ತಮಿಳುನಾಡಿನಲ್ಲಿ ಉದಯಿಸಿದ 'ಸೂರ್ಯ': ಗೆಲುವಿಗೆ ಈ 5 ಅಂಶಗಳೇ ಕಾರಣ!

ತಮಿಳುನಾಡು ಚುನಾವಣೆಯಲ್ಲಿ ಉದಯಿಸಿದ ಸೂರ್ಯ| ಎಐಡಿಎಂಕೆ ವಿರುದ್ಧ ಡಿಎಂಕೆ ಮುನ್ನಡೆ| ಎಐಡಿಎಂಕೆ ಗೆಲುವಿಗೆ ಕಾರಣವಾಯ್ತು ಐದು ಅಂಶ

Stalin led DMK Crosses Halfway mark Set for Big Win pod

ಚೆನ್ನೈ(ಮೇ.02): ತಮಿಳುನಾಡು ಚುನಾವಣೆಯಲ್ಲಿ ಎಂ. ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಭರ್ಜರಿ ಸಾಧನೆ ಮಾಡಿದೆ. ಡಿಎಂಕೆ ಸುಮಾರು 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತ್ತ ಆಡಳಿತರೂಢ ಎಐಎಡಿಎಂಕೆ ಪಕ್ಷ 85ರಷ್ಟು ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಇಲ್ಲಿನ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಡಿಎಂಕೆ ಬಹುಮತಕ್ಕೆ ಅಗತ್ಯವಾಗಿರುವ 118 ರೇಖೆಎಯನ್ನು ದಾಟಿದೆ. ಇಲ್ಲಿ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ ಸಿಎಂ ಅಭ್ಯರ್ಥಿ ಎನ್ನಲಾಗಿದೆ. ಹಾಗಾದ್ರೆ ಡಿಎಂಕೆ ಆಡಳಿತರೂಢ ಪಕ್ಷವನ್ನು ಸೋಲಿಸಿದ್ದು ಹೇಗೆ? ಇಲ್ಲಿದೆ ಐದು ಅಂಶಗಳು.

ಎಐಎಡಿಎಂಕೆಯೊಳಗಿನ ಭಿನ್ನಮತ

ತಮಿಳುನಾಡಿನ  ಮಾಜಿ ಸಿಎಂ ಜೆ. ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಭಿನ್ನಮತ ಹುಟ್ಟಿಕೊಳ್ಳುತ್ತದೆ. ಪ್ರಸ್ತುತ ಸಿಎಂ ಪಪಳನಿಸ್ವಾಆಮಿ ಹಾಗೂ ಓ. ಪನ್ನೀರ್‌ ಸೆಲ್ವಂ ಇಬ್ಬರ ನಡುವೆ ಪ್ರಾಬಲ್ಯ ಸಾಧಿಸಲು ಬಹಳ ದೀರ್ಘ ಕಾಲದಿಂದ ಜಿದ್ದಾಜಿದ್ದು ನಡೆಯುತ್ತಿದೆ. ಜಯಲಲಿತಾ ನಿಧನದ ಬಳಿಕ ಪನ್ನೀರ್‌ ಸೆಲ್ವ ಅವರನ್ನು ಸಿಎಂ ಮಾಡಲಾಯ್ತು. ಆದರೆ ಇದಾದ ಬಳಿಕ ಸಾಮರಸ್ಯ ಸೂತ್ರ ಬಳಸಿ ಅಧಿಕಾರ ಪಳನೀಸ್ವಾಮಿ ಬಳಿ ಬಂತು. ಹೀಗಿರುವಾಗ ಪಕ್ಷದ ನಾಯಕರ ನಡುವಿನ ಈ ಹಗ್ಗ ಜಗ್ಗಾಟ ಪಕ್ಷದ ಪ್ರದರ್ಶನ ಹಾಗೂ ಕಾರ್ಯಕರ್ತ ಮೇಲೂ ಬಿದ್ದಿದೆ.

ನಿವೃತ್ತಿ ಘೋಷಣೆ ಬೆನ್ನಲ್ಲೇ ಬಿಜೆಪಿ ಸೋಲಿನ ರಹಸ್ಯ ಬಿಚ್ಚಿಟ್ಟ ಪ್ರಶಾಂತ್ ಕಿಶೋರ್!

ಆಡಳಿತ ವಿರೋಧಿ ಅಲೆ

ತಮಿಳುನಾಡು ಹಾಗೂ ಕೇರಳದಂತಹ ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರತಿ ಅವಧಿಗೂ ಸರ್ಕಾರ ಬದಲಾಗುವ ಸಂಪ್ರದಾಯವಿದೆ. ಆದರೆ ಕಳೆದ ಚುನಾವಣೆಯಲ್ಲಿ ಜಯಲಲಿತಾ ಈ ಪರಂಪರೆಯನ್ನು ಮುರಿದು ಎಐಡಿಎಂಕೆಯನ್ನು ಗೆಲುವಿನ ಹಳಿಗೆ ಮರಳಿಸಿ ಅಧಿಕಾರ ವಹಿಸಿಕೊಂಡಿದ್ದರು. 2011ರ ವಿಧಾನಸಭಾ ಚುನಾವಣೆಯ ಬಳಿಕ 2016ರ ವಿಧಾನಸಭಾ ಚುನಾವಣೆಯಲ್ಲೂ ಎಐಡಿಎಂಕೆ ಅಧಿಕಾರಕ್ಕೇರಿತು. ಪಕ್ಷ ಕಳೆದ ಹತ್ತು ವರ್ಷದಿಂದ ಅಧಿಕಾರದಲ್ಲಿದೆ. ಹೀಗಿರುವಾಗ ಸ್ವಾಭಾವಿಕವಾಗಿ ಆಡಳಿತ ವಿರೋಧಿ ಅಲೆ ಇರುವುದು ಸಹಜ.

ಪ್ರಭಾವಿ ನಾಯಕರಿಲ್ಲದಿರುವುದು

ಜಯಲಲಿತಾರ ವ್ಯಕ್ತಿತ್ವವೇ ಬಹಳ ಆಕರ್ಷಕ. ಅವರ ನಿಧನದ ಬಳಿಕ ಎಐಡಿಎಂಕೆ ಪಕ್ಷದಲ್ಲಿ ಶೂನ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಜನಪ್ರಿಯತೆಯಿಂದ ಮತಗಳನ್ನು ಆಕರ್ಷಿಸುವ ನಾಯಕರು ಇರಲಿಲ್ಲ. ಪಳನೀಸ್ವಾಮಿ ಹಾಗೂ ಪಳನೀಸ್ವಾಮಿ ಪಕ್‌ಷದ ಹಿರಿಯ ನಾಯಕರು ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಜನಪ್ರಿಯತೆ ವಿಚಾರದಲ್ಲಿ ಅವರು ಜಯಲಲಿತಾ ಅಕ್ಕಪಕ್ಕವೂ ಸುಳಿಯಲು ಸಾಧ್ಯವಿಲ್ಲ. ಮತ್ತೊಂದೆಡೆ ಇವರಿಗೆ ಹೋಲಿಸಿದರೆ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ ಜನಪ್ರಯರಾಗಿದ್ದಾರೆ.

ಕರುಣಾನಿಧಿ ಕುಟುಂಬದ ಮೇಲೆ ಐಟಿ ದಾಳಿ

ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿನ ಜನಪ್ರಿಯ ನಾಯಕ ಎಂ. ಕರುಣಾನಿಧಿ ಕುಟುಂಬದ(ಸ್ಟಾಲಿನ್ ಮಗಳು ಹಾಗೂ ಅಳಿಯ) ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಲಿ ನಡೆಸಿದ್ದರು. ಆದಾಯ ತೆರಿಗೆ ಹಿಂದೆ ಸೂಕ್ತ ಕಾರಣವಿರಬಹುದು ಆದರೆ ಇದನ್ನು ಕೇಂದ್ರ ಸರ್ಕಾರ ಪಡೆದ ಸೇಡು ಎಂದೇ ಬಿಂಬಿಸಲಾಯ್ತು. ಅವರು ಜನರಿಗೆ ಇದನ್ನು ಮುಟ್ಟಿಸಲು ಸಫಲರಾದರು. ಇದೇ ಕಾರಣದಿಂದಾಗಿ ಅನೇಕ ಮಂದಿ ಭಾವನಾತ್ಮಕವಾಗಿ ಡಿಎಂಕೆ ಪರ ಮತ ಚಲಾಯಿಸಿದರು.

ಡಿಎಂಕೆ ಅವರ ಜನಪ್ರಿಯ ಚುನಾವಣೆಯ ಭರವಸೆ

ಡಿಎಂಕೆ ಚುನಾವಣೆಯನ್ನು ಉತ್ತಮವಾಗಿ ನಿರ್ವಹಿಸಿದರು. ಅಲ್ಲದೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳೂ ಜನರ ಮನ ಗೆದ್ದಿವೆ. ಪಕ್ಷ ಉದ್ಯೋಗ ವಿಚಾರದಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದು, ಇದು ಯುವಜನರ ಮನ ಗೆದ್ದಿದೆ. ಅಲ್ಲದೇ ಬಸ್‌ಗಳಲ್ಲಿ ಉಚಿತ ಪಾಸ್‌ ಹಾಗೂ ಒಂದು ವರ್ಷದ ಹೆರಿಗೆ ರಜೆ ನೀಡುವ ಮೂಲಕ ಮಹಿಳೆಯರ ಒಲವು ಗಳಿಸಲು ಸಫಲರಾದರು. ರೇಷನ್ ಕಾರ್ಡ್‌ ಇದ್ದವರಿಗೆ 4000 ರೂಪಾಯಿವರೆಗಿನ ಆರ್ಥಿಕ ಸಹಾಯ ಹಾಗೂ ಎಲ್‌ಪಿಜಿ ಸಿಲಿಂಡರ್‌ ಮೇಲೆ 100 ರೂಪಾಯಿಯ ಸಬ್ಸಿಡಿ ಭರವಸೆಯೂ ತನ್ನ ಪ್ರಭಾವ ಬೀರಿದೆ.

Latest Videos
Follow Us:
Download App:
  • android
  • ios