11ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅತ್ಯಾ*ಚಾರ ಮಾಡಿ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಹಣಕ್ಕಾಗಿ ಪೀಡಿಸಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಈ ಪ್ರಕರಣದಲ್ಲಿ, ಸಂತ್ರಸ್ತೆಯ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಭೋಪಾಲ್‌: 11ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಕಾರಿನಲ್ಲೇ ಅತ್ಯಾ*ಚಾರ ನಡೆಸಿ, ಈ ಘಟನೆಯನ್ನು ಚಿತ್ರೀಕರಿಸಿ ಆಕೆಯಿಂದ ಹಣ ಪೀಕಿದ ಬಳಿಕ ಆಕೆಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿದ ಪೈಶಾಚಿಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಹಪುರ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಸ್ನೇಹಿತನ ಮೂಲಕ ಆರೋಪಿ ಔಸಫ್ ಅಲಿ ಖಾನ್‌ನ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿದ ಬಳಿಕ ತನ್ನೊಂದಿಗೆ ಕಾರಲ್ಲಿ ಸುತ್ತಾಡಲು ಬರುವಂತೆ ಖಾನ್‌ ಕೋರಿದ್ದ. ಇದಕ್ಕೆ ಒಪ್ಪಿ ಹೋದ ವಿದ್ಯಾರ್ಥಿನಿಯ ಮೇಲೆ ಆತ ಕಾರಿನಲ್ಲಿ ಅತ್ಯಾ*ಚಾರವೆಸಗಿದ್ದಾನೆ. 

ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಬೇಡಿಕೆ

ಈ ಕೃತ್ಯವನ್ನು ಮಾಜ್ ಖಾನ್ ಎಂಬಾತ ಚಿತ್ರಿಸಿದ್ದಾನೆ. ಬಳಿಕ ಆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಇನ್ನೂ ಮೂರು ಕಾರಿನಲ್ಲಿ ಔಸಫ್‌ನ ಸ್ನೇಹಿತರು ಆಕೆಯ ಮೇಲೆ ಅತ್ಯಾ*ಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆ ಬಳಿ 1 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದಾರೆ. ಭೀತಿಯಿಂದ ಆಕೆ 40,000 ರು. ನೀಡಿದರೂ ಸುಮ್ಮನಾಗದೆ ಶೋಷಣೆ ಮುಂದುವರೆಸಿದ್ದಾರೆ.

ಹಿಂದೂ ಸಂಘಟನೆಗಳ ನೆರವಿನಿಂದ ಪ್ರಕರಣ ದಾಖಲು

ಕೊನೆಗೆ ಆಕೆ ಇಬ್ಬರ ಬಳಿಯೂ ಮಾತು ನಿಲ್ಲಿಸಿದಾಗ ಆಕೆಯೊಂದಿಗಿನ ಖಾಸಗಿ ವಿಡಿಯೋವನ್ನು ಅಸ್ತ್ರವಾಗಿ ಬಳಸಿಕೊಂಡು ಅದನ್ನು ಅವಳ ಸ್ನೇಹಿತರಿಗೆ ಹಂಚಿದ್ದಾರೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಸಂತ್ರಸ್ತೆ ಎಲ್ಲವನ್ನೂ ತನ್ನ ಪೋಷಕರಿಗೆ ತಿಳಿಸಿದ್ದು, ಹಿಂದೂ ಸಂಘಟನೆಗಳ ನೆರವಿನೊಂದಿಗೆ ಪ್ರಕರಣ ದಾಖಲಿಸಲಾಗಿದೆ.