ಪ್ರಧಾನಿ ಮೋದಿಗೆ ಫ್ರಾನ್ಸ್‌ ವಿಶೇಷ ಗೌರವ: ರಾಣಿ ಎಲಿಜಬೆತ್‌ಗೆ ನೀಡಿದ್ದ ಮ್ಯೂಸಿಯಂನಲ್ಲಿ ಔತಣಕೂಟ; ತ್ರಿವರ್ಣ ಧ್ವಜಕ್ಕೂ ಆದ್ಯತೆ

ಫ್ರಾನ್ಸ್‌ ರಾಷ್ಟ್ರೀಯ ದಿನದಂದು ಪ್ರಧಾನಿ ಮೋದಿಗೆ ಐತಿಹಾಸಿಕ ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಕೊನೆಯ ಬಾರಿ 1953 ರಲ್ಲಿ ರಾಣಿ ಎಲಿಜಬೆತ್‌ಗಾಗಿ ಲೌವ್ರೆಯಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು.

special gestures by france for prime minister modi ash

ಪ್ಯಾರಿಸ್‌ (ಜುಲೈ 15, 2023): ಪ್ರಧಾನಿ ಮೋದಿಯವರ 2 ದಿನಗಳ ಫ್ರಾನ್ಸ್‌ ಭೇಟಿ ಯಶಸ್ವಿಯಾಗಿದೆ. ಈ ವೇಳೆ, ಪ್ರಧಾನಿ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವವನ್ನೂ ಸಹ ನೀಡಲಾಯ್ತು. ಇದರೊಂದಿಗೆ ಫ್ರಾನ್ಸ್‌ ಭಾರತದ ಪ್ರಧಾನಿಗೆ ವಿಶೇಷ ಔತಣಕೂಟವನ್ನೂ ನೀಡಿತ್ತು. ಈ ವೇಳೆ ಅಲ್ಲಿನ ಅಧ್ಯಕ್ಷ ಮ್ಯಾಕ್ರನ್ ಆಯೋಜಿಸಿದ್ದ ಔತಣಕೂಟವು  ಪ್ರಧಾನಿ ಮೋದಿಗೆ ವಿಶೇಷ ಗೌರವ ನೀಡಿದೆ. 

ಫ್ರಾನ್ಸ್‌ ರಾಷ್ಟ್ರೀಯ ದಿನದಂದು ಪ್ರಧಾನಿ ಮೋದಿಗೆ ಐತಿಹಾಸಿಕ ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಕೊನೆಯ ಬಾರಿ 1953 ರಲ್ಲಿ ರಾಣಿ ಎಲಿಜಬೆತ್‌ಗಾಗಿ ಲೌವ್ರೆಯಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಅದರ ನಂತರ ಆ ಮ್ಯೂಸಿಯಂನಲ್ಲಿ ಯಾರಿಗೂ ಈ ರೀತಿ ಅಧಿಕೃತ ಔತಣಕೂಟ ನಡೆಸಿಲ್ಲ ಎಂಬುದು ಸಹ ಮಹತ್ವದ ಅಂಶವಾಗಿದೆ. ಅಲ್ಲದೆ, ಫ್ರಾನ್ಸ್‌ ರಾಷ್ಟ್ರೀಯ ದಿನದಂದು ಲೌವ್ರೆ ಮ್ಯೂಸಿಯಂಗೆ ಹೆಚ್ಚಿನ ಜನರು ಆಗಮಿಸುತ್ತಾರಾದರೂ ಪ್ರಧಾನಿ ಮೋದಿಗೆ ಔತಣಕೂಟ ಹಿನ್ನೆಲೆ ಆಹ್ವಾನಿತರಿಗೆ ಹೊರತುಪಡಿಸಿ ಇತರರಿಗೆ ಈ ದಿನ ಆಹ್ವಾನ ಇರಲಿಲ್ಲ, ಅಂದರೆ ಮ್ಯೂಸಿಯಂ ಅನ್ನು ಇತರರಿಗೆ ಮುಚ್ಚಲಾಗಿತ್ತು ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಫ್ರಾನ್ಸ್‌ನಲ್ಲೂ ಭಾರತದ ಯುಪಿಐ ಸೇವೆಗೆ ಚಾಲನೆ

ಇಷ್ಟೇ ಅಲ್ಲ, ಔತಣಕೂಟದ ಮೆನುವಿನ ಥ್ರೆಡ್ ಕೂಡ ಭಾರತೀಯ ತ್ರಿವರ್ಣವನ್ನು ಹೊಂದಿದ್ದು, ಇದಕ್ಕಾಗಿ ಫ್ರಾನ್ಸ್ ತನ್ನ ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂದೂ ವರದಿಯಾಗಿದೆ. ಏಕೆಂದರೆ ಅವರು ಯಾವಾಗಲೂ ಫ್ರೆಂಚ್ ಬಣ್ಣಗಳನ್ನು ಮಾತ್ರ ಮೆನುವಿನ ಥ್ರೆಡ್‌ ಅನ್ನಾಗಿ ಬಳಸುತ್ತಾರೆ. ಹಾಗೂ, ಪ್ರಧಾನಿ ಮೋದಿ ಸಸ್ಯಾಹಾರಿಯಾದ ಕಾರಣ ಊಟದ ಮೆನು ವಿಶೇಷವಾಗಿ ಸಸ್ಯಾಹಾರಿ ಆಹಾರವನ್ನೇ ಕೂಡಿತ್ತು.

ಪ್ರಧಾನಿ ಮೋದಿಗೆ ಅಮೆರಿಕದ ವೈಟ್‌ಹೌಸ್‌ನಲ್ಲೂ ಈ ಬಾರಿ ಅಧಿಕೃತ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಆ ವೇಳೆಯೂ ಸಸ್ಯಾಹಾರಿ ಆಹಾರವನ್ನೇ ತಯಾರಿಸಲಾಗಿತ್ತು. 

ಇದನ್ನೂ ಓದಿ: ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಫ್ರಾನ್ಸ್‌ ಪ್ರಧಾನಿ!

ಫ್ರಾನ್ಸ್‌ ಜತೆ ರಕ್ಷಣಾ ಸಹಕಾರ
ಭಾರತ ಹಾಗೂ ಫ್ರಾನ್ಸ್‌ ಸಂಬಂಧ ಮುಂದಿನ 25 ವರ್ಷಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಲಿದೆ. ರಕ್ಷಣಾ ಸಹಕಾರ ಈ ಬಾಂಧವ್ಯದಲ್ಲಿ ಶಕ್ತಿಶಾಲಿ ಆಧಾರಸ್ತಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯುದ್ಧವಿಮಾನಗಳು, ಜಲಾಂತರ್ಗಾಮಿ ಹಾಗೂ ಹೆಲಿಕಾಪ್ಟರ್‌ ಎಂಜಿನ್‌ ತಯಾರಿಕೆಯಲ್ಲಿ ಸಹಕಾರ ಮುಂದುವರಿಯಲಿದೆ ಎಂದಿದ್ದಾರೆ. ಭಾರತವು ಈಗಾಗಲೇ ಫ್ರಾನ್ಸ್‌ನಿಂದ ನೌಕಾಪಡೆಗಾಗಿ 26 ರಫೇಲ್‌ ಯುದ್ಧವಿಮಾನ ಹಾಗೂ 3 ಸ್ಕಾರ್ಪೀನ್‌ ಜಲಾಂತರ್ಗಾಮಿ ಖರೀದಿಗೆ ಸಮ್ಮತಿಸಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ಇನ್ನೂ ಮಾತುಕತೆ ನಡೆಸಿರುವ ಕಾರಣ ಈ ಬಗ್ಗೆ ನೇರವಾಗಿ ಘೋಷಣೆ ಮಾಡದೇ ಯುದ್ಧವಿಮಾನ ಹಾಗೂ ಜಲಾಂತರ್ಗಾಮಿ ವಿಷಯದಲ್ಲಿ ಸಹಕಾರ ಏರ್ಪಡಲಿದೆ ಎಂದಷ್ಟೇ ಮೋದಿ ಹೇಳಿದರು ಎಂದು ವಿಶ್ಲೇಷಿಸಲಾಗಿದೆ.

ತಮ್ಮ ಪ್ಯಾರಿಸ್‌ ಭೇಟಿಯ 2ನೇ ಹಾಗೂ ಕೊನೆಯ ದಿನ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಜತೆ ದ್ವಿಪಕ್ಷೀಯ ಸಭೆ ನಡೆಸಿ ಜಂಟಿ ಹೇಳಿಕೆ ನೀಡಿದ ಮೋದಿ, ‘ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ 25 ವರ್ಷಗಳಾಗಿವೆ. ಇನ್ನು ಮುಂದಿನ 25 ವರ್ಷಗಳಿಗೆ ನಾವು ನೀಲನಕ್ಷೆ ರೂಪಿಸುತ್ತಿದ್ದೇವೆ. ಇದರಲ್ಲಿ ರಕ್ಷಣಾ ಸಹಕಾರ ಮುಖ್ಯವಾದದ್ದು. ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದಲ್ಲಿ ಫ್ರಾನ್ಸ್‌ ಪಾತ್ರ ಮಹತ್ವದ್ದು. ಅದು ಜಲಾಂತರ್ಗಾಮಿ ಆಗಿರಬಹುದು ಅಥವಾ ನೌಕಾಪಡೆಯ ಯುದ್ಧವಿಮಾನ ಆಗಿರಬಹುದು’ ಎಂದರು.

ಇದನ್ನೂ ಓದಿ: ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ, ಫ್ರಾನ್ಸ್ ಭೇಟಿ ಬೆನ್ನಲ್ಲೇ ಮೋದಿ ಮನದ ಮಾತು!

Latest Videos
Follow Us:
Download App:
  • android
  • ios