ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆ ಗಿಂಡಿದ್ದಕ್ಕೆ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಶಿಸ್ತಿನ ಪಾಠ ಮಾಡಿದ್ದಾರೆ.

ನವದೆಹಲಿ (ಮಾ.26): ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೊಮ್ಮೆ ತಮ್ಮ ವರ್ತನೆಯ ಕಾರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಿಂದೊಮ್ಮೆ ಲೋಕಸಭೆಯಲ್ಲಿ ಕಣ್ಣು ಹೊಡೆದು ವಿವಾದ ಸೃಷ್ಟಿಸಿದ್ದ ರಾಹುಲ್‌ ಗಾಂಧಿ, ಆ ಬಳಿಕ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ನೀಡಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಈ ಎಲ್ಲಾ ಘಟನೆಗಳು ಸದನದ ಒಳಗೆ ನಡೆದಾಗ ದೇಶಾದ್ಯಂತ ಚರ್ಚೆಗೂ ಗ್ರಾಸವಾಗಿತ್ತು.ಈಗ ರಾಹುಲ್‌ ಗಾಂಧಿ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆ ಗಿಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಳೆಯ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಓಂ ಬಿರ್ಲಾ ಸದನದಲ್ಲಿಯೇ ರಾಹುಲ್‌ ಗಾಂಧಿಗೆ ಶಿಸ್ತಿನ ಪಾಠ ಮಾಡಿದ್ದಾರೆ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು, ಸದನದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ, ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಯವರ ಹಳೆಯ ವೀಡಿಯೊವನ್ನು ಹಂಚಿಕೊಂಡರು, ಅದರಲ್ಲಿ ಸದನವು ಆರ್ಡರ್‌ ಅಲ್ಲಿದ್ದಾಗ ಲೋಕಸಭೆಯಲ್ಲಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯವರ ಕೆನ್ನೆ ಗಿಂಡುತ್ತಿರುವುದನ್ನು ಕಾಣಬಹುದಾಗಿದೆ.

ವೀಡಿಯೊವನ್ನು ಹಂಚಿಕೊಂಡ ಮಾಳವೀಯ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, "ಲೋಕಸಭಾ ಸ್ಪೀಕರ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮೂಲಭೂತ ಸಂಸದೀಯ ಶಿಷ್ಟಾಚಾರದ ಬಗ್ಗೆ ನೆನಪಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಈ ಬಾಲಿಶ ವ್ಯಕ್ತಿಯನ್ನು ನಮ್ಮ ಮೇಲೆ ಹೇರಿರುವುದು ನಿಜಕ್ಕೂ ದುರದೃಷ್ಟಕರ" ಎಂದು ಹೇಳಿದ್ದಾರೆ.

ಅಮಿತ್ ಮಾಳವೀಯ ಹಂಚಿಕೊಂಡ ಈ ವಿಡಿಯೋ ಮಾರ್ಚ್ 18 ರಂದು ಸದನದ ಕಲಾಪಗಳ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ. ಬುಧವಾರ ಬೆಳಗ್ಗೆ, ಸ್ಪೀಕರ್ ರಾಹುಲ್ ಗಾಂಧಿಯವರನ್ನು ನಿಯಮಗಳನ್ನು ಪಾಲಿಸುವಂತೆ ಕೇಳಿದ ನಂತರ, ವಿರೋಧ ಪಕ್ಷದ ನಾಯಕ, ಬಿರ್ಲಾ ತಮ್ಮ ಬಗ್ಗೆ "ಆಧಾರರಹಿತ" ಮಾತನಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಸದನದ ಒಳಗೆ ಹೇಳಿದ್ದಾರೆ.

ಬೋಫೋರ್ಸ್‌ ಹಗರಣದಲ್ಲಿ ಸೋನಿಯಾ ಗಾಂಧಿ ಪಾತ್ರ: ಚಿತ್ರಾ ಸುಬ್ರಮಣ್ಯಂ ಬರೆದ ಪುಸ್ತಕದಲ್ಲಿ ಹಲವು ಆರೋಪ

"ಸ್ಪೀಕರ್ ಸುಮ್ಮನೆ ಹೊರಟುಹೋದರು ಮತ್ತು ನನಗೆ ಮಾತನಾಡಲು ಬಿಡಲಿಲ್ಲ. ಅವರು ನನ್ನ ಬಗ್ಗೆ ಆಧಾರರಹಿತವಾದದ್ದನ್ನು ಹೇಳಿದರು.ಅವರು ಸದನವನ್ನು ಮುಂದೂಡಿದರು, ಅದು ಅನಗತ್ಯವಾಗಿತ್ತು. ಇದು ಪ್ರತಿಪಕ್ಷಗಳಿಗೆ ಮಾತನಾಡಲು ಸಮಯ ನೀಡುವ ಅವಕಾಶ. ನಾನು ಎದ್ದು ನಿಂತಾಗಲೆಲ್ಲಾ ನನ್ನನ್ನು ಮಾತನಾಡದಂತೆ ತಡೆಯಲಾಗುತ್ತಿದೆ. ನಾನು ಏನೂ ಮಾಡಲಿಲ್ಲ; ನಾನು ಸದ್ದಿಲ್ಲದೆ ಕುಳಿತಿದ್ದೆ. ಇಲ್ಲಿ, ಪ್ರಜಾಪ್ರಭುತ್ವಕ್ಕೆ ಸ್ಥಾನವಿಲ್ಲ... ನಾನು (ಮಹಾ) ಕುಂಭಮೇಳದ ಬಗ್ಗೆ ಮಾತನಾಡಲು ಬಯಸಿದ್ದೆ, ಮತ್ತು ನಾನು ನಿರುದ್ಯೋಗದ ಬಗ್ಗೆಯೂ ಮಾತನಾಡಲು ಬಯಸಿದ್ದೆ, ಆದರೆ ನನಗೆ ಅವಕಾಶ ನೀಡಲಿಲ್ಲ" ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಹೇಳಿದ್ದಾರೆ.

ರಾಹುಲ್ ಗಾಂಧಿ ಯಾವ ದೇಶದ ಪ್ರಜೆ? ವಿವರಣೆಗೆ ಗೃಹ ಸಚಿವಾಲಯಕ್ಕೆ ಹೈಕೋರ್ಟ್ 4 ವಾರ ಗಡುವು!

Scroll to load tweet…