ಬೆಂಗಳೂರು ಕುಳಿತಲ್ಲಿಯೇ ಪ್ರಾಣಬಿಟ್ಟ ಕಟ್ಟಡ ಕಾರ್ಮಿಕ; ಸತ್ತು ಒಂದು ದಿನವಾದ್ರೂ ಯಾರಿಗೂ ಗೊತ್ತಾಗಿಲ್ಲ!

ಗಾರೆ ಕೆಲಸ ಮಾಡುವಾಗ ಸುಸ್ತಾಗಿದ್ದಕ್ಕೆ ಇಂದಿರಾ ಕ್ಯಾಂಟೀನ್ ಬಳಿ ಬಂದು ಕುಳಿತುಕೊಂಡ ಕಾರ್ಮಿಕ, ತಾನು ಕುಳಿತಲ್ಲಿಯೇ ಸಾವನ್ನಪ್ಪಿದ್ದಾನೆ. ಈತ ಸತ್ತು ಒಂದು ದಿನವಾದರೂ ಯಾರಿಗೂ ಗೊತ್ತಾಗಿಲ್ಲ.

Bengaluru construction worker dies while sitting No one knows even day after death sat

ಬೆಂಗಳೂರು (ಆ.01): ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ವ್ಯಕ್ತಿ ಗಾರೆ ಕೆಲಸ ಮಾಡುತ್ತಾ ಸುಸ್ತಾಗಿದ್ದು, ಊಟಕ್ಕೆಂದು ಮೇಸ್ತ್ರಿ ಕೇಳಿಕೊಂಡು ಇಂದಿರಾ ಕ್ಯಾಂಟೀನ್ ಬಳಿ ಬಂದಿದ್ದಾನೆ. ಇಂದಿರಾ ಕ್ಯಾಂಟೀಕ್ ಪಕ್ಕದ ಶೆಡ್‌ ಒಂದರಲ್ಲಿ ಕುಳಿತುಕೊಂಡ ಕಾರ್ಮಿಕ ಕುಳಿತ ಸ್ಥಳದಲ್ಲಿಯೇಋ ಪ್ರಾಣ ಬಿಟ್ಟಿದ್ದಾನೆ. ಈತ ಪ್ರಾಣ ಬಿಟ್ಟು ಒಂದು ದಿನವಾದರೂ ಯಾರಿಗೂ ಗೊತ್ತಾಗಿಲ್ಲ.

ಬೆಂಗಳೂರಿನ ಬಾಗಲಗುಂಟೆಯ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಲಿಂಗಯ್ಯ ಎಂದು ಗುರುತಿಸಲಾಗಿದೆ. ರಾಮನಗರ ನಿವಾಸಿಯಾಗಿರುವ ಶಿವಲಿಂಗಯ್ಯ ಗಾರೆ ಕೆಲಸ ಮಾಡುವುದಕ್ಕಾಗಿ ಬೆಂಗಳೂರಿಗೆ ಬಂದು ವಾಸವಾಗಿದ್ದನು. ಆದರೆ, ನಿನ್ನೆ ಕೆಲಸ ಮಾಡುವ ಮಧ್ಯದಲ್ಲಿ ತನಗೆ ಸುಸ್ತಾಗಿದ್ದು, ಊಟಕ್ಕೆ ಹೋಗಿ ಬರುವುದಾಗಿ ಬಂದು ಇಂದಿರಾ ಕ್ಯಾಂಟೀನ್ ಪಕ್ಕದ ಶೆಡ್‌ನ ಬಳಿ ಕುಳಿತುಕೊಂಡಿದ್ದಾರೆ. ಆದರೆ, ಕುಳಿತುಕೊಂಡ ಸ್ಥಳದಲ್ಲಿಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.

ಉಚಿತ ಸ್ಕೀಂಗೆ ಹಣವಿದೆ, ಚರಂಡಿ ನಿರ್ಮಾಣಕ್ಕೆ ಇಲ್ಲವೆ? ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಇನ್ನು ಶಿವಲಿಂಗಯ್ಯ ನಿನ್ನೆ ಮಧ್ಯಾಹ್ನದ ವೇಳೆಯೇ ಮೃತಪಟ್ಟಿರುವ ಶಂಕೆಯಿದೆ. ಆದರೆ, ಎಲ್ಲರೂ ಅಲ್ಲೊಬ್ಬ ಕಾರ್ಮಿಕ ಸುಸ್ತಾಗಿ ಕುಳಿತುಕೊಂಡೇ ನಿದ್ದೆ ಮಾಡುತ್ತಿದ್ದಾನೆ ಎಂದು ಸುಮ್ಮನಾಗಿದ್ದಾರೆ. ಆದರೆ, ಒಂದು ದಿನ ಕಳೆದರೂ ಕುಳಿತಲ್ಲಿಯೇ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆ ಪೊಲೀಸರು ಪರಿಶೀಲನೆ ಮಾಡಿದಾಗ ಆತ ಮೃತಪಟ್ಟಿರುವುದು ಖಚಿತವಾಗಿದೆ. ಇನ್ನು ಆತನ ಬಳಿಯಿದ್ದ ಕೆಲವು ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಈತ ರಾಮನಗರ ಮೂಲದವನಾಗಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಆತನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಈಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಬಂಧಿಕರು ಮೃತದೇಹ ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದ ಮುಖ್ಯ ಶಿಕ್ಷಕ:
ರಾಯಚೂರು (26-12-2023):
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ ಸುಸ್ತಾಗುತ್ತಿದೆ ಎಂದು ಮುಖ್ಯ ಶಿಕ್ಷಕರ ಕೊಠಡಿಗೆ ಬಂದು ಕುರ್ಚಿಯಲ್ಲಿ ಕುಳಿತು ಕಡತಗಳನ್ನು ಪರಿಶೀಲನೆ ಮಾಡುವಾಗಲೇ ಹೃದಯಾಘಾತವಾಗಿ ಕುಳಿತಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗದ್ರಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿತ್ತು. ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪ್ರಭಾರ ಮುಖ್ಯ ಶಿಕ್ಷಕನಿಗೆ ಹೃದಯಘಾತ ಸಂಭವಿಸಿದ್ದು, ತಾವು ಕುಳಿತುಕೊಂಡ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿರುವ ದುರ್ಘಟನೆ ಸಂಭವಿಸಿತ್ತು.

Bengaluru construction worker dies while sitting No one knows even day after death sat

ಆರ್‌ಎಸ್‌ಎಸ್‌ ಮುಖಂಡನಿಗೆ ಹೃದಯಾಘಾತ: ಕಾರಲ್ಲಿ ಕುಳಿತುಕೊಂಡೇ ಪ್ರಾಣಬಿಟ್ರು

ಪ್ರಭಾರ ಮುಖ್ಯ ಶಿಕ್ಷಕ ಸುರೇಶ (57) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಳಗ್ಗೆ ಮೊದಲ ತರಗತಿ ಪಾಠ ಮುಗಿಸಿ, ತುಂಬಾ ಸುಸ್ತಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿ ಮುಖ್ಯ ಶಿಕ್ಷಕರ ಕೋಣೆಯತ್ತ ಬಂದು ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಎದೆಯ ನೋವು ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷ್ಯ ಮಾಡಿ, ಇತರೆ ದಾಖಲೆಗಳನ್ನು ಬರೆದಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಗೆ ಸಂಬಂಧಿಸಿದ ದಾಖಲೆ ಬರೆಯುವ ವೇಳೆ ಹೃದಯಘಾತ ಸಂಭವಿಸಿದೆ. ನಂತರ, ಕೆಲವೇ ಕ್ಷಣಗಳಲ್ಲಿ ಕುಳಿತ ಕುರ್ಚಿಯಲ್ಲೇ ಮುಖ್ಯ ಶಿಕ್ಷಕ ಸುರೇಶ್ ಪ್ರಾಣಬಿಟ್ಟಿದ್ದರು.

Latest Videos
Follow Us:
Download App:
  • android
  • ios