ನವದೆಹಲಿ(ಜು.16): ದಿನೇ ದಿನೇ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿರುವ ಕಾರಣ, ಮುಂದೊಂದು ದಿನ ವಾಸಕ್ಕೆ ಬೇರೆ ಗ್ರಹಕ್ಕೆ ಹೋಗಬಹುದು ಎಂಬ ಆತಂಕಗಳ ಬೆನ್ನಲ್ಲೇ, ಮುಂದಿನ ಕೆಲ ದಶಕಗಳಲ್ಲಿ ಭಾರತ ಸೇರಿದಂತೆ ವಿಶ್ವದ ಜನಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

ಈ ಹಿಂದೆ ಬಂದ ಸಾಂಕ್ರಾಮಿಕ ರೋಗಗಳು ಹೇಳದೆ ಕೇಳದೆ ಹೋದದ್ದೆಲ್ಲಿಗೆ?

ಅಚ್ಚರಿಯ ವಿಷಯವೆಂದರೆ 2048ಕ್ಕೆ ಭಾರತ ಜನಸಂಖ್ಯೆ ಗರಿಷ್ಠ ಮಟ್ಟವಾದ 160 ಕೋಟಿಗೆ ತಲುಪಲಿದೆ. ಆದರೆ 2100ರ ವೇಳೆಗೆ ಜನಸಂಖ್ಯೆ ಶೇ.32ರಷ್ಟುಇಳಿದು 109 ಕೋಟಿಗೆ ಕುಸಿಯಲಿದೆ. ಆದರೂ ಆ ವೇಳೆಗೆ ಭಾರತ ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರವಾಗಿರಲಿದೆ ಎಂದು ಅಮೆರಿಕದ ವಾಷಿಂಗ್ಟನ್‌ ವಿವಿಯ ಸೇರಿ ವಿಶ್ವದ ಹಲವು ವಿಜ್ಞಾನಿಗಳು ತಯಾರಿಸಿರುವ ವರದಿ ಹೇಳಿದೆ. ಜನನ ನಿಯಂತ್ರಣ ಹಾಗೂ ಮಹಿಳಾ ಶಿಕ್ಷಣ ಹೆಚ್ಚಳದಿಂದಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ಅಂದಾಜಿಸಿದ್ದಾರೆ. ಜನನ, ಮರಣ ಹಾಗೂ ವಲಸೆ ಪ್ರಮಾಣವನ್ನು ಅಂದಾಜಿಸಿ ವಿಜ್ಞಾನಿಗಳು ಈ ವರದಿಯನ್ನು ತಯಾರಿಸಿದ್ದಾರೆ.

ಚೀನಾದಲ್ಲಿ ಮುಸ್ಲಿಮರಿಗೆ ಬಲವಂತದ ಗರ್ಭಪಾತ, ಸಂತಾನಹರಣ!

ಇನ್ನು 2100ರ ವೇಳೆಗೆ ವಿಶ್ವದ ಜನಸಂಖ್ಯೆ 880 ಕೋಟಿಗೆ ತಲುಪಲಿದೆ. ಇದು ವಿಶ್ವಸಂಸ್ಥೆಯ ಅಂದಾಜಿಗಿಂತ 200 ಕೋಟಿ ಕಡಿಮೆ. ಆ ವೇಳೆಗೆ ಭಾರತ, ನೈಜೀರಿಯಾ, ಚೀನಾ ಹಾಗೂ ಅಮೆರಿಕದಲ್ಲಿ ಹೆಚ್ಚಿನ ಜನಸಂಖ್ಯೆ ಇರಲಿದೆ. ಈ ದೇಶಗಳು ವಿಶ್ವದ ಹೊಸ ಶಕ್ತಿ ಕೇಂದ್ರಗಳಾಗಲಿವೆ. ಇದೇ ವೇಳೆ ಭಾರತದಲ್ಲಿ ಕೆಲಸ ಮಾಡುವ ವಯಸ್ಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದ್ದು, 2017ರಲ್ಲಿ 76.2 ಕೋಟಿ ಇದ್ದ ದುಡಿಯುವ ವಯಸ್ಕರ ಸಂಖ್ಯೆ ಶತಮಾನದ್ಯಂತಕ್ಕೆ 57.8 ಕೋಟಿಗೆ ಇಳಿಯಲಿದೆ ಎಂದು ಹೇಳಿದೆ.