ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಕಲಿತಿಲ್ವಾ? ದಿಲ್ಲಿಗೆ ಬನ್ನಿ, ಸಿಇಒ ಟ್ವೀಟ್‌ನಿಂದ ಭಾರಿ ಚರ್ಚೆ!
ಬೆಂಗಳೂರಲ್ಲಿದ್ದು ಇನ್ನೂ ಕನ್ನಡ ಕಲಿತಿಲ್ವಾ, ಹಾಗಾದರೆ ದಿಲ್ಲಿಗೆ ಬನ್ನಿ. ಕಾರ್ಸ್ 24 ಸಿಇಒ ವಿಕ್ರಮ್ ಚೋಪ್ರಾ ಉದ್ಯೋಗ ನೇಮಕಾತಿ ಕುರಿತು ವಿಶೇಷವಾಗಿ ಟ್ವೀಟ್ ಮಾಡಿ ಇದೀಗ ಭಾರಿ ಚರ್ಚೆ ಹುಟ್ಚು ಹಾಕಿದ್ದಾರೆ. ಅಷ್ಟಕ್ಕೂ ಏನಿದು ಟ್ವೀಟ್?
ಬೆಂಗಳೂರು(ಡಿ.20) ಹಲವು ವರ್ಷಗಳಿಂದ ಬೆಂಗಳೂರಲ್ಲಿದ್ದರೂ ಕನ್ನಡ ಕಲಿತಿಲ್ಲ ಅನ್ನೋ ಮಾತು ಪದೇ ಪದೇ ಕೇಳಿಬರುತ್ತದೆ. ಕನ್ನಡ ಕಲಿಯದಿದ್ದರೂ ಪರ್ವಾಗಿಲ್ಲ, ಆದರೆ ಕನ್ನಡ ಭಾಷೆ, ಇಲ್ಲಿನ ನೆಲ, ಜಲ, ಸಂಸ್ಕೃತಿಗೆ ಅಗೌರವ ತೋರದಿದ್ದರೆ ಸಾಕು ಅನ್ನೋ ಚರ್ಚಗಳು ಇವೆ. ಇದರ ನಡುವೆ ಕಾರ್ಸ್24 ಕಂಪನಿ ಸಿಇಒ ವಿಕ್ರಮ್ ಚೋಪ್ರಾ ಮಾಡಿದ ಟ್ವೀಟ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಕಲಿತಿಲ್ವಾ? ಹಾಗಾದರೆ ದಿಲ್ಲಿಗೆ ಬನ್ನಿ ಎಂದು ವಿಕ್ರಮ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಉದ್ಯೋಗ ನೇಮಕಾತಿ ಕುರಿತು ವಿಶಿಷ್ಠವಾಗಿ ಮಾಡಿರುವ ಟ್ವೀಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ.
ಕಾರ್ಸ್ 24 ಕಂಪನಿ ಸಿಇಒ ವಿಕ್ರಮ್ ಚೋಪ್ರಾ ನೇಮಕಾತಿ ಕುರಿತು ಟ್ವೀಟ್ ಮಾಡಿದ್ದಾರೆ. ವಿಶೇಷವಾಗಿ ಬೆಂಗಳೂರು ಎಂಜಿನೀಯರ್ಸ್ ಟಾರ್ಗೆಟ್ ಮಾಡಿ ವಿಕ್ರಮ್ ಚೋಪ್ರಾ ಪೋಸ್ಟ್ ಮಾಡಿದ್ದಾರೆ. ಕಾರ್ಸ್ 24 ಎಂಜಿನೀಯರ್ಸ್ ನೇಮಕ ಮಾಡುತ್ತಿದೆ. ಈ ಕುರಿತು ಮಾಡಿದ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗ್ರಾಫಿಕ್ಸ್ ಮೂಲಕ ಬೆಂಗಳೂರು ಹಾಗೂ ಕನ್ನಡ ಕುರಿತು ಪೋಸ್ಟ್ ಮಾಡಿದ್ದಾರೆ. ಈ ಗ್ರಾಫಿಕ್ಸ್‌ನಲ್ಲಿ ವರ್ಷಗಳಿಂದ ಬೆಂಗಳೂರಲ್ಲಿದ್ದರೂ ಇನ್ನೂ ಕನ್ನಡ ಕಲಿತಿಲ್ಲವೇ? ಪರ್ವಾಗಿಲ್ಲ, ನೀವು ದಿಲ್ಲಿಗೆ ಬನ್ನಿ. ನಾವು ಎಂಜಿನೀಯರ್ಸ್ ಹುಡುಕಾಟದಲ್ಲಿದ್ದವೇ. ಇಲ್ಲಿ ನಿಮ್ಮ ಮನೆಯ ಹತ್ತಿರದಲ್ಲೇ ಕೆಲಸ ಇದೆ ಎಂದು ವಿಕ್ರಮ್ ಚೋಪ್ರಾ ಟ್ವೀಟ್ ಮೂಲಕ ಹೇಳಿದ್ದಾರೆ.
ಟೆಕ್ಕಿಗಳ ಮೀರಿಸುತ್ತಿದೆ ಅಡುಗೆ ಕೆಲಸದ ರಿತು ದೀದಿ ರೆಸ್ಯೂಮ್, ಇದು ಬೆಂಗಳೂರಲ್ಲಿ ಮಾತ್ರ!
ಇದೇ ಟ್ವೀಟ್ ಆರಂಭದಲ್ಲಿ ದೆಹಲಿ ರಾಧಾನಿ ವ್ಯಾಪ್ತಿ ಉತ್ತಮ ಎಂದು ನಾವು ಹೇಳುತ್ತಿಲ್ಲ. ಆದರೆ ನಿಜವಾಗಿಯೂ ಉತ್ತಮವಾಗಿದೆ. ನೀವು ಹಿಂದಿಗರುಗಲು ಬಯಸಿದ್ದರೆ, ಇಮೇಲ್ ಮಾಡಿ. ದಿಲ್ಲಿ ಮೇರಿ ಜಾನ್ ಎಂದು ಹೇಳಿಕೊಂಡಿದ್ದಾರೆ. ಈ ಟ್ವೀಟ್ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ದಿಲ್ಲಿ ಬೆಂಗಳೂರಿಗಿಂತ ಯಾವ ವಿಚಾರದಲ್ಲಿ ಉತ್ತಮ ಎಂದು ಪ್ರಶ್ನಿಸಿದ್ದಾರೆ. ಯಾರೂ ಕೂಡ ಬೆಂಗಳೂರು ಬಿಟ್ಟು ಬೇರೆ ನಗರಕ್ಕೆ ತೆರಳಲು ಇಷ್ಟಪಡುವುದಿಲ್ಲ. ನೀವು ಕನ್ನಡ ಮಾತನಾಡುತ್ತೀರೋ, ಇಲ್ಲವೋ ಅದು ನಿಮಗೆ ಬಿಟ್ಟ ವಿಚಾರ. ಕಲಿತರೆ ನಿಮಗೆ ಒಳ್ಳೆಯದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗಿಂತ ದೆಹಲಿ ಉತ್ತಮ ಅನ್ನೋ ಈ ಟ್ವೀಟ್‌ಗೆ ಭಾರಿ ವಿರೋಧಗಳು ವ್ಯಕ್ತವಾಗಿದೆ. ಇದರ ಜೊತೆಗೆ ಇನ್ನೂ ಕನ್ನಡ ಕಲಿತಿಲ್ಲವೇ ಅನ್ನೋ ಸಂದೇಶದ ಕುರಿತು ಚರ್ಚೆಗಳು ನಡೆಯುತ್ತಿದೆ. ಎಲ್ಲಾ ನಗರಗಳು ಉತ್ತಮವಾಗಿದೆ. ಪ್ರತಿ ನಗರ, ಪ್ರತಿ ರಾಜ್ಯಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಇನ್ನೊಂದು ರಾಜ್ಯ ಅಥವಾ ನಗರದ ಹೋಲಿಕೆ ಮಾಡಿ ಉತ್ತಮ, ಕೆಟ್ಟದು ಅನ್ನೋ ಹಣೆ ಪಟ್ಟಿ ಕಟ್ಟಬೇಡಿ ಎಂದು ಹಲವರು ಸೂಚಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಹೊಂದಿದೆ. ದೆಹಲಿ ರಾಷ್ಟ್ರ ರಾಜಧಾನಿಯಾಗಿ, ಕೇಂದ್ರಾಡಳಿತದ ಪ್ರಮುಖ ಕೇಂದ್ರವಾಗಿ ಸೇರಿದಂತೆ ಹಲವು ವಿಚಾರಗಳಿಂದ ದಿಲ್ಲಿ ಗುರುತಿಸಿಕೊಂಡಿದೆ. ಕೆಲ ವರ್ಷಗಳಿಂದ ಯಾವುದೇ ಪಣ್ಣದಲ್ಲಿ, ನಗರದಲ್ಲಿದ್ದರೆ ಅಲ್ಲಿಯ ಸ್ಥಳೀಯ ಭಾಷೆ ಕಲಿಯುವುದು ಉತ್ತಮ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ಕನ್ನಡ ವಿಚಾರವಾಗಿ ಭಾರಿ ಚರ್ಚೆಗಳು ನಡೆಯುತ್ತಿದೆ. ಕನ್ನಡ ಕಲಿತಿಲ್ಲ ಅನ್ನೋ ಕಾರಣಕ್ಕೆ ವಿವಾದಗಳು ಸೃಷ್ಟಿಯಾಗಿಲ್ಲ. ಕನ್ನಡ ಯಾಕೆ ಕಲಿತಿಲ್ಲ ಎಂದು ದಾರಿ ಮದ್ಯ ಹಿಡಿದು ಯಾರನ್ನು ಕೇಳುವುದಿಲ್ಲ. ಆದರೆ ಕನ್ನಡಕ್ಕೆ ಅವಮಾನ ಮಾಡಿದಾಗ ಸುಮ್ಮನಿರು ಜಾಯಮಾನ ಕನ್ನಡಿಗರದ್ದಲ್ಲ. ಇದು ಪ್ರತಿ ರಾಜ್ಯಜ ಜನತೆಗೆ ಅವರ ಭಾಷೆಯ ಮೇಲೆ ಹೆಮ್ಮೆ ಗೌರವ ಇದ್ದೇ ಇರುತ್ತದೆ. ನಿಮ್ಮ ನಿಮ್ಮ ಭಾಷೆ ಪ್ರೀತಿಸಿ ಇತರ ಭಾಷೆ ಗೌರವಿಸಿದರೆ ಸಮಸ್ಯೆ ಉದ್ಭವಿಸುದಿಲ್ಲ.
ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!