Asianet Suvarna News Asianet Suvarna News

ಸಿಬಿಐ ಮುಖ್ಯಸ್ಥರಾಗಿ ಸುಬೋಧ್‌ ಕುಮಾರ್‌ ಜೈಸ್ವಾಲ್‌ ಆಯ್ಕೆ!

* ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ದ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಜೈಸ್ವಾಲ್‌ 

* ಕೇಂದ್ರ ಸಿಬ್ಬಂದಿ ಸಚಿವಾಲಯ ಮಂಗಳವಾರ ಪ್ರಕಟಣೆ ಹೊರಡಿಸಿದೆ

* ಸಿಬಿಐ ನಿರ್ದೇಶಕರ ಹುದ್ದೆಯಲ್ಲಿ ಅವರು 2 ವರ್ಷ ಇರಲಿದ್ದಾರೆ.

Subodh Kumar Jaiswal Maharashtra IPS Officer Is New CBI Director pod
Author
Bangalore, First Published May 26, 2021, 8:03 AM IST

ನವದೆಹಲಿ(ಮೇ.26): ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ದ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಸುಬೋಧ್‌ ಕುಮಾರ್‌ ಜೈಸ್ವಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯ ಮಂಗಳವಾರ ಪ್ರಕಟಣೆ ಹೊರಡಿಸಿದೆ. ಸಿಬಿಐ ನಿರ್ದೇಶಕರ ಹುದ್ದೆಯಲ್ಲಿ ಅವರು 2 ವರ್ಷ ಇರಲಿದ್ದಾರೆ.

ಮಹಾರಾಷ್ಟ್ರ ಕೇಡರ್‌ನ 1985ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಜೈಸ್ವಾಲ್‌ ಪ್ರಸಕ್ತ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ನ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಒಟ್ಟು 109 ಅಧಿಕಾರಿಗಳ ಹೆಸರನ್ನು ಸಿಬಿಐ ನಿರ್ದೇಶಕರ ಹುದ್ದೆಗೆ ಪರಿಗಣಿಸಲಾಗಿತ್ತು. ಅಂತಿಮವಾಗಿ ಅದರಲ್ಲಿ 6 ಜನರ ಹೆಸರನ್ನು ಪ್ರಧಾನಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕರನ್ನು ಒಳಗೊಂಡ ಮೂವರ ಸಮಿತಿ ಮುಂದೆ ಇಡಲಾಗಿತ್ತು. ಸೋಮವಾರ ನಡೆದ ಸಭೆಯಲ್ಲಿ ಈ ಸಮಿತಿಯು ಸುಬೋಧ್‌ ಕುಮಾರ್‌, ಕುಮಾರ್‌ ರಾಜೇಶ್‌ ಚಂದ್ರ ಮತ್ತು ವಿ.ಎಸ್‌.ಕೆ.ಕೌಮುದಿ ಅವರ ಹೆಸರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತ್ತು. ಈ ಪೈಕಿ ಸುಬೋಧ್‌ ಅವರನ್ನು ಅಂತಿಮವಾಗಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.

2021ರ ಫೆ.2ರಂದು ಆರ್‌.ಕೆ.ಶುಕ್ಲಾ ನಿವೃತ್ತಿಯಾದ ಬಳಿಕ ಸಿಬಿಐ ನಿರ್ದೇಶಕರ ಹುದ್ದೆ ತೆರವಾಗಿತ್ತು.

Follow Us:
Download App:
  • android
  • ios