Asianet Suvarna News Asianet Suvarna News

ಇಂಥ ಗಣತಿ ನಡೆಸುವ ಅಧಿಕಾರ ರಾಜ್ಯಕ್ಕಿಲ್ಲ: ಬಿಹಾರ ಜಾತಿ ಗಣತಿಗೆ ಹೈಕೋರ್ಟ್‌ ತಡೆ

ನಿತೀಶ್‌ಕುಮಾರ್‌ ನೇತೃತ್ವದ ಬಿಹಾರ ಸರ್ಕಾರದ ಮಹತ್ವಾಕಾಂಕ್ಷಿ 'ಜಾತಿ ಗಣತಿ'ಗೆ ಪಟನಾ ಹೈಕೋರ್ಟ್ ಗುರುವಾರ ತಡೆ ನೀಡಿದೆ.

State does not have authority to conduct such census: Patna High Court blocks Bihar state caste census akb
Author
First Published May 5, 2023, 10:58 AM IST | Last Updated May 5, 2023, 10:58 AM IST

ಪಟನಾ: ನಿತೀಶ್‌ಕುಮಾರ್‌ ನೇತೃತ್ವದ ಬಿಹಾರ ಸರ್ಕಾರದ ಮಹತ್ವಾಕಾಂಕ್ಷಿ 'ಜಾತಿ ಗಣತಿ'ಗೆ ಪಟನಾ ಹೈಕೋರ್ಟ್ ಗುರುವಾರ ತಡೆ ನೀಡಿದೆ. ರಾಜ್ಯ ಸರ್ಕಾರಕ್ಕೆ ಇಂಥ ಗಣತಿ ನಡೆಸಲು ಅಧಿಕಾರವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದಿರುವ ಕೋರ್ಟ್, ಮುಂದಿನ ಆದೇಶದವರೆಗೂ ಯಾರೊಂದಿಗೂ ಗಣತಿಯ ದತ್ತಾಂಶ ಹಂಚಿಕೊಳ್ಳದಂತೆ ಸೂಚಿಸಿದೆ.

ಗಣತಿ ಪ್ರಶ್ನಿಸಿ ತನ್ನ ಮುಂದೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರ ನೇತೃತ್ವದ ದ್ವಿಸದಸ್ಯ ಪೀಠ, ಮುಂದಿನ ವಿಚಾರಣೆಯನ್ನು ಜು.7ಕ್ಕೆ ನಿಗದಿಪಡಿಸಿದೆ. ಗಣತಿ ನಡೆಸುವ ಅಧಿಕಾರ ಸಂಸತ್ತಿಗೆ ಸಂಬಂಧಿಸಿದ ವಿಷಯವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಣತಿಯ ರೀತಿಯಲ್ಲೇ ನಡೆದಿರುವ ಜಾತಿ ಆಧರಿತ ಸಮೀಕ್ಷೆ (Caste based survey) ನಡೆಸಲು ರಾಜ್ಯ ಸರ್ಕಾರಕ್ಕೆ (State Govt) ಅಧಿಕಾರವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೀಠ ಹೇಳಿತು.

ಜನಸಂಖ್ಯಾ ಚರ್ಚೆ: ಭಾರತದ ಜನಗಣತಿಯ ಅಂಕಿಅಂಶಗಳು ನಂಬಿಕಾರ್ಹವೇ?

ಸರ್ಕಾರವು ದತ್ತಾಂಶವನ್ನು ವಿವಿಧ ಪಕ್ಷಗಳ ಜತೆ ಹಂಚಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದನ್ನೂ ನಾವು ಗಮನಿಸಿದ್ದೇವೆ. ಇದು ಖಂಡಿತವಾಗಿಯೂ ಖಾಸಗಿತನದ ಹಕ್ಕಿಗೆ ಭಂಗ ತಂದಂತೆ ಎಂದು ಕೋರ್ಟ್‌ ಕಿಡಿಕಾರಿತು. ಆದರೆ ಈ ಗಣತಿಯ ಫಲಿತಾಂಶ ಆಧರಿಸಿ ವಂಚಿತ ಹಾಗೂ ಆರ್ಥಿಕವಾಗಿ ದುರ್ಬಲ ಆಗಿರುವ ಸಮುದಾಯಗಳಿಗೆ ಸರ್ಕಾರದ ಸವಲತ್ತು ಕೊಡಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ನಿತೀಶ್‌ ವಾದಿಸಿದ್ದರು.

ಗಣತಿಯ ಮೊದಲ ಭಾಗ ಜ.7ರಿಂದ 21ರವರೆಗೆ ನಡೆದಿತ್ತು. 2ನೇ ಭಾಗ ಏ.15ರಿಂದ ಆರಂಭವಾಗಿದ್ದು, ಮೇ 15ರಂದು ಮುಕ್ತಾಯ ಆಗಬೇಕಿತ್ತು.

ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?

Latest Videos
Follow Us:
Download App:
  • android
  • ios