಿಧ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 36 ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 2019 ರಲ್ಲಿ 14 ಕೌಟುಂಬಿಕ ಸಮಸ್ಯೆ ಮತ್ತು ಮೂರು ಸೇವಾ ಸಂಬಂಧಿತ ಸಮಸ್ಯೆ - CAPF ಸಿಬ್ಬಂದಿಯ ಆತ್ಮಹತ್ಯೆಗೆ ಕಾರಣವಾಗಿತ್ತು ಎಂದು ವರದಿ ತಿಳಿಸಿತ್ತು. 

ಗುಡ್ ನ್ಯೂಸ್ : ಪ್ರತಿ ರೈತರಿಗೆ ಸಾಲ ನೀಡುವ ಯೋಜನೆ

2020 ರ ವರದಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ COVID-19 (ಸೋಂಕಿತ, ಚೇತರಿಸಿಕೊಂಡ ಮತ್ತು ಬಲಿಯಾದ) ಪರಿಣಾಮದ ಅಂಕಿ ಸಂಖ್ಯೆಯನ್ನು ಸೇರಿಸಲು ನಿರ್ಧರಿಸಲಾಗಿತ್ತು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದರು. ಆದರೆ ಅದನ್ನು ಈ ಆವೃತ್ತಿಯಲ್ಲಿ ಸೇರಿಸಲಾಗಿಲ್ಲ.

Follow Us:
Download App:
  • android
  • ios