Asianet Suvarna News Asianet Suvarna News

ಮೆದಳು ರಕ್ತಸ್ರಾವದಿಂದ ಅಸ್ವಸ್ಥರಾದ ಸದ್ಗುರುವಿಗೆ ತುರ್ತು ಮೆದಳು ಸರ್ಜರಿ, ಶೀಘ್ರ ಚೇತರಿಕೆಗೆ ಪ್ರಾರ್ಥನೆ!

ಮೆದಳಿನಲ್ಲಿ ರಕ್ತಸ್ರಾವ ಹಾಗೂ ಊತದಿಂದ ಅಸ್ವಸ್ಥಗೊಂಡ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿವಾಸುದೇವ್‌ಗೆ ತುರ್ತು ಮೆದಳು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಗುರುಗಳ ಅನುಯಾಯಿಗಳು, ಶಿಷ್ಯರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

Spiritual guru Sadhguru Jaggi Vasudev emergency brain surgery At Delhi Apollo ckm
Author
First Published Mar 20, 2024, 6:07 PM IST

ದೆಹಲಿ(ಮಾ.20) ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿವಾಸುದೇವ್‌ ತುರ್ತು ಮೆದೆಳು ಸರ್ಜರಿ ಮಾಡಲಾಗಿದೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.  ಕಳೆದ ಕೆಲ ದಿನಗಳಿಂದ  ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಮೆದಳಿನಲ್ಲಿ ರಕ್ತ ಸ್ರಾವವಾಗಿದೆ. ಜೊತೆಗೆ ಮೆದುಳಿನಲ್ಲಿ ಊತವಾಗಿದೆ. ತೀವ್ರ ನೋವಿನಿಂದ ಆಸ್ಪತ್ರೆ ದಾಖಲಾದ ಸದ್ಗುರುವಿನ ತಪಾಸಣೆ ನಡೆಸಿದ ವೈದ್ಯರು ತುರ್ತು ಮೆದುಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ದೇಶ ವಿದೇಶದಲ್ಲಿರುವ ಸದ್ಗುರು ಅನುಯಾಯಿಗಳು, ಶಿಷ್ಯರು, ಬೆಂಬಲಿಗರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.  

ಕಳೆದ ಎರಡು ವಾರದಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲಿದ್ದರು. ಮಾರ್ಚ್ 14 ರಂದು ವೈದ್ಯ ವಿನಿತ್ ಸುರಿ ಸೂಚನೆ ಪ್ರಕಾರ ಎಂಆರ್‌ಐ ಸ್ಕ್ರಾನ್‌ಗೆ ಒಳಗಾಗಿದ್ದಾರೆ. ಈ ವೇಳೆ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸದ್ಗುರು ಮೆದಳಿನಲ್ಲಿ ರಕ್ತಸ್ರಾವವಾಗಿ ಊದಿಕೊಂಡಿರುವುದು ಪತ್ತೆಯಾಗಿದೆ. ಮಾರ್ಚ್ 17ರಂದು ಸದ್ಗುರು ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇತ್ತ ಪ್ರಜ್ಞಾಹೀನರಾಗುತ್ತಾ ಬಂದ ಸದ್ಗುರು ತೀವ್ರ ತಲೆನೋವು ಹಾಗೂ ವಾಂತಿಯಿಂದ ಮತ್ತಷ್ಟು ಬಳಲಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಕೂಡಾ ಕಡಿಮೆಯೇ ಎಂದ ಸದ್ಗುರು! ಹಾಗಿದ್ರೆ ಎಷ್ಟು ಸಮಯ ಕೆಲಸ ಮಾಡ್ಬೇಕು?

ಸದ್ಗುರು ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದೆಳಿನ ರಕ್ತಸ್ರಾವ ಹಾಗೂ ಊತ ಜೀವಕ್ಕೆ ಅಪಾಯ ತಬರಲ್ಲ ಸಾಧ್ಯತೆಗಳನ್ನು ಹೆಚ್ಚಿಸಿತ್ತು. ಹೀಗಾಗಿ ಅಪೋಲೋ ವೈದ್ಯರ ತಂಡ ತುರ್ತು ಕಾರ್ಯಪ್ರವೃತ್ತಗೊಂಡಿತ್ತು. ಈ ಮೂಲಕ ಎಮರ್ಜೆನ್ಸಿ ಮೆದಳು ಸರ್ಜರಿ ಮಾಡಲಾಗಿದೆ.

 

 

ಅಪೋಲೋ ವೈದ್ಯರಾದ ಡಾ ವಿನಿತ್ ಸುರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಹಾಗೂ ಡಾ. ಎಸ್ ಚಟರ್ಜಿ ನೇತೃತ್ವದ ತಂಡ ಸದ್ಗುರುವಿಗೆ ಮೆದಳು ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಬಲಿಕ ಸದ್ಗುರುವಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿದಿದೆ. ಇದೀಗ ಸದ್ಗುರು ನಿಧಾವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಭಾರತೀಯ ಸೇನೆಯ 11 ಸಾವಿರ ಸೈನಿಕರಿಗೆ ಸದ್ಗುರು ಇಶಾ ಫೌಂಡೇಷನ್‌ನಿಂದ ಹಠಯೋಗ ತರಬೇತಿ!  

ಸದ್ಗುರು ಆರೋಗ್ಯ ಅಪ್‌ಡೇಟ್ ಕುರಿತು ಅಪೋಲೋ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿಯನ್ನು ಇಶಾ ಫೌಂಡೇಶನ್ ಹಂಚಿಕೊಂಡಿದೆ. ಚಿಕಿತ್ಸೆ ಮುಂದುವರಿದಿದೆ. ಇದೀಗ ದೇಶಾದ್ಯಂತ ಸದ್ಗುರು ಅನುಯಾಯಿಗಳು ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಹಲವರು ಇಶಾ ಫೌಂಡೇಶನ್‌ಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 

ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಸದ್ಗುರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

 

 

 
 
 
 
 
 
 
 
 
 
 
 
 
 
 

A post shared by Sadhguru (@sadhguru)

 

Follow Us:
Download App:
  • android
  • ios