ಉತ್ತರ ಪ್ರದೇಶ(ಏ. 15)  ಕೊರೋನಾ ವಿರುದ್ಧದ ಹೋರಾಟ ನಿರಂತರವಾಗಿದ್ದು ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ.  ಇದರ ನಡುವೆ ಉತ್ತರ ಪ್ರದೇಶದ ಮೋರಾದಾಬಾದ್ ನಿಂತ ಆತಂಕಕಾರಿ ಘಟನೆಯೊಂದು ವರದಿಯಾಗಿದೆ.

ರೋಗಿಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಲಾಗಿದೆ. ಆಂಬುಲೆನ್ಸ್ ನಲ್ಲಿ ಪೊಲೀಸರು ಮತ್ತು ವೈದ್ಯ ಸಿಬ್ಬಂದಿ ಇದ್ದರು.

ಪೊಲೀಸರ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು, ರಕ್ಷಣೆಗೆ ಹೋದವರಿಗೆ ಇಂಥ ಸ್ಥಿತಿ

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆಂಬುಲೆನ್ಸ್ ಚಾಲಕ ಇದೊಂದು ಪೂರ್ವನಿಯೋಜಿತವಾಗಿ ಪ್ಲಾನ್  ಮಾಡಿ ಮಾಡಿದ ಕೆಲಸ. ನಾವು ಕೊರೋನಾ ಸೋಂಕಿತರನನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತಿದ್ದೇವು ಆಗ ಇದ್ದಕ್ಕಿದ್ದಂತೆ ಜನರು ಒಂದೂಗೂಡಿದರು. ನಮ್ಮ ಮೇಲೆ ಕಲ್ಲು ತೂರಿದರು. ವೈದ್ಯರು ಸಹ ಈ ಪ್ರಕರಣದಲ್ಲಿ ಗಾಯಗೊಂಡರು ಎಂದು ಘಟನೆಯನ್ನು ವಿವರಿಸಿದ್ದಾರೆ. 

ಇಬ್ಬರು ವೈದ್ಯ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಏರಿಯಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.