Asianet Suvarna News Asianet Suvarna News

ಪೊಲೀಸರ ಮೇಲೆ ಕಲ್ಲು ತೂರಾಟ: ಮತ್ತೆ ಹತ್ತು ಜನರ ಬಂಧನ

ಸಾಮೂಹಿಕ ಪ್ರಾರ್ಥನೆ ಮಾಡದಂತೆ ತಡೆಯಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ| ಮತ್ತೆ ಹತ್ತು ಜನರನ್ನು ಬಂಧಿಸಿದ ಶಹರ ಠಾಣೆ ಪೊಲೀಸರು| ಕರ್ತವ್ಯಕ್ಕೆ ಅಡ್ಡಿ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟದ ಪ್ರಕರಣದ ಹಿನ್ನೆಲೆಯಲ್ಲಿ ಬಂಧನ| 

Hubballi Police Arrest 10 People for Stone Pelting case
Author
Bengaluru, First Published Apr 5, 2020, 7:22 AM IST

ಹುಬ್ಬಳ್ಳಿ(ಏ.05): ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಂತೆ ತಡೆಯಲು ಹೋದ ಪೊಲೀಸರ ಮೇಲೆ ಹಳೆಹುಬ್ಬಳ್ಳಿಯ ಅರಳೀಕಟ್ಟಿ ಓಣಿಯಲ್ಲಿ ಶುಕ್ರವಾರ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಜನರನ್ನು ಶನಿವಾರ ಶಹರ ಠಾಣೆ ಪೊಲೀಸರು ಬಂಧಿಸಿದ್ದು, ಈ ಮೂಲಕ ಒಟ್ಟಾರೆ 15 ಜನರು ಪೊಲೀಸರ ಬಲೆಗೆ ಬಿದ್ದಂತಾಗಿದೆ.

ಶುಕ್ರವಾರ ಅರಳಿಕಟ್ಟಿ ಕಾಲನಿಯ ಶಬಾನಾ ರೋಣ, ಶಹನಾಜ್‌ ರೋಣ, ರೇಷ್ಮಾ ಗದಗ, ಮೆಹಬೂಬಿ ಮಾಂಡಲಿ, ಸಬೀರಾ ಬೆಣ್ಣಿ ಎಂಬುವವರನ್ನು ನಿನ್ನೆ ವಶಕ್ಕೆ ಪಡೆದಿದ್ದ ಪೊಲೀಸರು, ಶನಿವಾರ ಖಾಜಾ ಅಬ್ದುಲಕರೀಂ ಬೇಪಾರಿ, ರಾಜಾ ಹಸನಸಾಬ್‌ ನದಾಫ್‌, ಅಲ್ಲಾಭಕ್ಷ ಹಸನಸಾಬ್‌ ನದಾಫ್‌, ಜಾವೀದ್‌ ಅಬ್ದುಲ್‌ರಜಾಕ್‌ ಬಿಜಾಪುರ, ಅಫ್ಜಲ್‌ ಮೋದಿನ ಸಾಬ್‌ ರೋಣ, ಮಹ್ಮದ್‌ ಗೌಸ್‌ ಮೆಹಬೂಬ್‌ಸಾಬ್‌ ಹಾವನೂರ, ಇರ್ಫಾನ್‌ ಖಾಜಾ ಭೇಪಾರಿ, ಗೂಡುಸಾಬ್‌ ರೆಹೆಮಾನಸಾಬ್‌ ಬೆಣ್ಣೆ, ಮಹ್ಮದ ಇಕ್ಬಾಲ್‌ ಗೂಡುಸಾಬ್‌ ಬೆಣ್ಣೆ, ಫಾತಿಮಾ ದಾವಲಸಾಬ್‌ ನದಾಫ್‌ ಎಂಬುವವರನ್ನು ಬಂಧಿಸಲಾಗಿದೆ.

ನಿಷೇಧ ಮಧ್ಯೆ 6 ಜಿಲ್ಲೆಗಳಲ್ಲಿ ಸಾಮೂಹಿಕ ನಮಾಜ್‌: ಉದ್ರಿಕ್ತರಿಂದ ಚಪ್ಪಲಿ, ಕಲ್ಲು ತೂರಾಟ!

ಕರ್ತವ್ಯಕ್ಕೆ ಅಡ್ಡಿ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟದ ಪ್ರಕರಣದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ. ಈ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios