Asianet Suvarna News Asianet Suvarna News

ಪುರಿ ಸಮುದ್ರ ತಟದಲ್ಲಿ ವಿರಾಜಮಾನ ವಿಶ್ವದ ಮೊದಲ 'ಚಿಪ್ಪಿನ ಗಣೇಶ'!

* ಕೊರೋನಾ ಮಹಾಮಾರಿ ಮಧ್ಯೆ ಇಂದು 10 ದಿನಗಳ ಗಣೇಶ ಉತ್ಸವ 

* ಮುಂಬೈನಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಬ್ರೇಕ್

* ಒಡಿಶಾದ ಪುರಿ ಸಮುದ್ರ ತಟದಲ್ಲಿ ವಿರಾಜಮಾನ ಚಿಪ್ಪಿನ ಗಣೇಶ

Sudarsan Pattnaik Creates Sand Art Of Lord Ganesh With 7000 Seashells pod
Author
Bangalore, First Published Sep 10, 2021, 9:32 AM IST

ಭುವನೇಶ್ವರ(ಸೆ.10): ಕೊರೋನಾ ಮಹಾಮಾರಿ ಮಧ್ಯೆ ಇಂದು 10 ದಿನಗಳ ಗಣೇಶ ಉತ್ಸವ ಆರಂಭವಾಗುತ್ತಿದೆ. ಹೀಗಿರುವಾಗ ವಿವಿಧ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಪೆಂಡಾಲ್‌ಗಳನ್ನು ನಿರ್ಮಿಸಿ ಮಹಾ ಆರತಿಯಂತಹ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಈ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಯಾಕೆಂದರೆ ಇಲ್ಲಿ ಗಣೇಶ ಉತ್ಸವವನ್ನು ಬಹು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ, ದರ್ಶನದ ಸಮಯದಲ್ಲಿ ಜನಸಂದಣಿ ತಡೆಯಲು ಸಾರ್ವಜನಿಕ ಗಣೇಶ ಉತ್ಸವ ನಿಷೇಧಿಸಲಾಗಿದೆ. ಅಲ್ಲದೇ ಮೆರವಣಿಗೆಗಳಲ್ಲೂ ಜನರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ.

ಈ ಚಿತ್ರ ಒಡಿಶಾದ ಪುರಿ ಕಡಲತೀರದ್ದಾಗಿದೆ. ಪ್ರಸಿದ್ಧ ಮರಳು ಶಿಲ್ಪಿ, ಪದ್ಮಶ್ರೀ ಪ್ರಶಸ್ತಿ ಪಡೆದ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲರಳಿದ ಗಣೇಶ ಮೂರ್ತಿಯಾಗಿದೆ. ಕಲಾವಿದ ಪಟ್ನಾಯಕ್ ಅನ್ವಯ ಸುಮಾರು 7000 ಚಿಪ್ಪುಗಳನ್ನು ಬಳಸಿ 'ವಿಶ್ವ ಶಾಂತಿ' ಸಂದೇಶದೊಂದಿಗೆ ಮೊದಲ ಚಿಪ್ಪಿನ ವಿಗ್ರಹವನ್ನು ತಯಾರಿಸಲಾಗಿದೆ. ಇದು ಗಣೇಶನ ಮರಳು ಶಿಲ್ಪದ ಜೊತೆ ವಿಶ್ವದ ಮೊದಲ ಸೀಶೆಲ್ ಪ್ರತಿಮೆಯಾಗಿದೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿದ್ದಾರೆ.

ಗಣೇಶನ ದರ್ಶನಕ್ಕಾಗಿ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲು ಸೂಚನೆ

ದೇಶಾದ್ಯಂತ ಕೊರೋನಾ ವೈರಸ್‌ನ 3ನೇ ಅಲೆ ಅಪ್ಪಳಿಸುವ ಭೀತಿಯ ನಡುವೆಯೇ, ಮುಂಬೈನಲ್ಲಿ ಸಾರ್ವಜನಿಕವಾಗಿ ಗಣೇಶ ಹಬ್ಬದ ಆಚರಣೆಗೆ ಮುಂಬೈ ಪೊಲೀಸರು ಷರ​ತ್ತಿ​ನ ಅನುಮತಿ ನೀಡಿದ್ದಾರೆ. ಈ ಪ್ರಕಾರ ಸಾರ್ವಜನಿಕವಾಗಿ ಹಬ್ಬ ಆಚರಿಸುವ ಆಯೋಜಕರು, ಯಾವುದೇ ಕಾರಣಕ್ಕೂ ತಾವು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಬಾರದು. ವಿನಾಯಕನ ದರ್ಶನಕ್ಕಾಗಿ ಭಕ್ತರಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.

ಹಬ್ಬದ ದಿನವಾದ ಸೆ.10ರಿಂದ ಸೆ.19ರವರೆಗೆ ನಗರದಾದ್ಯಂತ ಸಿಆರ್‌ಪಿಸಿಯ ಸೆ.144ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಗಣೇಶ ಮೂರ್ತಿಯ ಮೆರವಣಿಗೆ ನಡೆಸುವಂತಿಲ್ಲ ಎಂದು ನಗರ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ನಿಷೇಧ ಹೇರಿತ್ತು. ಜತೆಗೆ ಜನರು ತಮ್ಮ ಮನೆಗಳಲ್ಲೇ ಹಬ್ಬ ಆಚರಿಸುವಂತೆ ಸಲಹೆ ನೀಡಿತ್ತು. ಗಣೇಶ ಮಂಟಪಗಳಲ್ಲಿ ಪ್ರತಿಷ್ಠಾಪನೆಯಾಗುವ ಗಣೇಶನ ದರ್ಶನಕ್ಕೆ ನಿಷೇಧ ಹೇರಲಾಗಿದ್ದು, ಆನ್‌ಲೈನ್‌ ಮೂಲಕವೇ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬುಧವಾರವಷ್ಟೇ ಮಹಾರಾಷ್ಟ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು.

Follow Us:
Download App:
  • android
  • ios