ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳ 444 ದಿನಗಳ ವಿಶೇಷ ಎಫ್‌ಡಿ ಯೋಜನೆಗಳ ಬಡ್ಡಿದರಗಳನ್ನು ಇಲ್ಲಿ ಹೋಲಿಸಲಾಗಿದೆ. 20 ಲಕ್ಷ ರೂ. ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ಗ್ರಾಹಕರಿಗೆ ಸಿಗುವ ಲಾಭದ ಲೆಕ್ಕಾಚಾರ ನೀಡಲಾಗಿದೆ.
ಬೆಂಗಳೂರು: ಯಾವುದೇ ನಿಶ್ಚಿಂತೆ ಇಲ್ಲದೇ ನಿಗಧಿತ ಲಾಭ ಬೇಕು ಅಂದರೆ ಅದು ಬ್ಯಾಂಕ್‌ನ ಫಿಕ್ಸೆಡ್ ಡೆಪಾಸಿಟ್‌ಗಳು (FD). ಅದರಲ್ಲೂ ಹಲವು ಬ್ಯಾಂಕ್‌ಗಳು ವಿಶೇಷ FD ಪ್ಲಾನ್‌ಗಳನ್ನು ಹೊಂದಿವೆ. ವಿಶೇಷವಾಗಿ 444 ದಿನಗಳ (ಅಂದಾಜು 1 ವರ್ಷ 2 ತಿಂಗಳು) ಸ್ಪೆಷಲ್ ಎಫ್‌ಡಿ ಯೋಜನೆಗಳು ಠೇವಣಿದಾರರನ್ನು ಹೆಚ್ಚು ಆಕರ್ಷಿಸುತ್ತಿವೆ.
ಇಲ್ಲಿ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಬಡ್ಡಿದರ ವ್ಯತ್ಯಾಸ ಇರಬಹುದು. ಅದು ಕೂಡ ಜಾಸ್ತಿ ಪ್ರಮಾಣದ ವ್ಯತ್ಯಾಸವೇನೂ ಅಲ್ಲ. 0.15% ರಿಂದ 0.25% ವ್ಯತ್ಯಾಸ ಇರಬಹುದು. ಆದರೆ ಅದು ₹20 ಲಕ್ಷದಂತಹ ದೊಡ್ಡ ಮೊತ್ತಕ್ಕೆ ಕೈಗೆ ಸಿಗುವ ಮೆಚ್ಯೂರಿಟಿ ಹಣದಲ್ಲಿ ಸಾವಿರಾರು ರೂಪಾಯಿ ವ್ಯತ್ಯಾಸ ಆಗಲಿದೆ. ಇನ್ನು ನೀವು ಪ್ರಮುಖ ಬ್ಯಾಂಕ್‌ಗಳಲ್ಲಿ 20 ಲಕ್ಷ ರೂಪಾಯಿ ಹಣ ಇಟ್ಟರೆ ಎಷ್ಟು ಲಾಭ ಸಿಗುತ್ತದೆ ಎಂಬ ಸರಳ ಲೆಕ್ಕಾಚಾರ ಹೀಗಿದೆ..
Central Bank of India: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ 444 ದಿನಗಳ ಎಫ್‌ಡಿ ಯೋಜನೆಗೆ ಹಿರಿಯ ನಾಗರಿಕರಿಗೆ 7.25% ಹಾಗೂ ಸಾಮಾನ್ಯ ಗ್ರಾಹಕರಿಗೆ 6.75% ಬಡ್ಡಿದರ ನೀಡುತ್ತಿದೆ. ₹20 ಲಕ್ಷ ಹೂಡಿಕೆಗೆ ಸಿಗುವ ಮೊತ್ತದ ವಿವರ ಇಲ್ಲಿದೆ.
ಹಿರಿಯ ನಾಗರಿಕರಿಗೆ
- ಹೂಡಿಕೆ ಮೊತ್ತ: ₹20,00,000
- ಬಡ್ಡಿದರ: 7.25%
- ಗಳಿಸುವ ಬಡ್ಡಿ: ₹1,82,671
- ಸುಮಾರು ₹21,82,671 (₹21.83 ಲಕ್ಷ)
ಸಾಮಾನ್ಯ ಗ್ರಾಹಕರಿಗೆ
- ಹೂಡಿಕೆ ಮೊತ್ತ: ₹20,00,000
- ಬಡ್ಡಿದರ: 6.75%
- ಗಳಿಸುವ ಬಡ್ಡಿ: ₹1,69,663
- ಒಟ್ಟು ಮೆಚ್ಯೂರಿಟಿ ಹಣ ₹21,69,663
Indian Overseas Bank
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 444 ದಿನಗಳ ಸ್ಪೆಷಲ್ ಎಫ್‌ಡಿಗೆ ಹಿರಿಯ ನಾಗರಿಕರಿಗೆ 7.10% ಹಾಗೂ ಇತರರಿಗೆ 6.60% ಬಡ್ಡಿದರ ನೀಡುತ್ತದೆ. ₹20 ಲಕ್ಷ ಹೂಡಿಕೆ ಮಾಡಿದ್ರೆ ಎಷ್ಟು ಸಿಗಲಿದೆ ಎಂಬ ಅಂದಾಜು ಇಲ್ಲಿದೆ.
ಹಿರಿಯ ನಾಗರಿಕರಿಗೆ
- ಹೂಡಿಕೆ ಮೊತ್ತ: ₹20,00,000
- ಬಡ್ಡಿದರ: 7.10%
- ಗಳಿಸುವ ಬಡ್ಡಿ: ₹1,78,762
- ಒಟ್ಟು ಮೆಚ್ಯೂರಿಟಿ ಹಣ: ₹21,78,762 (₹21.79 ಲಕ್ಷ)
ಸಾಮಾನ್ಯ ಗ್ರಾಹಕರಿಗೆ
- ಬಡ್ಡಿದರ: 6.60%
- ಗಳಿಸುವ ಬಡ್ಡಿ: ₹1,65,772
- ಒಟ್ಟು ಮೆಚ್ಯೂರಿಟಿ ಹಣ: ₹21,65,772 (₹21.66 ಲಕ್ಷ)
ಈ ಎರಡು ಬ್ಯಾಂಕ್‌ಗಳನ್ನು ಹೋಲಿಸಿದರೆ.. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿನ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರು ಸೆಂಟ್ರಲ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದರೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಿಂತ ಸುಮಾರು ₹3,909 ಹೆಚ್ಚುವರಿ ಬಡ್ಡಿ ಪಡೆಯುತ್ತಾರೆ. ಸಾಮಾನ್ಯ ಗ್ರಾಹಕರಿಗೆ ಸೆಂಟ್ರಲ್ ಬ್ಯಾಂಕ್‌ನಲ್ಲಿ ಸುಮಾರು ₹3,891 ಹೆಚ್ಚಿನ ಲಾಭ ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಅಥವಾ ಇನ್ಯಾವುದೋ ರೂಪದಲ್ಲಿ ಲಾಭದ ಆಸೆಗೆ ಹೂಡಿಕೆ ಮಾಡಿದರೆ ಹಾಕಿದ ಹಣ ವಾಪಸ್ ಸಿಕ್ಕೇ ಬಿಡುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಆದರೆ ಎಫ್‌ಡಿ ಯಾವುದೇ ಮೋಸ ವಿಲ್ಲದೇ ನಿಗಧಿತ ಹಣ ನಿಮ್ಮ ಕೈಸೇರಲಿದೆ.


