ಕಾರು ಪ್ರಯಾಣದ ವೇಳೆ ಮಾಸ್ಕ್‌ ಧರಿಸದೇ ಇದ್ದನ್ನು ಪ್ರಶ್ನಿಸಿದ ಪೊಲೀಸರು|  ನನ್ನ ಗಂಡನಿಗೆ ಮುತ್ತು ಕೊಡಬೇಕಾದರೆ ಏನು ಮಾಡುವುದು ಎಂದು ಮರುಪ್ರಶ್ನೆ

ನವದೆಹಲಿ(ಏ.20): ಕಾರು ಪ್ರಯಾಣದ ವೇಳೆ ಮಾಸ್ಕ್‌ ಧರಿಸದೇ ಇದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಮಹಿಳೆಯೊಬ್ಬರು, ಕಾರಿನಲ್ಲಿ ಮಾಸ್ಕ್‌ ಏಕೆ? ನನ್ನ ಗಂಡನಿಗೆ ಮುತ್ತು ಕೊಡಬೇಕಾದರೆ ಏನು ಮಾಡುವುದು ಎಂದು ಮರುಪ್ರಶ್ನೆ ಹಾಕಿ ಕೇಸು ಹಾಕಿಸಿಕೊಂಡ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.

Scroll to load tweet…

ಪಂಕಜ್‌ ಮತ್ತು ಅಭಾ ದಂಪತಿ ಮಾಸ್ಕ್‌ ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪೊಲೀಸರು ಅಡ್ಡಗಟ್ಟಿದಾಗ, ಅವರಿಗೇ ಧಮಕಿ ಹಾಕಿದ ಅಭಾ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದೂ ಅಲ್ಲದೆ ಮೇಲಿನಂತೆ ಪ್ರಶ್ನೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ಮೇಲೂ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ನಡುವೆ ಸೋಮವಾರ ನ್ಯಾಯಾಲಯಕ್ಕೆ ತೆರಳುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪಂಕಜ್‌, ಮಾಸ್ಕ್‌ ಹಾಕಿಕೊಳ್ಳುವಂತೆ ಹೇಳಿದರೂ ಪತ್ನಿ ಕೇಳಲಿಲ್ಲ. ಜೊತೆಗೆ ನನಗೂ ಹಾಕಿಕೊಳ್ಳಲು ಬಿಡಲಿಲ್ಲ ಎಂದು ತನ್ನ ನೋವು ತೋಡಿಕೊಂಡಿದ್ದಾನೆ.