Asianet Suvarna News Asianet Suvarna News

ಸರ್ಜರಿ ಬಳಿಕ ಸದ್ಗುರು ಮೊದಲ ಪ್ರತಿಕ್ರಿಯೆ, ಶೀಘ್ರ ಚೇತರಿಕೆಗೆ ದಿಗ್ಗಜರ ಪ್ರಾರ್ಥನೆ!

ಆಧ್ಯಾತ್ಮಿಕ ಗುರು ಸದ್ಗುರುವಿಗೆ ತುರ್ತು ಮೆದಳಿನ ಸರ್ಜರಿ ಮಾಡಲಾಗಿದೆ. ಸರ್ಜರಿ ಬಳಿಕ ಆಸ್ಪತ್ರೆಯಲ್ಲಿ ಸದ್ಗುರುವಿಗೆ ಚಿಕಿತ್ಸೆ ಮುಂದುವರಿದಿದೆ. ಇದರ ನಡುವೆ ಸದ್ಗುರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
 

Spiritual guru Sadhguru first reaction after Emergency Brain Surgery in Delhi Apollo Hospital ckm
Author
First Published Mar 20, 2024, 7:57 PM IST

ದೆಹಲಿ(ಮಾ.20) ಮೆದಳಿನಲ್ಲಿ ರಕ್ತಸ್ರಾವ ಹಾಗೂ ಊತದಿಂದ ದೆಹಲಿ ಅಪೋಲೋ ಆಸ್ಪತ್ರೆ ದಾಖಲಾಗಿದ್ದ ಆಧ್ಯಾತ್ಮಿಕ ಧರ್ಮಗುರು ಸದ್ಗುರುವಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ತಲೆನೋವಿನಿಂದ ಬಳಲಿದ್ದ ಸದ್ಗುರು,ವೈದ್ಯರ ಸಲಹೆಯನ್ನೂ ನಿರ್ಲಕ್ಷ್ಯಿಸಿದ್ದರು. ಆದರೆ ನೋವು ಹೆಚ್ಚಾಗಿ ಆಸ್ವಸ್ಥಗೊಳ್ಳುತ್ತಿದ್ದಂತೆ ಆಸ್ಪತ್ರೆ ದಾಖಲಾದ ಸದ್ದುರುವಿಗೆ ಸರ್ಜರಿ ಮಾಡಲಾಗಿದೆ. ಸರ್ಜರಿ ಬಳಿಕವೂ ಚಿಕಿತ್ಸೆ ಮುಂದವರಿದಿದೆ. ಇದರ ನಡುವೆ ಸದ್ಗುರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಇಷ್ಟೇ ಅಲ್ಲ ತಮ್ಮ ಪ್ರತಿಕ್ರಿಯೆಯಲ್ಲಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಇತ್ತ ಸದ್ಗುರು ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಸಚಿವರು, ರಾಜ್ಯ ನಾಯಕರು ಸೇರಿದಂತೆ ಹಲವರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದರೆ. 

 ತುರ್ತು ಮೆದುಳು ಶಸ್ತ್ರಚಿಕಿತ್ಸೆ ಬಳಿಕ ಸದ್ಗುರು ನೀಡಿದ ಮೊದಲ ಪ್ರತಿಕ್ರಿಯೆಯನ್ನು ಇಶಾ ಫೌಂಡೇಶನ್ ಹಾಗೂ ಸದ್ಗುರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ನನ್ನ ತಲೆಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಲ ಪ್ರಯತ್ನಿಸಿದರು. ಆದರೆ ಅವರಿಗೆ ಏನೂ ಸಿಗಲಿಲ್ಲ. ಹೀಗಾಗಿ ಮತ್ತೆ ಪ್ಯಾಚ್ ಮಾಡಿದ್ದಾರೆ. ಇದೀಗ ನಾನು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಪ್ಯಾಚ್ ಮಾಡಿದ ತಲೆಬುರಡೆಯಲ್ಲಿ ಮಲಗಿದ್ದೇನೆ. ಪ್ಯಾಚ್ ಮಾಡಿದ್ದಾರೆ, ಆದರೆ ಮೆದುಳಿಗೆ ಡ್ಯಾಮೇಜ್ ಆಗಿಲ್ಲ ಎಂದು ಸದ್ಗುರು ಹೇಳಿದ್ದಾರೆ.

 

 

ಮೆದಳು ರಕ್ತಸ್ರಾವದಿಂದ ಅಸ್ವಸ್ಥರಾದ ಸದ್ಗುರುವಿಗೆ ತುರ್ತು ಮೆದಳು ಸರ್ಜರಿ, ಶೀಘ್ರ ಚೇತರಿಕೆಗೆ ಪ್ರಾರ್ಥನೆ!

ಸದ್ಗುರು ಚೇತರಿಕೆಗೆ ಗಣ್ಯರು, ನಾಯರು, ಸೆಲೆಬ್ರೆಟಿಗಳು ಸೇರಿದಂತೆ ಅಪಾರ ಸಂಖ್ಯೆಯ ಅನುಯಾಯಿಗಳು ಪ್ರಾರ್ಥಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಧ್ಯಾತ್ಮ ಚಿಂತಕ ಸದ್ಗುರು ಜಗ್ಗಿವಾಸುದೇವ್  ಶೀಘ್ರದಲ್ಲಿ ಗುಣಮುಖರಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ, ಮತ್ತೆ ಎಂದಿನಂತೆ ತಮ್ಮ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. 

 

 

ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿರುವ ಗುರು ಸದ್ಗುರು ಶೀಘ್ರ ಚೇರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ನನ್ನ ಪ್ರಾರ್ಥನೆ ಯಾವತ್ತೂ ಸದ್ಗುರು ಜೊತೆ ಹಾಗೂ ಅವರ ಅನುಯಾಯಿಗಳ ಜೊತಗಿದೆ. ಶೀಘ್ರದಲ್ಲೇ ಗುಣಮುಖರಾಗಿ ಮತ್ತೆ ಸಮಾಜಮುಖಿ ಕೆಲಸಮಾಡುವಂತಾಗಲಿ ಎಂದು ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ಭಾರತೀಯ ಸೇನೆಯ 11 ಸಾವಿರ ಸೈನಿಕರಿಗೆ ಸದ್ಗುರು ಇಶಾ ಫೌಂಡೇಷನ್‌ನಿಂದ ಹಠಯೋಗ ತರಬೇತಿ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಸದ್ಗುರು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ. ಟೀಂ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು, ಕ್ರೀಡಾಪಟುಗಳು ಸದ್ಗುರು ಚೇತರಿಕೆಗೆ ಪ್ರಾರ್ಥಿಸಿದ್ದಾರೆ. 
 

Follow Us:
Download App:
  • android
  • ios