Asianet Suvarna News Asianet Suvarna News

2 ಗಂಟೆಯಲ್ಲಿ 40ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಯ ಮಾರಕ ದಾಳಿ

ರಾಜಸ್ಥಾನದ ಬರ್ಮೇರ್‌ನಲ್ಲಿ ಬೀದಿನಾಯಿಯೊಂದು ತನ್ನ ಮಾರಕ ದಾಳಿಯಿಂದ ಜನರಲ್ಲಿ ಭೀತಿ ಹುಟ್ಟಿಸಿದೆ. 

Stray dog fatally attacked more than 40 people in 2 hours in Rajasthans Barmer akb
Author
First Published Dec 30, 2022, 6:10 PM IST

ಬರ್ಮೇರ್‌: ರಾಜಸ್ಥಾನದ ಬರ್ಮೇರ್‌ನಲ್ಲಿ ಬೀದಿನಾಯಿಯೊಂದು ತನ್ನ ಮಾರಕ ದಾಳಿಯಿಂದ ಜನರಲ್ಲಿ ಭೀತಿ ಹುಟ್ಟಿಸಿದೆ. ನಾಯಿಯೊಂದು ಕೇವಲ 2 ಗಂಟೆಯ ಅವಧಿಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಪರಿಣಾಮ ಆಸ್ಪತ್ರೆಯ ವಾರ್ಡ್ ಪೂರ್ತಿ ನಾಯಿ ಕಚ್ಚಿದವರಿಂದ ತುಂಬಿ ಹೋಗಿದೆ. ಈ ಆಘಾತಕಾರಿ ಘಟನೆ ರಾಜಸ್ಥಾನದ ಬರ್ಮೇರ್‌ನಲ್ಲಿ ನಡೆದಿದೆ.  ನಾಯಿ (Stray dog) ಒಬ್ಬರು ಇಬ್ಬರು ಮೂವರಿಗೆ ಒಟ್ಟೊಟ್ಟಿಗೆ ಕಚ್ಚಿದ ಘಟನೆಗಳನ್ನು ನೀವು ಇದುವರೆಗೆ ಕೇಳಿರಬಹುದು. ಆದರೆ ಇಲ್ಲಿ ನಾಯಿ ಕೇವಲ 2 ಗಂಟೆಯಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿ (Dog bite) ಗಾಯಗೊಳಿಸಿದ್ದು, ಇದರಿಂದ ಜನರು ಭಯಭೀತರಾದ ಘಟನೆ ನಡೆದಿದೆ. ಈ ನಾಯಿ ದಾಳಿಯಿಂದಾಗಿ ಸ್ಥಳೀಯರಲ್ಲಿ ಬೀದಿ ನಾಯಿ ಬಗ್ಗೆ ಭಯ ಶುರುವಾಗಿದ್ದು, ನಾಯಿ ಕಚ್ಚಿದವರೆಲ್ಲರೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಂಗುಡಿ ಇಟ್ಟಿದ್ದರಿಂದ ಆಸ್ಪತ್ರೆಯ ವಾರ್ಡ್‌ಗಳೆಲ್ಲವೂ (Hospital ward) ನಾಯಿ ಕಚ್ಚಿದವರಿಂದ ತುಂಬಿ ಹೋಗಿದೆ. 

ರಾಜಸ್ಥಾನದ (Rajasthan) ಬರ್ಮೇರ್ (Barmer) ಜಿಲ್ಲೆಯ ಕಲ್ಯಾಣಪುರದಲ್ಲಿ (Kalyanpur area) ಈ ಅವಾಂತರ ನಡೆದಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಮುನ್ಸಿಪಾಲಿಟಿಗೆ ಈ ಬಗ್ಗೆ ಮಾಹಿತಿ ನೀಡಿದ್ದಲ್ಲದೇ, ನಾಯಿ ಕಚ್ಚಿದ್ದರಿಂದ ಗಾಯಗೊಂಡ ಅನೇಕರಿಗೆ ಚಿಕಿತ್ಸೆ ನೀಡಿದ್ದಾರೆ. ನಂತರ ನಗರ ಪಾಲಿಕೆ ಸಿಬ್ಬಂದಿ ಈ ನಾಯಿಯನ್ನು ಹಿಡಿಯಲು ಎರಡು ತಂಡ ರಚಿಸಲಾಗಿತ್ತು, ಈ ತಂಡ ಈ ನಾಯಿಯನ್ನು ಹಿಡಿಯಲು ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.  ಘಟನೆಯ ಬಳಿಕ ನಗರದ ವಿವಿಧ ಭಾಗಗಳಲ್ಲಿರುವ ಬೀದಿನಾಯಿಗಳನ್ನು ಹಿಡಿಯಲು ನಗರ ಪಾಲಿಕೆ ಯೋಜನೆ ರೂಪಿಸಿದೆ. ಬೀದಿನಾಯಿಯ ದಿಢೀರ್ ದಾಳಿಯಿಂದ ಅನೇಕರು ಗಾಯಗೊಂಡಿದ್ದು ಅವರಲ್ಲಿ ಕೆಲವರನ್ನು ಅಡ್ಮಿಟ್ ಮಾಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ (Chief Medical Officer) ಅಧಿಕಾರಿ ಡಾ. ಬಿಎಲ್ ಮನ್ಸೂರಿಯಾ (Dr BL Mansooriya) ಹೇಳಿದ್ದಾರೆ. 

ಐಟಿ ಉದ್ಯೋಗಿಗಳೇ ಬೀದಿ ನಾಯಿಗಳ ಕಾಟದಿಂದ ಎಚ್ಚರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.3 ಕೋಟಿಗೂ ಅಧಿಕ ಜನಸಂಖ್ಯೆ (Population) ಇದ್ದು, ದಿನದ 24 ಗಂಟೆಗೂ ಕಾರ್ಯನಿರ್ವಹಿಸುವ ಸ್ಥಳವಾಗಿದೆ. ಇಲ್ಲಿ ಹಗಲು-ರಾತ್ರಿ (Day-night) ಎನ್ನದೇ ಕೆಲಸ ಮಾಡುವ ವರ್ಗಗಳು ತಮ್ಮ ಕಾರ್ಯವನ್ನು ಪ್ರತಿನಿತ್ಯ ನಿರ್ವಹಿಸುತ್ತಿವೆ. ಆದರೆ, ತಡರಾತ್ರಿಯ ವೇಳೆ ಕೆಲಸಕ್ಕೆ ಹೋಗುವುದು ಹಾಗೂ ಕೆಲಸದಿಂದ ಮನೆಗೆ ಹಿಂದಿರುಗುವಾಗ ನಿರ್ಜನ ಪ್ರದೇಶಗಳಲ್ಲಿ ಬೀದಿ ನಾಯಿಗಳು ವಾಹನಗಳನ್ನು ಅಟ್ಟಾಡಿಸಿಕೊಂಡು ಬಂದು ಕಚ್ಚಲು (bite) ಆಕ್ರಮಣ ಮಾಡುವ ಘಟನೆಗಳು ನಡೆಯುತ್ತಿವೆ. ಈ ಘಟನೆಗಳಿಂದ ಅನೇಕ ಉದ್ಯೋಗಸ್ಥರು (Employees) ತೊಂದರೆ ಅನುಭವಿಸುವಂತಾಗಿದೆ.

ಬೀದಿ ನಾಯಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಮುಂದಾಗುವಾಗ ದ್ವಿಚಕ್ರ ವಾಹನ (Bike Riders) ಸವಾರರು ಅಪಘಾತಕ್ಕೀಡಾಗುವ ಘಟನೆಗಳು ವರದಿಯಾಗುತ್ತಿವೆ. ಅಂತಹ ಸಂದರ್ಭಗಳಲ್ಲಿ ವಾಹನ ಸವಾರರು ನಾಯಿಗಳ ಕಡಿತಕ್ಕೆ ಒಳಗಾಗುವ ಹಾಗೂ ಅಪಘಾತಗೊಳ್ಳುವ ಪ್ರಕರಣ ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿದೆ. ಅದರಲ್ಲಿಯೂ ಐಟಿ ಕಾರಿಡಾರ್‌ ಪ್ರದೇಶಗಳಾದ ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಈ ಪ್ರಕರಣ ಅಧಿಕವಾಗಿವೆ ಎನ್ನುವುದು ಐಟಿ ಉದ್ಯೋಗಿಗಳನ್ನು ತೀವ್ರ ಆತಂಕಕ್ಕೆ ದೂಡುತ್ತಿದೆ. ಪ್ರತಿನಿತ್ಯ ಎರಡನೇ ಶಿಫ್ಟ್‌ ಮುಗಿಸಿಕೊಂಡು ಬರುವವರು ಹಾಗೂ ರಾತ್ರಿ ಪಾಳಿಗೆ ಕೆಲಸಕ್ಕೆ ಹೋಗುವವರು ಮನೆಗೆ ಬಂದಾಕ್ಷಣ ನಿಟ್ಟುಸಿರು ಬಿಡುತ್ತಿದ್ದಾರೆ.
 

Follow Us:
Download App:
  • android
  • ios